ಭಾರತದ ಖ್ಯಾತ ವಸ್ತ್ರ ವಿನ್ಯಾಸಕಿ ಹಾಗೂ ನಟಿ ಮಸಾಬಾ ನೇಮ್‌ ಆ್ಯಂಡ್ ಫೇಮ್‌ ಇದ್ದ ನೀನಾ ಗುಪ್ತಾ ಹಾಗೂ ವೆಸ್ಟ್ ಇಂಡೀಸ್ ಕ್ರಿಕೆಟಿಗ ವಿವಿಯನ್ ರಿಚರ್ಡ್ಸ್ ಮಗಳು. ವೆಸ್ಟ್ ಇಂಡೀಸ್ ತಂದೆಯಾಗಿರುವುದರಿಂದ ಸಹಜವಾಗಿಯ ತ್ವಚೆ ಬಣ್ಣ ಬೇರೆ ರೀತಿಯೇ ಇದೆ. ಇದಕ್ಕೆ ಬಾಲ್ಯದಿಂದಲೂ ಜನರು ಹೀಯಾಳಿಸುತ್ತಿದ್ದರಂತೆ. ಸಿಂಗಲ್ ಪೇರೆಂಟ್‌ನಿಂದ ಬೆಳೆಯುತ್ತಿದ್ದ ಮಸಾಬಾಗೆ ಚುಚ್ಚು ಮಾತುಗಳೇ ಬಾಲ್ಯವನ್ನು ಹಾಳು ಮಾಡಿತ್ತಂತೆ. 'ಕಪ್ಪಾಗಿದ್ದಾಳೆ' ಎಂದು ಬಾಲ್ಯದಿಂದಲೂ ಕೇಳಿ ಕೇಳಿ ಕುಗ್ಗಿಹೋಗಿದ್ದ ನಟಿ, ಹೇಗೆ ಜನರನ್ನು ಎದುರಿಸಲು ನಿರ್ಧರಿಸಿದರು ಎಂದು ಕೆಲವು ದಿನಗಳ ಹಿಂದೆ ನೀಡಿದ ಖಾಸಗಿ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. 

ಸೆಲೆಬ್ರಿಟಿಗಳ್ಯಾಕೆ ಈ ಪರಿ ಮಾಲ್ಡೀವ್ಸ್‌ಗೆ ಮುಗಿ ಬೀಳ್ತಿದ್ದಾರೆ! 

'ಎಲ್ಲವುಕ್ಕಿಂತ ನನಗೆ ಹೆಚ್ಚಿನ ನೋವು ತಂದು ಕೊಟ್ಟಿದ್ದು ನನ್ನ ಶಾಲಾ ದಿನಗಳು. ಬೆನ್ನೆಲುಬಾಗಿ ನಿಲ್ಲಬೇಕಿದ್ದ ಸ್ನೇಹಿತರೇ ನನಗೆ ಮುಳುವಾದರು.  ನಾನು ಏನು ಓದಬೇಕು, ಕಾರ್ಯಕ್ರಮಕ್ಕೆ ಯಾವ ರೀತಿಯ ಬಟ್ಟೆ ಧರಿಸಬೇಕು ಅಥವಾ ತಾವು ಗೇಮ್ ಆಡಬೇಕು ಎಂದು ಕೇಳಿದಾಗಲೆಲ್ಲಾ ನನ್ನ ಬಣ್ಣದ ಬಗ್ಗೆ ಮೊದಲು ಮಾತನಾಡುತ್ತಿದ್ದರು.  ನನಗೆ ಇದು ವಿಚಿತ್ರ ಎಂದೆನಿಸುತ್ತಿತ್ತು. ನನ್ನ ಬಣ್ಣದ ಚಿಂತೆಗಿಂತ ನನ್ನ ತಾಯಿ ಜೊತೆಗೆ ಬೆಳೆದೆ ಸಂಬಂಧ ಹೇಗಿತ್ತು ಎಂಬುದು ನನಗೆ ಚಿಂತೆಯಾಗಿತ್ತು. ಚಿಕ್ಕ ಹುಡುಗಿ ಆಗಿದ್ದಾಗಿಂದಲೂ ಎಲ್ಲರೂ ನನ್ನನ್ನು ಅನೈತಿಕ ಸಂಬಂದಕ್ಕೆ ಹುಟ್ಟಿದವಳು ಎಂದೇ ಹೇಳುತ್ತಿದ್ದರು. ಹುಡುಗರು ನನಗೆ ಅದನ್ನೇ ನಿಕ್ ನೇಮ್‌ ಆಗಿಟ್ಟರು. ಇದೆಲ್ಲಾ ನನ್ನ ತಾಯಿ ಜೊತೆ ಚರ್ಚಿಸುತ್ತಿದ್ದೆ. ಆ ತಿಳುವಳಿಕೆಯೇ ನನ್ನನ್ನು ಕಾಪಾಡಿತು,' ಎಂದು ಮಸಾಬಾ ಮಾತನಾಡಿದ್ದಾರೆ. 

 

 
 
 
 
 
 
 
 
 
 
 
 
 
 
 

A post shared by Masaba (@masabagupta)

ಕ್ರೂರವಾದ ದಿನಗಳು?:
'ಶಾಲೆಯಲ್ಲಿ ನಾನು ಹೆಚ್ಚಾಗಿ ಟೆನ್ನಿಸ್ ಆಟವಾಡುತ್ತಿದ್ದೆ. ರಾಜ್ಯ ಮಟ್ಟದಲ್ಲಿಯೂ ಸ್ಪರ್ಧಿಸುತ್ತಿದ್ದೆ. ಅದಕ್ಕೆ ಶಾಲೆಗೆ ಲೇಟ್‌ ಆಗಿ ಹೋದರೂ ಬೈಯುತ್ತಿರಲಿಲ್ಲ. ಬ್ಯಾಗ್‌ನಲ್ಲಿ ನಾನು ಕ್ಯಾರಿ ಮಾಡುತ್ತಿದ್ದ ಬಟ್ಟೆನ್ನೆಲ್ಲಾ ಹುಡುಗರು ತೆಗೆದು ಎಸೆದು ಆಟವಾಡುತ್ತಿದ್ದರು. ನಾನು ದಪ್ಪಗಿದ್ದ ಕಾರಣ ನನ್ನ ಚಡ್ಡಿ ಬಗ್ಗೆ ಕಾಮೆಂಟ್ ಮಾಡುತ್ತಿದ್ದರು. ಕಪ್ಪು ಕಪ್ಪೆಂದು ಹಿಯಾಳಿಸುತ್ತಿದ್ದರು,' ಎಂದು ತಮ್ಮ ಬಾಲ್ಯದ ಕ್ರೂರ ದಿನಗಳ ನೋವನ್ನು ತೋಡಿಕೊಂಡಿದ್ದಾಳೆ.

ಕನ್ನಡತಿ ರಂಜಿನಿ- ಕಿರಣ್‌ಗೆ ರಿಯಲ್‌ನಲ್ಲೂ ಲವ್ವಿಡವ್ವಿನಾ! 

ತಮ್ಮ ತಾಯಿ, ಬಾಲಿವುಡ್ ತಾರೆ ನೀನಾ ಗುಪ್ತಾ ಸಪೋರ್ಟ್‌ಯಿಂದ ಇಂದು ಚಿತ್ರರಂಗದಲ್ಲಿ ಹಾಗೂ ಫ್ಯಾಷನ್ ಲೋಕದಲ್ಲಿ ವಾಸಾಬಾ ಸಾಕಷ್ಟು ಹೆಸರು ಮಾಡಿದ್ದಾರೆ.