Asianet Suvarna News Asianet Suvarna News

ರೇಪ್ ಸೀನ್​ ಮಾಡೋ ಆಸೆ ಪಟ್ಟು ಮಾನನಷ್ಟ ಮೊಕದ್ದಮೆ ಹೂಡ್ತಾರಂತೆ ನಟ ಮನ್ಸೂರ್​ ಅಲಿ ಖಾನ್​!

ನಟಿ ತ್ರಿಷಾ ಜೊತೆ ರೇಪ್​ ಸೀನ್​ ಮಾಡುವ ಬಯಕೆ ವ್ಯಕ್ತಪಡಿಸಿ ಭಾರಿ ವಿವಾದಕ್ಕೆ ಗುರಿಯಾಗಿದ್ದ ಖಳ ನಟ ಮನ್ಸೂರ್ ಅಲಿ ಖಾನ್​ ಇದೀಗ ಮೂವರು ನಟರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುತ್ತಾರಂತೆ! 
 

Mansoor Ali Khan to file defamation cases against Trisha, Chiru and Khushboo
Author
First Published Nov 28, 2023, 5:45 PM IST

ನಟಿ ತ್ರಿಶಾ ಕುರಿತು ಅಸಭ್ಯ ಮಾತನಾಡಿ ಪೇಚಿಗೆ ಸಿಲುಕಿದ್ದ ಖಳ ನಟ ಮನ್ಸೂರ್ ಅಲಿ ಖಾನ್​ ಕೊನೆಗೂ ಕ್ಷಮೆ ಕೋರಿದ್ದರು. ತಮಿಳು ಚಿತ್ರ 'ಲಿಯೋ'ಕ್ಕೆ ಸಂಬಂಧಿಸಿದಂತೆ ಈ ಚಿತ್ರದ ಖಳ ನಟರಾಗಿರುವ ಖಾನ್​  ಅಸಹ್ಯ ಹೇಳಿಕೆ ಕೊಟ್ಟಿದ್ದರು.  'ನಾನು ತ್ರಿಷಾ ಜೊತೆ ನಟಿಸುತ್ತಿದ್ದೇನೆ ಎಂದು ಕೇಳಿದಾಗ, ಚಿತ್ರದಲ್ಲಿ ರೇಪ್ ಸೀನ್ ಇರುತ್ತದೆ ಎಂದು ನಾನು ಭಾವಿಸಿದೆ. ನನ್ನ ಹಿಂದಿನ ಚಿತ್ರಗಳಲ್ಲಿ ಇತರ ನಟಿಯರೊಂದಿಗೆ ಮಾಡಿದಂತೆ ನಾನು ತ್ರಿಷಾಳನ್ನು ಬೆಡ್ ರೂಂಗೆ ಕರೆದುಕೊಂಡು ಹೋಗಿ ರೇಪ್ ಮಾಡುವ ಸೀನ್ ಇರುತ್ತದೆ ಎಂದು ನಾನು ಭಾವಿಸಿದೆ. ನಾನು ಅನೇಕ ಚಿತ್ರಗಳಲ್ಲಿ ಅತ್ಯಾಚಾರದ ದೃಶ್ಯಗಳನ್ನು ಮಾಡಿದ್ದೇನೆ. ಇದು ನನಗೆ ಹೊಸದಲ್ಲ. ಆದರೆ ಲಿಯೋ ಸಿನಿಮಾನವರು ತ್ರಿಷಾರ ಮುಖವನ್ನು ಸಹ ನನಗೆ ತೋರಿಸಲಿಲ್ಲ' ಎಂದು ಹೇಳಿದ್ದರು. ಇದರ ಬಗ್ಗೆ ನಟಿ ತ್ರಿಷಾ ಸೇರಿದಂತೆ ಹಲವರಿಂದ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು. 

ನಂತರ ಕ್ಷಮೆ ಕೋರುವಂತೆ ಕೇಳಿದಾಗ, ಕ್ಷಮೆ ಕೋರುವ ಪ್ರಶ್ನೆಯೇ ಇಲ್ಲ. ಅದೆಷ್ಟು ನಟಿಯರ ಜೊತೆ ರೇಪ್​  ಸೀನ್​ ಮಾಡಿದ್ದೇನೆ. ನನ್ನನ್ನು ನೋಡಿದರೆ ಕ್ಷಮೆ ಕೋರುವವನ ರೀತಿ ಕಾಣಿಸ್ತೀನಾ? ನಾನು ತಪ್ಪೇ ಮಾಡಿಲ್ಲ ಎಂದಿದ್ದರು. ಇವರ ವಿರುದ್ಧ   ಮಹಿಳಾ ಆಯೋಗದಿಂದ ದೂರು ದಾಖಲಾಗಿತ್ತು. ಅವರನ್ನು ಚಿತ್ರರಂಗದಿಂದ ತಾತ್ಕಾಲಿಕ ಬ್ಯಾನ್​ ಕೂಡ ಮಾಡಲಾಯಿತು. ನಟ ಮನ್ಸೂರ್ ಅಲಿಖಾನ್ ವಿರುದ್ಧ ಐಪಿಸಿ 509- ಮಹಿಳೆಯ ಸಭ್ಯತೆಗೆ ಧಕ್ಕೆ ತರುವುದು ಮತ್ತು ಐಪಿಸಿ 354(ಎ)- ಮಹಿಳೆಯ ವಿನಮ್ರತೆಗೆ ಧಕ್ಕೆ ತರುವುದು ಸೇರಿದಂತೆ 2 ಸೆಕ್ಷನ್‌ಗಳ ಅಡಿಯಲ್ಲಿ ಎಲ್ಲಾ ಮಹಿಳಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಘಟನೆ ಬಳಿಕ ಮನ್ಸೂರ್ ಅಲಿ ಖಾನ್ ವಿರುದ್ಧ ದೂರು ದಾಖಲಾಗಿ ಪೊಲೀಸರು ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದರು. ಕ್ಷಮೆ ಕೋರಲು ನನಗೇನು ಹುಚ್ಚೆ ಎಂದು ಪ್ರಶ್ನಿಸಿದ್ದ ಖಾನ್​, ಕೊನೆಗೂ ಕ್ಷಮೆಯಾಚಿಸಿದ್ದರು. 

ತೆಂಗಿನಕಾಯಿ ತಟ್ಟೆಯಲ್ಲಿನ ಮಾಂಗಲ್ಯವನ್ನು ಆಶೀರ್ವದಿಸುವ ಭಾಗ್ಯ ನನ್ನದಾಗಲಿ: ರೇಪ್​ ಸೀನ್​ ಹೇಳಿಕೆಗೆ ಕ್ಷಮೆ ಕೋರಿದ ನಟ ಖಾನ್​!

ಆದರೆ ಇದೀಗ ನಟ ಖಾನ್​ ಮತ್ತೆ ಉಲ್ಟಾ ಹೊಡೆದಿದ್ದಾರೆ. ನಟಿ ತ್ರಿಷಾ ಹಾಗೂ ಅವರಿಗೆ ಬೆಂಬಲ ನೀಡಿದ ಮಹಿಳಾ ಆಯೋಗದ ಅಧ್ಯಕ್ಷೆ ಖುಷ್ಬು ಮತ್ತು ನಟ  ಚಿರಂಜೀವಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಹೇಳಿದ್ದಾರೆ. ಈ ಸಂಬಂಧ  ಕೋರ್ಟ್​ನಲ್ಲಿ ಕೇಸ್​ ಹಾಕಿಸಿ  ನೋಟಿಸ್ ಜಾರಿ ಮಾಡಿಸಲಾಗುವುದು ಎಂದಿದ್ದಾರೆ.  ಈ ಮೂವರು ನಟರ ವಿರುದ್ಧ ಮಾನನಷ್ಟ ಮೊಕದ್ದಮೆ ಸಲ್ಲಿಸುತ್ತೇನೆ.  10 ದಿನಗಳ ಕಾಲ ಸಾರ್ವಜನಿಕ ಶಾಂತಿ ಕದಡುವ ಆರೋಪ ಸೇರಿದಂತೆ  ಪೂರ್ವ ಯೋಜಿತ ಗಲಭೆ ಆರೋಪದ ಮೇಲೆ ಪ್ರಕರಣಗಳನ್ನು ದಾಖಲಿಸುತ್ತೇನೆ ಎಂದಿದ್ದಾರೆ.
 
ರೇಪ್​ ಕುರಿತು ನಾನು ಹೇಳಿದ್ದೇನೆ ಎಂದು ವೈರಲ್​ ಆಗ್ತಿರೋ ವಿಡಿಯೋ  ಕಪೋಲಕಲ್ಪಿತವಾಗಿದೆ.  ಪ್ರಕರಣ ದಾಖಲಿಸುವಾಗ ತಾನು ನಿರಪರಾಧಿ ಎಂದು ಸಾಬೀತುಪಡಿಸಲು ಮೂಲ ವಿಡಿಯೋ ಮತ್ತು ಇತರ ಸಾಕ್ಷ್ಯಗಳನ್ನು ನೀಡುತ್ತೇನೆ ಎಂದು ಮನ್ಸೂರ್​ ಅಲಿ ಖಾನ್​ ಹೇಳಿದ್ದಾರೆ. ಆದರೆ ಈ ಹಿಂದೆ ನಟಿ ತ್ರಿಷಾ ಬಳಿ ಕ್ಷಮೆ ಕೋರುವಾಗ ನಟ, ನನ್ನ ಸಹನಟಿ ತ್ರಿಶಾ, ದಯವಿಟ್ಟು ನನ್ನನ್ನು ಕ್ಷಮಿಸಿ. ನಿಮ್ಮ ವಿವಾಹಕ್ಕೆ ಬಂದು ಆಶಿರ್ವದಿಸುವ ಸೌಭಾಗ್ಯ ದೇವರು ನನಗೆ ಕೊಡಲು-ಮನ್ಸೂರ್ ಅಲಿ ಖಾನ್ ಎಂದಿದ್ದರು. ಈ ಕುರಿತು  ನಟ ಸೋಷಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಮಾಡಿದ್ದರು.  "ನನ್ನ ಸಹನಟಿ ತ್ರಿಶಾ, ದಯವಿಟ್ಟು ನನ್ನನ್ನು ಕ್ಷಮಿಸಿ! ಮಂಗಳಕರ ವೈವಾಹಿಕ ವಿಧಿಯಲ್ಲಿ ತೆಂಗಿನಕಾಯಿಯ ತಟ್ಟೆಯಲ್ಲಿ ಇರುವ ನಿಮ್ಮ ಮಾಂಗಲ್ಯವನ್ನು ಆಶೀರ್ವದಿಸುವ ಭಾಗ್ಯವನ್ನು ದೇವರು ನನಗೆ ಅನುಗ್ರಹಿಸಲಿ! ಆಮೆನ್. ಇಂತಿ ಮನ್ಸೂರ್ ಅಲಿ ಖಾನ್" ಎಂದು ಬರೆದಿದ್ದರು. 

ಅದೆಷ್ಟು ನಟಿಯರ ಜೊತೆ ಬೆಡ್​ರೂಂ​, ರೇಪ್​ ಸೀನ್​ ಮಾಡಿರುವೆ, ನಟಿ ತ್ರಿಷಾಗೆ ಕ್ಷಮೆ ಕೇಳಲು ನಂಗೇನು ಹುಚ್ಚಾ?

Follow Us:
Download App:
  • android
  • ios