Asianet Suvarna News Asianet Suvarna News

ರೇವ್ ಪಾರ್ಟಿಗೆ ರೈಡ್: ಮಾಜಿ ಬಿಗ್‌ಬಾಸ್‌ ಸ್ಪರ್ಧಿ, ನಟಿ ಅರೆಸ್ಟ್

  • ರೇವ್ ಪಾರ್ಟಿಗೆ ಪೊಲೀಸ್ ರೈಡ್
  • ಮತ್ತಿನಲ್ಲಿದ್ದ ಬಾಲಿವುಡ್ ಸ್ಟಾರ್ ನಟಿ ಅರೆಸ್ಟ್
  • ಸ್ಥಳದಿಂದ ಹಲವು ವಿಧದ ಡ್ರಗ್ಸ್ ವಶಕ್ಕೆ

 

Marathi actress Heena Panchal arrested after police raid rave party in Nashik dpl
Author
Bangalore, First Published Jun 29, 2021, 12:49 PM IST
  • Facebook
  • Twitter
  • Whatsapp

ಮಾಜಿ ಬಿಗ್‌ಬಾಸ್ ಸ್ಪರ್ಧಿ, ನಟಿ ಹೀನಾ ಪಾಂಚಲ್ ಅವರನ್ನು ನಾಸಿಕ್ ಪೊಲೀಸರು ಬಂಧಿಸಿದ್ದಾರೆ. ಮಹಾರಾಷ್ಟ್ರದ  ಇಗತ್‌ಪುರಿಯಲ್ಲಿ ನಡೆಯುತ್ತಿದ್ದ ರೇವ್ ಪಾರ್ಟಿಗೆ ರೈಡ್ ಮಾಡಿಸ ನಾಸಿಕ್ ಪೊಲೀಸರು ನಟಿಯನ್ನು ಅರೆಸ್ಟ್ ಮಾಡಿದ್ದಾರೆ.

ನಟಿಯ ಜೊತೆ ಮತ್ತಷ್ಟು ಜನರನ್ನು ಅರೆಸ್ಟ್ ಮಾಡಲಾಗಿದ್ದು ಇವರ ರಕ್ತದ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಇವರು ಬಂಧನದ ಸಮಯದಲ್ಲಿ ಡ್ರಗ್ಸ್ ತೆಗೆದುಕೊಂಡಿದ್ದರು ಎಂಬ ಸಂದೇಹವೂ ವ್ಯಕ್ತವಾಗಿದೆ.

ಅಕ್ಕ ಪಕ್ಕದ ಮನೆಯವರೊಂದಿಗೆ ಕಿತ್ತಾಟ: ಬಾಲಿವುಡ್ ನಟಿ ಅರೆಸ್ಟ್

ಹೀನಾ ಪಾಂಚಲ್ ಅಲ್ಲದೆ ಪಾರ್ಟಿಯಲ್ಲಿ ಬೇರೆ ಯಾವ ಫೇಮಸ್ ಕಲಾವಿದರು ಇರಲಿಲ್ಲ. ಎಲ್ಲ ಸಣ್ಣ ಕಲಾವಿದರು ಇದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಬಾಲಿವುಡ್ ಸೆಲೆಬ್ರಿಟಿಗಳ ಖಾಸಗಿ ಬಂಗಲೆಯ ಪಾರ್ಟಿ ಬಗ್ಗೆ ಪೊಲೀಸರಿಗೆ ಮಾಹಿತಿ ಲಭ್ಯವಾದ ಹಿನ್ನೆಲೆ ರೈಡ್ ನಡೆದಿತ್ತು.

12 ಮಹಿಳೆಯರು ಸೇರಿ 22 ಜನರನ್ನು ಬಂಧಿಸಲಾಗಿದ್ದು ಹಲವಾರು ಬಗೆಯ ಡ್ರಗ್ಸ್ ವಶಪಡಿಸಲಾಗಿದೆ. ಬಂಧಿತ ಮಹಿಳೆಯರಲ್ಲಿ 5-6 ಮಹಿಳೆಯರು ಬಾಲಿವುಡ್ ಮತ್ತು ಸೌತ್ ಸಿನಿಮಾ ಕಲಾವಿದರೆಂದು ಪೊಲೀಸರು ತಿಳಿಸಿದ್ದಾರೆ. ಹೀನಾ ಹಿಂದಿ ಮತ್ತು ಮರಾಠಿಯಲ್ಲಿ ಖ್ಯಾತ ನಟಿ. ಬಿಗ್‌ಬಾಸ್ ಮರಾಠಿಯ ಸೀಸನ್‌ 2ನಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿದ್ದರು.

Follow Us:
Download App:
  • android
  • ios