ಅಮೆರಿಕನ್ ಗಾಯಕ, ನಟ ಮಾಜಿ ಪತ್ನಿ ಡಿಟಾ ವೋನ್ ಟೀಸೆಯಿಂದ ದೌರ್ಜನ್ಯ ಆರೋಪವನ್ನು ಎದುರಿಸುತ್ತಿರುವ ಸಂದರ್ಭದಲ್ಲಿಯೇ ಅಮೆರಿಕನ್ ಖ್ಯಾತ ಗಾಯಕಿ ಬೆಚ್ಚಿ ಬೀಳಿಸೋ ಸತ್ಯವನ್ನು ಬಿಚ್ಚಿಟ್ಟಿದ್ದಾರೆ.

ಗಾಯಕ ಮಾರ್ಲಿನ್ ಮನೆಯೊಳಗೊಂದು ರೇಪ್ ರೂಂ ಇದೆ ಎಂದಿದ್ದಾರೆ ಖ್ಯಾತ ಗಾಯಕಿ ಫೋಯೆಬ್ ಬ್ರಿಡ್ಜರ್ಸ್. ಇದೀಗ ನಟನ ವಿರುದ್ಧ ಕೇಳಿ ಬಂದ ಆರೋಪಕ್ಕೆ ಇನ್ನಷ್ಟು ಪುಷ್ಟಿ ಸಿಕ್ಕಿದಂತಾಗಿದೆ.

ಭಾರತದ ರೈತರ ಬಗ್ಗೆ ಮಾತನಾಡಿದ್ದಕ್ಕೆ ಬ್ರಿಟಿಷ್ ನಟಿಗೆ ರೇಪ್ ಬೆದರಿಕೆ

ರಾಕ್ ಸಂಗೀತಗಾರ ಮರ್ಲಿನ್ ಮ್ಯಾನ್ಸನ್ ತನ್ನ ಮನೆಯಲ್ಲಿ ಅತ್ಯಾಚಾರ ಕೊಠಡಿಯ ಬಗ್ಗೆ ವಿವರಿಸಿದ್ದನ್ನು ನೆನಪಿಸಿದ್ದಾರೆ ಗಾಯಕಿ ಫೋಯೆಬ್ ಬ್ರಿಡ್ಜರ್ಸ್. "ನಾನು ಕೆಲವು ಸ್ನೇಹಿತರೊಂದಿಗೆ ಮರ್ಲಿನ್ ಮ್ಯಾನ್ಸನ್ ಮನೆಗೆ ಹೋಗಿದ್ದೆ. ನಾನು ಅವರ ದೊಡ್ಡ ಅಭಿಮಾನಿಯಾಗಿದ್ದೆ. ಅವನು ತನ್ನ ಮನೆಯಲ ಕೋಣೆಯನ್ನು 'ರೇಪ್ ರೂಮ್' ಎಂದು ಹೇಳಿದ್ದರು. ನಾನು ಅದನ್ನು ತಮಾಷೆ ಎಂದುಕೊಂಡಿದ್ದೆ ಎಂದಿದ್ದಾರೆ.

ಮ್ಯಾನ್ಸನ್ ವಿರುದ್ಧ ಅನೇಕ ಲೈಂಗಿಕ ಕಿರುಕುಳ ಆರೋಪಗಳ ಹಿನ್ನೆಲೆಯಲ್ಲಿ ಫೋಯೆಬ್ ಪಾತನಾಡಿದ್ದಾರೆ. ಅವರ ಮಾಜಿ ಪ್ರೇಯಸಿ ಇವಾನ್ ರಾಚೆಲ್ ವುಡ್ ಅವರೂ ಸೇರಿದಂತೆ, ರಾಕ್ ಸಂಗೀತಗಾರನ ವಿರುದ್ಧ ಹಲವರು ದೌರ್ಜನ್ಯ ಆರೋಪ ಮಾಡಿದ್ದಾರೆ.