ನಟಿ ವರಲಕ್ಷ್ಮಿ ಶರತ್‌ಕುಮಾರ್ ತನಗೆ ಬಾಲ್ಯದಲ್ಲಿ ಸಂಬಂಧಿಕರಿಂದ ಲೈಂಗಿಕ ಕಿರುಕುಳ ಆಗಿದ್ದ ಬಗ್ಗೆ ನೃತ್ಯ ಕಾರ್ಯಕ್ರಮದಲ್ಲಿ ಬಹಿರಂಗಪಡಿಸಿದ್ದಾರೆ. ಮಕ್ಕಳಿಗೆ ಒಳ್ಳೆಯ ಮತ್ತು ಕೆಟ್ಟ ಸ್ಪರ್ಶದ ಬಗ್ಗೆ ತಿಳಿಸುವುದು ಮುಖ್ಯವೆಂದು ಅವರು ಪೋಷಕರಿಗೆ ಮನವಿ ಮಾಡಿದರು. #MeToo ಚಳುವಳಿಯ ನಂತರ ಅನೇಕ ನಟಿಯರು ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದಾರೆ. ವರಲಕ್ಷ್ಮಿ ಅವರು ತಮಿಳಿನ ಡ್ಯಾನ್ಸ್ ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿದ್ದಾರೆ.
ನಟಿ ವರಲಕ್ಷ್ಮಿ ಶರತ್‌ಕುಮಾರ್ ತಮ್ಮ ಜೀವನದಲ್ಲಿ ಅನುಭವಿಸಿದ ಲೈಂಗಿಕ ಕಿರುಕುಳದ ಬಗ್ಗೆ ನೃತ್ಯ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದಾರೆ. ತಾನು ಚಿಕ್ಕವಳಿದ್ದಾಗ ಸಂಬಂಧಿಕರು ಕೀಟಲೆ ಮಾಡುತ್ತಿದ್ದರು. ಇದೇ ವೇಳೆ 6 ಜನರು ಲೈಂಗಿಕವಾಗಿ ಕಿರುಕುಳ ನೀಡಿದ್ದಾರೆ. ಹಾಗಾಗಿ, ಮಕ್ಕಳಿಗೆ ಒಳ್ಳೆಯ ಸ್ಪರ್ಶ ಮತ್ತು ಕೆಟ್ಟ ಸ್ಪರ್ಶದ ಬಗ್ಗೆ ಕಲಿಸಬೇಕು ಎಂದು ಪೋಷಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಲೈಂಗಿಕ ಕಿರುಕುಳದ ಬಗ್ಗೆ #MeToo ಆಂದೋಲನದ ನಂತರ, ಅನೇಕ ನಟಿಯರು ತಮಗಾದ ನೋವಿನ ಅನುಭವಗಳನ್ನು ಬಹಿರಂಗಪಡಿಸುತ್ತಿದ್ದಾರೆ. ಕಾಸ್ಟಿಂಗ್ ಕೌಚ್‌ನಿಂದಾಗಿ ತಾವು ಸಾಕಷ್ಟು ತೊಂದರೆಗಳನ್ನು ಎದುರಿಸಿದ್ದೇವೆ ಎಂದು ಅವರು ಭಾವುಕರಾಗಿದ್ದಾರೆ. ಆದರೆ, ಇದೀಗ ಹಿರಿಯ ನಟ ಶರತ್ ಕುಮಾರ್ ಅವರ ಪುತ್ರಿ ವರಲಕ್ಷ್ಮಿ, ಕೇವಲ ಚಲನಚಿತ್ರಗಳಲ್ಲಿ ನಟಿಸುವುದಲ್ಲದೆ, ಟಿವಿ ಕಾರ್ಯಕ್ರಮಗಳಲ್ಲಿಯೂ ಸದ್ದು ಮಾಡುತ್ತಿದ್ದಾರೆ. ಇವರು ಡ್ಯಾನ್ಸ್ ಜೋಡಿ ಡ್ಯಾನ್ಸ್ (Dance Jodi Dance host ZEE5 tamil) ರೀಲೋಡೆಡ್ 3 (ತಮಿಳು) ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿದ್ದಾರೆ.
ವರಲಕ್ಷ್ಮಿ ಅವರು ಮಾತನಾಡುತ್ತಾ..., ನಿಮ್ಮ ನೋವು ನನಗೆ ಗೊತ್ತು. ನನ್ನ ಹೆತ್ತವರು ಕೆಲಸದಲ್ಲಿ ನಿರತರಾಗಿದ್ದರು. ಆದ್ದರಿಂದ ನಾನು ಮಗುವಾಗಿದ್ದಾಗ ಅವರು ನನ್ನನ್ನು ಮನೆಯಲ್ಲಿಯೇ ಬಿಡುತ್ತಿದ್ದರು. ಆಗ ನನ್ನನ್ನು ಕೆಲವು ದಿನಗಳ ಕಾಲ ಸಂಬಂಧಿಕರ ಮನೆಗೆ ಕಳುಹಿಸಲಾಯಿತು. ಈ ವೇಳೆ ಐದು ಅಥವಾ ಆರು ಜನರು ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದರು. ನಟಿ ವರಲಕ್ಷ್ಮಿ ಶರತ್‌ಕುಮಾರ್ ತಮ್ಮ ಜೀವನದಲ್ಲಿ ಅನುಭವಿಸಿದ ಲೈಂಗಿಕ ಕಿರುಕುಳದ ಬಗ್ಗೆ ರೋಮಾಂಚಕಾರಿಯಾಗಿ ಮಾತನಾಡಿದ್ದಾರೆ. ತಾನು ಮಗುವಾಗಿದ್ದಾಗ ಸಂಬಂಧಿಕರಿಂದ ಕಿರುಕುಳಕ್ಕೊಳಗಾಗಿದ್ದೆ ಎಂದು ವೇದಿಕೆ ಮೇಲೆ ಹೇಳಿಕೊಂಡು, ತಮ್ಮಲ್ಲಿದ್ದ ನೋವನ್ನು ಹೊರಗೆ ಹಾಕಿದ್ದಾರೆ.
ಇದನ್ನೂ ಓದಿ: ಅಪ್ಪ ಸ್ಟಾರ್ ಆದ್ರೂ 2500 ರೂ.ಗೋಸ್ಕರ ರೋಡ್‌ನಲ್ಲಿ ಡಾನ್ಸ್ ಮಾಡಿದೆ: ಯಾರಿಗೂ ಗೊತ್ತಿಲ್ಲದ ರಹಸ್ಯ ಬಿಚ್ಚಿಟ್ಟ ವರಲಕ್ಷ್ಮಿ!
ನಟಿ ವರಲಕ್ಷ್ಮೀ ಶರತ್ ಕುಮಾರ್ ಅವರು, ದಕ್ಷಿಣ ಭಾರತ ಚಿತ್ರರಂಗದ ನಟಿಯಾಗಿದ್ದು, ಕನ್ನಡ, ತೆಲುಗು, ಮಲೆಯಾಳಂ, ತಮಿಳು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಕನ್ನಡದಲ್ಲಿ ಮಾಣಿಕ್ಯ ಸಿನಿಮಾದಲ್ಲಿ ನಟ ಸುದೀಪ್‌ಗೆ ಜೋಡಿಯಾಗಿದ್ದಾರೆ. ನಂತರ ರನ್ನ ಸಿನಿಮಾದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದಾದ ನಂತರ ಅರ್ಜುನ್ ಸರ್ಜಾ ಅವರ ವಿಸ್ಮಯ, ಚಿರಂಜೀವಿ ಸರ್ಜ ಅವರ ರಣಂ ಸಿನಿಮಾದಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ಕಿಚ್ಚಬ ಸುದೀಪ್ ಅವರ ಮ್ಯಾಕ್ಸ್ ಸಿನಿಮಾದಲ್ಲಿ ಸಿಐಡಿ ಇನ್ಸ್‌ಪೆಕ್ಟರ್ ರೂಪಾ ಆಗಿ ಭಾರೀ ಸದ್ದು ಮಾಡಿದ್ದಾರೆ. ಆದರೆ, ಅವರ ಜೀವನದಲ್ಲಿ ನಡೆದ ಕಹಿ ಘಟನೆಯನ್ನು ಹೊರ ಹಾಕುವ ಮೂಲಕ ಹೆಣ್ಣು ಮಕ್ಕಳನ್ನು ಯಾವ ರೀತಿ ಬೆಳೆಸಬೇಕು ಎಂಬ ಸಲಹೆಯನ್ನು ಕೊಟ್ಟಿದ್ದಾರೆ.
ಇದನ್ನೂ ಓದಿ: ಗಂಡ ಮತ್ತು ಅನಾಥ ಮಕ್ಕಳೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡ ವರಲಕ್ಷ್ಮಿ ಶರತ್‌ಕುಮಾರ್: ಮಾಣಿಕ್ಯ ನಟಿಯ ವಯಸ್ಸೆಷ್ಟು?
