ಪ್ರತಿ ಬಾರಿ ನಾನು ಭಾರತದ ರೈತ ಪ್ರತಿಭಟನೆ ಬಗ್ಗೆ ಮಾತನಾಡಿದಾಗಲೂ ನನಗೆ ಅತ್ಯಾಚಾರ ಮತ್ತು ಕೊಲೆ ಬೆದರಿಕೆ ಬಂದಿದೆ ಎಂದು ಟಾಪ್ ಬ್ರಿಟಿಷ್ ನಟಿ ಹೇಳಿದ್ದಾರೆ. ನಾನ್ಯಾವಾಗಲೂ ರೈತರ ಪರವಾಗಿರುತ್ತೇನೆ ಎಂದಿದ್ದಾರೆ.

ಇನ್‌ಸ್ಟಾಗ್ರಾಂ ಮೂಲಕ ಪೋಸ್ಟ್ ಮಾಡಿ ಭಾರತದಲ್ಲಿರುವ ರೈತರ ಪರವಾಗಿ ಮಾತನಾಡಿದಾಗಲೆಲ್ಲ ನನಗೆ ಕೊಲೆ ಬೆದರಿಕೆ ಬಂದಿದೆ. ನಾನು ಒಬ್ಬಳು ಮನುಷ್ಯಳು ಎಂಬುದನ್ನು ಮರೆಯಬೇಡಿ ಎಂದಿದ್ದಾರೆ.

ರೈತ ಹೋರಾಟದಲ್ಲಿ ವಿದೇಶಿ ಪಿತೂರಿ ಬಟಾ ಬಯಲು; ತನಿಖಾ ಸಂಸ್ಥೆಗಳಿಂದ ಮಾಹಿತಿ!

ಭಾರತದಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ವಿದೇಶಿ ಸೆಲೆಬ್ರಿಟಿಗಳಿಂದ ಭಾರೀ ಬೆಂಬಲ ವ್ಯಕ್ತವಾಗುತ್ತಿದ್ದು, ವಿದೇಶಿ ಪಾಪ್ ಸಿಂಗರ್ ರಿಹಾನಾ ಸೇರಿ ಪ್ರಮುಖ ಸೆಲೆಬ್ರಿಟಿಗಳು ಟ್ವೀಟ್ ಮಾಡಿದ್ದಾರೆ.

ಆಂತರಿಕ ವಿಚಾರಕ್ಕೆ ಅನಗತ್ಯವಾಗಿ ಮೂಗು ತೂರಿಸಬೇಡಿ ಎಂದು ಭಾರತದ ಸೆಲೆಬ್ರಿಟಿಗಳು ಟ್ವೀಟ್ ಮೂಲಕ ಎದುರುತ್ತರ ಕೊಟ್ಟಿದ್ದಾರೆ. ಇದೀಗ ಬ್ರಿಟಿಷ್ ನಟಿಯೂ ರೈತ ಪ್ರತಿಭಟನೆ ಬಗ್ಗೆ ಮಾತನಾಡಿದ್ದಾರೆ.