Asianet Suvarna News Asianet Suvarna News

ತೆಂಗಿನಕಾಯಿ ತಟ್ಟೆಯಲ್ಲಿನ ಮಾಂಗಲ್ಯವನ್ನು ಆಶೀರ್ವದಿಸುವ ಭಾಗ್ಯ ನನ್ನದಾಗಲಿ: ರೇಪ್​ ಸೀನ್​ ಹೇಳಿಕೆಗೆ ಕ್ಷಮೆ ಕೋರಿದ ನಟ ಖಾನ್​!

ನಟಿ ತ್ರಿಷಾ ವಿರುದ್ಧ ಅವಹೇಳನ ಹೇಳಿಕೆ ನೀಡಿದ್ದ ಖಳ ನಟ ಮನ್ಸೂರ್​ ಅಲಿ ಖಾನ್​ ಕೊನೆಗೂ ಕ್ಷಮೆ ಕೋರಿದ್ದಾರೆ. ಅವರು ಹೇಳಿದ್ದೇನು? 
 

Actor Mansoor Ali Khan Apologises To Trisha For His Comment suc
Author
First Published Nov 24, 2023, 4:17 PM IST

ನಟಿ ತ್ರಿಶಾ ಕುರಿತು ಅಸಭ್ಯ ಮಾತನಾಡಿ ಪೇಚಿಗೆ ಸಿಲುಕಿದ್ದ ಖಳ ನಟ ಮನ್ಸೂರ್ ಅಲಿ ಖಾನ್​ ಕೊನೆಗೂ ಕ್ಷಮೆ ಕೋರಿದ್ದಾರೆ. ತಮಿಳು ಚಿತ್ರ 'ಲಿಯೋ'ಕ್ಕೆ ಸಂಬಂಧಿಸಿದಂತೆ ಈ ಚಿತ್ರದ ಖಳ ನಟರಾಗಿರುವ ಖಾನ್​ ಈ ಅಸಹ್ಯ ಹೇಳಿಕೆ ಕೊಟ್ಟಿದ್ದರು.   'ನಾನು ತ್ರಿಷಾ ಜೊತೆ ನಟಿಸುತ್ತಿದ್ದೇನೆ ಎಂದು ಕೇಳಿದಾಗ, ಚಿತ್ರದಲ್ಲಿ ರೇಪ್ ಸೀನ್ ಇರುತ್ತದೆ ಎಂದು ನಾನು ಭಾವಿಸಿದೆ. ನನ್ನ ಹಿಂದಿನ ಚಿತ್ರಗಳಲ್ಲಿ ಇತರ ನಟಿಯರೊಂದಿಗೆ ಮಾಡಿದಂತೆ ನಾನು ತ್ರಿಷಾಳನ್ನು ಬೆಡ್ ರೂಂಗೆ ಕರೆದುಕೊಂಡು ಹೋಗಿ ರೇಪ್ ಮಾಡುವ ಸೀನ್ ಇರುತ್ತದೆ ಎಂದು ನಾನು ಭಾವಿಸಿದೆ. ನಾನು ಅನೇಕ ಚಿತ್ರಗಳಲ್ಲಿ ಅತ್ಯಾಚಾರದ ದೃಶ್ಯಗಳನ್ನು ಮಾಡಿದ್ದೇನೆ. ಇದು ನನಗೆ ಹೊಸದಲ್ಲ. ಆದರೆ ಲಿಯೋ ಸಿನಿಮಾನವರು ತ್ರಿಷಾರ ಮುಖವನ್ನು ಸಹ ನನಗೆ ತೋರಿಸಲಿಲ್ಲ' ಎಂದು ಹೇಳಿದ್ದರು. ಇದರ ಬಗ್ಗೆ ನಟಿ ತ್ರಿಷಾ ಸೇರಿದಂತೆ ಹಲವರಿಂದ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು. 

ನಂತರ ಕ್ಷಮೆ ಕೋರುವಂತೆ ಕೇಳಿದಾಗ, ಕ್ಷಮೆ ಕೋರುವ ಪ್ರಶ್ನೆಯೇ ಇಲ್ಲ. ಅದೆಷ್ಟು ನಟಿಯರ ಜೊತೆ ರೇಪ್​  ಸೀನ್​ ಮಾಡಿದ್ದೇನೆ. ನನ್ನನ್ನು ನೋಡಿದರೆ ಕ್ಷಮೆ ಕೋರುವವನ ರೀತಿ ಕಾಣಿಸ್ತೀನಾ? ನಾನು ತಪ್ಪೇ ಮಾಡಿಲ್ಲ ಎಂದಿದ್ದರು. ಇವರ ವಿರುದ್ಧ   ಮಹಿಳಾ ಆಯೋಗದಿಂದ ದೂರು ದಾಖಲಾಗಿತ್ತು. ಅವರನ್ನು ಚಿತ್ರರಂಗದಿಂದ ತಾತ್ಕಾಲಿಕ ಬ್ಯಾನ್​ ಕೂಡ ಮಾಡಲಾಯಿತು. ನಟ ಮನ್ಸೂರ್ ಅಲಿಖಾನ್ ವಿರುದ್ಧ ಐಪಿಸಿ 509- ಮಹಿಳೆಯ ಸಭ್ಯತೆಗೆ ಧಕ್ಕೆ ತರುವುದು ಮತ್ತು ಐಪಿಸಿ 354(ಎ)- ಮಹಿಳೆಯ ವಿನಮ್ರತೆಗೆ ಧಕ್ಕೆ ತರುವುದು ಸೇರಿದಂತೆ 2 ಸೆಕ್ಷನ್‌ಗಳ ಅಡಿಯಲ್ಲಿ ಎಲ್ಲಾ ಮಹಿಳಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಘಟನೆ ಬಳಿಕ ಮನ್ಸೂರ್ ಅಲಿ ಖಾನ್ ವಿರುದ್ಧ ದೂರು ದಾಖಲಾಗಿ ಪೊಲೀಸರು ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದರು. ಕ್ಷಮೆ ಕೋರಲು ನನಗೇನು ಹುಚ್ಚೆ ಎಂದು ಪ್ರಶ್ನಿಸಿದ್ದ ಖಾನ್​, ಕೊನೆಗೂ ಕ್ಷಮೆಯಾಚಿಸಿದ್ದಾರೆ. 

ಅದೆಷ್ಟು ನಟಿಯರ ಜೊತೆ ಬೆಡ್​ರೂಂ​, ರೇಪ್​ ಸೀನ್​ ಮಾಡಿರುವೆ, ನಟಿ ತ್ರಿಷಾಗೆ ಕ್ಷಮೆ ಕೇಳಲು ನಂಗೇನು ಹುಚ್ಚಾ?

ನಟಿ ತ್ರಿಶಾ ಅವರಿಗೆ ಸ್ಟೇಷನ್‌ಗೂ ಕರೆಸಿದ್ದರು. ಹೀಗಾಗಿ ಕಾನೂನು ಕ್ರಮದ ಬಳಿಕ ಮನ್ಸೂರ್ ಅಲಿ ಖಾನ್ ಅವರನ್ನು ತ್ರಿಶಾಗೆ ಕ್ಷಮೆಯಾಚಿಸಿದ್ದಾರೆ. ನನ್ನ ಸಹನಟಿ ತ್ರಿಶಾ, ದಯವಿಟ್ಟು ನನ್ನನ್ನು ಕ್ಷಮಿಸಿ. ನಿಮ್ಮ ವಿವಾಹಕ್ಕೆ ಬಂದು ಆಶಿರ್ವದಿಸುವ ಸೌಭಾಗ್ಯ ದೇವರು ನನಗೆ ಕೊಡಲು-ಮನ್ಸೂರ್ ಅಲಿ ಖಾನ್ ಎಂದು ನಟ ಪೋಸ್ಟ್​ನಲ್ಲಿ ಬರೆದಿದ್ದಾರೆ.  ಇದನ್ನು ಟ್ರೇಡ್​ ಅನಲಿಸ್ಟ್ ರಮೇಶ್ ಬಾಲ ಸೋಷಿಯಲ್ ಮೀಡಿಯಾದಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಮನ್ಸೂರ್ ಅಲಿ ಖಾನ್ ಹೇಳಿಕೆಯಲ್ಲಿ "ನನ್ನ ಸಹನಟಿ ತ್ರಿಶಾ, ದಯವಿಟ್ಟು ನನ್ನನ್ನು ಕ್ಷಮಿಸಿ! ಮಂಗಳಕರ ವೈವಾಹಿಕ ವಿಧಿಯಲ್ಲಿ ತೆಂಗಿನಕಾಯಿಯ ತಟ್ಟೆಯಲ್ಲಿ ಇರುವ ನಿಮ್ಮ ಮಾಂಗಲ್ಯವನ್ನು ಆಶೀರ್ವದಿಸುವ ಭಾಗ್ಯವನ್ನು ದೇವರು ನನಗೆ ಅನುಗ್ರಹಿಸಲಿ! ಆಮೆನ್. ಇಂತಿ ಮನ್ಸೂರ್ ಅಲಿ ಖಾನ್" ಎಂದಿದ್ದಾರೆ.
 
 ಇದಕ್ಕೂ ಮುನ್ನ ತಾವು ಆ ರೀತಿ ಹೇಳಿಕೆ ನೀಡಲಿಲ್ಲ ಎಂದಿದ್ದರು. ನಾನು ಹೇಳಿರುವ ಹೇಳಿಕೆಗಳನ್ನು ತಿರುಚಲಾಗಿದೆ. ಎಡಿಟ್​ ಮಾಡಿರುವ ವಿಡಿಯೋ ಅನ್ನು ತ್ರಿಶಾ ಅವರಿಗೆ ತೋರಿಸಲಾಗಿದೆ. ನಾನು ಆ ರೀತಿ ಹಗುರವಾದ ಧಾಟಿಯಲ್ಲಿ ಹೇಳಿದೆ. ಆದರೆ ವಿವಾದ ಸೃಷ್ಟಿಸುವ ರೀತಿಯಲ್ಲಿ ವಿಡಿಯೋ ಟ್ರಿಮ್ ಮಾಡಿ ಸ್ಪ್ರೆಡ್​ ಮಾಡಲಾಗುತ್ತಿದೆ ಎಂದಿದ್ದ ಅವರು, ಮುಂಬರುವ ಚುನಾವಣೆಯಲ್ಲಿ ರಾಜಕೀಯ ಪಕ್ಷವನ್ನು ಬೆಂಬಲಿಸಿ ನಾನು ಸ್ಪರ್ಧಿಸಲಿದ್ದೇನೆ ಎನ್ನುವ ಕಾರಣ ಈ ರೀತಿ ಮಾಡಲಾಗಿದೆ ಎಂದಿದ್ದರು. 

ತ್ರಿಶಾ ಜೊತೆ ರೇಪ್​, ಬೆಡ್​ರೂಂ ಸೀನ್​ ಬೇಕು ಎಂದ ವಿಡಿಯೋ ವೈರಲ್​ ಆಗ್ತಿದ್ದಂತೇ ಉಲ್ಟಾ ಹೊಡೆದ ನಟ ಖಾನ್​!

Follow Us:
Download App:
  • android
  • ios