ಸರಿಯಾದ ಸಮಯಕ್ಕೆ ಆಂಬುಲೆನ್ಸ್ ಸಿಗದೇ ಹೆರಿಗೆಯಾದ ಕೂಡಲೇ ತಾಯಿ, ಮಗು ಸಾವನ್ನಪ್ಪಿದ್ದಾರೆ. ಹೆರಿಗೆಯಾದ ತಕ್ಷಣ ತಾಯಿ- ಮಗುವಿನ ಆರೋಗ್ಯ ಗಂಭೀರವಾಗಿದ್ದರಿಂದ ಕೂಡಲೇ ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕಾಗಿತ್ತು. ಆದರೆ ಆಂಬುಲೆನ್ಸ್ ಸಿಗದೇ ಸಾವನ್ನಪ್ಪಿದ್ದಾರೆ.

 

ಮುಂಬೈಯಿಂದ 600 ಕಿ.ಮಿ ದೂರವಿರುವ ಹಿಂಗೊಳಿ ಗ್ರಾಮದಲ್ಲಿ ವಾಸವಿರುವ 25 ವರ್ಷದ ಪೂಜಾ ಹೆರಿಗೆಯಾದ ಕೂಡಲೇ ತಾಯಿ, ಮಗು ಸಾವನ್ನಪ್ಪಿದ್ದಾರೆ. ಎರಡೇ ಚಿತ್ರಕ್ಕೆ ಮರಾಠಿಯಲ್ಲಿ ಪಾಪ್ಯುಲರ್ ನಟಿಯಾಗುತ್ತಾರೆ. ಗರ್ಭಿಣಿಯಾದ ನಂತರ ಕೆಲಸದಿಂದ ಕೊಂಚ ಬ್ರೇಕ್ ತೆಗೆದುಕೊಂಡು ಆರೋಗ್ಯದ ಬಗ್ಗೆ ಹೆಚ್ಚಾಗಿ ಕಾಳಜಿ ವಹಿಸುತ್ತಾರೆ.

ಖ್ಯಾತ ನಟನ ದಾಂಪತ್ಯದಲ್ಲಿ ಬಿರುಕು; ಡಿವೋರ್ಸ್ ಮೊರೆ ಹೋದ ದಂಪತಿ!

 

ಭಾನುವಾರ ಮಧ್ಯರಾತ್ರಿ 2 ಗಂಟೆಗೆ ಪೂಜಾಳಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಮನೆ ಹತ್ತಿರವಿರುವ ಹೆಲ್ತ್ ಕೇರ್ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡುತ್ತಾರೆ. ಆದರೆ ದುರಾದೃಷ್ಟವಶಾತ್ ಮಗು ಹುಟ್ಟಿದ ಕೆಲವೇ ನಿಮಿಷದಲ್ಲಿ ಸಾವಿಗೀಡಾಗುತ್ತದೆ. ಸೋಮವಾರ (21 ಅಕ್ಟೋಬರ್) ಬೆಳಿಗ್ಗೆ ಪೂಜಾಳ ಆರೋಗ್ಯದಲ್ಲಿ ಏರು ಪೇರು ಕಂಡಿದ್ದು ತಕ್ಷಣವೇ ವೈದ್ಯರು ಮತ್ತೊಂದು ಆಸ್ಪತ್ರೆಗೆ ಕರೆದೊಯ್ಯಲು ಸೂಚಿಸುತ್ತಾರೆ.

ಕಲ್ಕಿ ಕೊಚ್ಚಿನ್ 6 ತಿಂಗಳ ಹೊಟ್ಟೆ ನೋಡಿ ಕರೀನಾ ಹಿಂಗಾ ಕಮೆಂಟ್ ಮಾಡೋದು!

ಮುಂಬೈಯಿಂದ ಸುಮಾರು 600 ಕಿ.ಮಿ ದೂರದಲ್ಲಿರುವ ಹಿಂಗೊಳಿ ಗ್ರಾಮದಲ್ಲಿ ವಾಸವಿರುವ ಪೂಜಾಳಿಗೆ ಯಾವುದೇ ಆಂಬುಲೆನ್ಸ್ ಸಿಗುವುದಿಲ್ಲ. ಕುಟುಂಬಸ್ಥರು ತಬ್ಬಿಗಾಗುತ್ತಾರೆ. ಸುಮಾರು ಎರಡು ಗಂಟೆಗಳ ನಂತರ ಪ್ರೈವೇಟ್ ಆಂಬುಲೆನ್ಸ್‌ ಸಿಗುತ್ತದೆ. ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗಮಧ್ಯೆಯೇ ತಾಯಿ, ಮಗು ಇಬ್ಬರೂ ಸಾವನ್ನಪ್ಪಿದ್ದಾರೆ.

ಅ.22ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ