Asianet Suvarna News Asianet Suvarna News

ಮೀನಾ ಪತಿ ವಿದ್ಯಾಸಾಗರ್‌ ಸಾವಿಗೆ ಕಾರಣವಾಯ್ತು ಪಾರಿವಾಳದ ಹಿಕ್ಕೆ?

ಪಾರಿವಾಳ ಪ್ರೀತಿಯ ಸಂಕೇತ. ಆದರೆ, ಪಾರಿವಾಳಗಳು ಒಬ್ಬ ವ್ಯಕ್ತಿಯ ಸಾವಿಗೆ ಕಾರಣವಾಗಬಹುದೇ? ಅಂಥದ್ದೊಂದು ಅನುಮಾನ ಈಗ ಏಳುವುದಕ್ಕೆ ಕಾರಣವೂ ಇದೆ. ಅಕಾಲಿಕವಾಗಿ ನಿಧನರಾದ ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಟಿ ಮೀನಾ ಅವರ ಪತಿ ವಿದ್ಯಾಸಾಗರ್‌ ಅವರ ಸಾವಿಗೂ ಪಾರಿವಾಳಕ್ಕೂ ಸಂಬಂಧವಿದೆ ಎಂದರೆ ನಿಮಗೆ ಅಚ್ಚರಿಯಾಗಲೂಬಹುದು.
 

Veteran actress Meena husband Vidyasagar allergy contracted by inhaling air infected by pigeon droppings san
Author
Bengaluru, First Published Jun 29, 2022, 10:42 PM IST

ಬೆಂಗಳೂರು (ಜೂನ್ 29): 90ರ ದಶಕದಲ್ಲಿ ದಕ್ಷಿಣ ಭಾರತದ ಚಿತ್ರರಂಗವನ್ನು (South India Film) ಆಳಿದ ನಾಯಕಿಯರಲ್ಲಿ ಒಬ್ಬರಾದ ಮೀನಾ (Meena) ಅವರಿಗೆ ಮಂಗಳವಾರ ದುರಂತದ ದಿನ. ಅವರ ಪತಿ ಬೆಂಗಳೂರು ಮೂಲದ ಉದ್ಯಮಿ ವಿದ್ಯಾಸಾಗರ್ (Vidyasagar ) ವಿಧಿವಶರಾದರು.

ತೀವ್ರ ಶ್ವಾಸಕೋಶದ ಸಮಸ್ಯೆ ( severe lung infection)  ಎದುರಿಸುತ್ತಿದ್ದ ವಿದ್ಯಾಸಾಗರ್‌, ಕಳೆದ ಕೆಲವು ದಿನಗಳಿಂದ ಚೆನ್ನೈನ (Chennai) ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆಯ ಮೂಲಗಳ ಪ್ರಕಾರ, ಕಳೆದ ಕೆಲವು ವರ್ಷಗಳಿಂದ ಅವರು ಶ್ವಾಸಕೋಶದ ಸಮಸ್ಯೆಯನ್ನು ಎದುರಿಸುತ್ತಿದ್ದರು' ಎಂದು ಹೇಳಿದೆ. ಅದಲ್ಲದೆ, ಅವರ ಶ್ವಾಸಕೋಶದ ಅಲರ್ಜಿಗೆ ಕಾರಣವಾಗಿದ್ದು ಪಾರಿವಾಳದ ಹಿಕ್ಕೆ (pigeon droppings)  ಎನ್ನುವುದು ಆಘಾತಕಾರಿ ಅಂಶ. ಪಾರಿವಾಳದ ಹಿಕ್ಕೆಯ ವಾಸನೆಯ ಗಾಳಿಯನ್ನು ಅವರು ಹಲವು ವರ್ಷಗಳ ಕಾಲ ಉಸಿರಾಡಿದ್ದ ಕಾರಣಕ್ಕೆ ಅವರಿಗೆ ಶ್ವಾಸಕೋಶದ ಅಲರ್ಜಿ ಉಂಟಾಗಿತ್ತು ಎನ್ನುವ ಮಾಹಿತಿ ಬಹಿರಂಗವಾಗಿದೆ.

ಈ ವರ್ಷದ ಜನವರಿಯಲ್ಲಿ ಇಡೀ ಕುಟುಂಬ ಕೋವಿಡ್‌-19 ಸೋಂಕಿಗೆ ತುತ್ತಾಗಿತ್ತು. ಇದರ ಬೆನ್ನಲ್ಲಿಯೇ ವಿದ್ಯಾಸಾಗರ್‌ ಅವರ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿತ್ತು ಎನ್ನಲಾಗಿದೆ. ವಿದ್ಯಾಸಾಗರ್‌ ಅವರ ಪ್ರಗತಿಯಲ್ಲಿ ಏರಿಳಿತ ಆಗುತ್ತಲೇ ಇದ್ದರೂ, ಶ್ವಾಸಕೋಶದ ಅಲರ್ಜಿ ಕಳೆದ ಎರಡು ವಾರಗಳಲ್ಲಿ ಇನ್ನಷ್ಟು ಬಿಗಡಾಯಿಸಿ ಅವರ ಸಾವಿಗೆ ಕಾರಣವಾಗಿದೆ.

ಕೆಲವು ವಾರಗಳ ಹಿಂದೆ ವೈದ್ಯರು ವಿದ್ಯಾಸಾಗರ್ ಅವರ ಶ್ವಾಸಕೋಶವನ್ನು ಕಸಿ ಮಾಡಲು ನಿರ್ಧರಿಸಿದರು. ಆದರೆ ದಾನಿಯನ್ನು ಪಡೆಯುವಲ್ಲಿ ತೊಂದರೆ ಉಂಟಾಗಿತ್ತು ಎಂದು ಮೂಲಗಳು ತಿಳಿಸಿವೆ. ಏಕೆಂದರೆ ಬ್ರೇನ್ ಡೆಡ್‌ ಆಗಿರುವ ರೋಗಿಗಳಿಂದದ ಮಾತ್ರವೇ ಇಂಥ ಶ್ವಾಸಕೋಶಗಳನ್ನು ಪಡೆದುಕೊಳ್ಳಬೇಕಿತ್ತು. ಇದಕ್ಕಾಗಿ ಕಾಯುತ್ತಿದ್ದವರ ಪಟ್ಟಿ ದೊಡ್ಡದಿತ್ತು. ಆ ಬಳಿಕ ವೈದ್ಯರು ನಂತರ ಔಷಧಿಗಳ ಮೂಲಕ ಸ್ಥಿತಿಯನ್ನು ಗುಣಪಡಿಸಲು ಪ್ರಯತ್ನಿಸಿದರು ಆದರೆ ದುರದೃಷ್ಟವಶಾತ್ ಅದು ಸಾಧ್ಯವಾಗಲಿಲ್ಲ. ವಿದ್ಯಾಸಾಗರ್‌ ಹಾಗೂ ಮೀನಾ ವಾಸ ಮಾಡುತ್ತಿದ್ದ ಮನೆಯ ಬಳಿ ಸಾಕಷ್ಟು ಪಾರಿವಾಳಗಳಿವೆ. ಈ ಪಾರಿವಾಳಗಳ ಹಿಕ್ಕೆಗಳು ಹಾಗೂ ಅದರ ವಾಸನೆಯಿಂದ ವಿದ್ಯಾಸಾಗರ್‌ಗೆ ಅಲರ್ಜಿ ಉಂಟಾಗಿತ್ತು ಎಂದು ತಮಿಳುನಾಡಿನ ಮಾಧ್ಯಮಗಳು ವರದಿ ಮಾಡಿವೆ.

ಪಾರಿವಾಳಗಳ ಹಿಕ್ಕೆಗಳನ್ನು ಉಸಿರಾಡುವ ಮೂಲಕ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಎದುರಾಗಬಹುದು. ಇದು ಅಲರ್ಜಿ ಉಂಟು ಮಾಡುವ ಸಾಧ್ಯತೆ ಅಧಿಕ ಎಂದು ವೈದ್ಯಕೀಯ ವರದಿಗಳು ಹೇಳಿವೆ. ವಿವಿಧ ಅಲರ್ಜಿಯ ಕಾರಣಗಳನ್ನು ಅಧ್ಯಯನ ಮಾಡುವ ವಿಶ್ವ ಅಲರ್ಜಿ ಸಂಸ್ಥೆಯು ಪಾರಿವಾಳದ ಗರಿಗಳು ಮತ್ತು ಹಿಕ್ಕೆಗಳು ವಿವಿಧ ಅಲರ್ಜಿಗಳು ಮತ್ತು ಸೋಂಕುಗಳನ್ನು ಉಂಟುಮಾಡುವ ಬಹಳಷ್ಟು ಸೋಂಕುಗಳನ್ನು ಹೊಂದಿರುತ್ತವೆ ಎಂದು ಹೇಳಿದೆ.

ನಟಿ ಮೀನಾ ಪತಿ ನಿಧನಕ್ಕೆ ಸಿನಿ ಗಣ್ಯರ ಕಂಬನಿ; ಮಧ್ಯಾಹ್ನ 2ಗಂಟೆಗೆ ವಿದ್ಯಾಸಾಗರ್ ಅಂತ್ಯಕ್ರಿಯೆ

ಪಾರಿವಾಳದ ಹಿಕ್ಕೆಗಳು ರಿನಿಟಿಸ್, ಸೈನುಟಿಸ್ ಮತ್ತು ಕಾಂಜಂಕ್ಟಿವಿಟಿಸ್‌ನಂತಹ ಅಲರ್ಜಿಯನ್ನು ಉಂಟುಮಾಡಬಹುದು ಎಂದು ಸಂಸ್ಥೆಯು ನಡೆಸಿದ ಸಂಶೋಧನೆಯು ಕಂಡುಹಿಡಿದಿದೆ. ಕೆಟ್ಟ ಪರಿಸ್ಥಿತಿಗಳಲ್ಲಿ, ಸೋಂಕಿತ ಜನರು ತಮ್ಮ ಶ್ವಾಸಕೋಶದ ಕಾರ್ಯನಿರ್ವಹಣೆಯೊಂದಿಗೆ ಸಮಸ್ಯೆಗಳನ್ನು ಎದುರಿಸಬಹುದು ಮತ್ತು ಮೀನಾ ಅವರ ಪತಿ ವಿದ್ಯಾಸಾಗರ್ ಅವರಲ್ಲೂ ಅದೇ ಸಂಭವಿಸಿದೆ ಎಂದು ನಂಬಲಾಗಿದೆ.ಆದರೆ, ವಿದ್ಯಾಸಾಗರ್ ಸಾವಿಗೆ ಕಾರಣ ಎಂದು ಪಾರಿವಾಳದ ಹಿಕ್ಕೆಯ ಸುದ್ದಿಗೆ ಕುಟುಂಬವು ಇನ್ನೂ ಪ್ರತಿಕ್ರಿಯಿಸಿಲ್ಲ. ಸಾವಿಗೆ ಸಂಬಂಧಿಸಿದಂತೆ ಕುಟುಂಬವು ಪ್ರತಿಕ್ರಿಯಿಸಿ ಯಾವುದೇ ಪತ್ರಿಕಾ ಪ್ರಕಟಣೆಯನ್ನು ನೀಡಿಲ್ಲ. ಹಾಗೇನಾದರೂ ನೀಡಿದಲ್ಲಿ ಈ ಕುರಿತಾಗಿ ಸ್ಪಷ್ಟನೆ ಬರಬಹುದು ಎನ್ನಲಾಗಿದೆ.

ದಕ್ಷಿಣ ಭಾರತದ ಖ್ಯಾತ ನಟಿ ಮೀನಾ ಪತಿ ವಿದ್ಯಾಸಾಗರ್‌ ಇನ್ನಿಲ್ಲ

ನಟಿ ಮೀನಾ ದಕ್ಷಿಣ ಭಾರತದ ಖ್ಯಾತ ನಟಿ. ತಮಿಳು, ತೆಲುಗು, ಕನ್ನಡ, ಮಲಯಾಳಂ ಭಾಷೆಗಳಲ್ಲಿ ನಟಿಸಿರುವ ಮೀನಾ 90 ದಶಕದ ಬಹುಬೇಡಿಯ ನಟಿ. ಬಾಲನಟಿಯಾಗಿ ಸಿನಿಮಾರಂಗ ಪ್ರವೇಶ ಮಾಡಿದ ನಟಿ ಮೀನಾ ಬಳಿಕ ಸ್ಟಾರ್ ಆಗಿ ಮೆರೆದರು. ದಕ್ಷಿಣ ಭಾರತದ ಅನೇಕ  ಸ್ಟಾರ್ ನಟರ ಜೊತೆ ಮೀನಾ ತೆರೆ ಹಂಚಿಕೊಂಡಿದ್ದಾರೆ.  2009ರಲ್ಲಿ ಮೀನಾ ಬೆಂಗಳೂರು ಮೂಲದ ಉದ್ಯಮಿ ವಿದ್ಯಾಸಾಗರ್ ಅವರ ಜೊತೆ ಹಸಮಣೆ ಏರಿದರು. ವಿದ್ಯಾಸಾಗರ್ ಮತ್ತು ಮೀನಾ ದಾಂಪತ್ಯಕ್ಕೆ ನೈನಿಕಾ ಎನ್ನುವ ಮುದ್ದಾದ ಮಗಳಿದ್ದಾಳೆ.    

Follow Us:
Download App:
  • android
  • ios