ಕಾಫಿ ವಿತ್ ಕರಣ್ ಕಾರ್ಯಕ್ರಮ ಖ್ಯಾತಿಯ ನಿರ್ಮಾಕ ಕರಣ್ ಜೋಹಾರ್‌ಗೆ ಕಾಲೆಳೆದಿದ್ದಾರೆ ದೆಹಲಿ ಶಾಸಕ. ಶಿರೋಮಣಿ ಅಕಾಲಿ ದಳದ ಮುಖಂಡ ಮಜಿಂದರ್ ಸಿಂಗ್ ಸಿರ್ಸ ಟ್ವೀಟ್ ಮೂಲಕ ಕರಣ್ ಕಾಲೆಳೆದಿದ್ದಾರೆ.

ಕಳೆದ ವರ್ಷದ ಕರಣ್ ಜೋಹರ್ ಆಯೋಜನೆ ಪಾರ್ಟಿಯಲ್ಲಿ ಡ್ರಗ್ಸ್ ಬಳಸಲಾಗಿದೆ ಎನ್ನಲಾದ ವಿಡಿಯೋ ತುಣುಕೊಂದು ವೈರಲ್ ಆಗುತ್ತಿದ್ದು, ಶಾಸಕ ಎನ್‌ಸಿಬಿಯ ಡಿಜಿ ರಾಕೇಶ್ ಅವರನ್ನು ಭೇಟಿಯಾಗಿದ್ದಾರೆ.

ಹಿಂಪಡೆಯಲು ಸರ್ಕಾರಕ್ಕೆ ಕಂಗನಾ ಮನವಿ

ನಾನು ಎನ್‌ಸಿಬಿ ಮುಖ್ಯಸ್ಥ ಡಿಜಿ ರಾಕೇಶ್ ಅವರನ್ನು ಎನ್‌ಸಿಬಿ ಕಚೇರಿಯಲ್ಲಿ ಭೇಟಿಯಾದೆ. ನಿರ್ಮಾಪಕ ಕರಣ್‌ ವಿರುದ್ಧ  ದೂರು ದಾಖಲಿಸಿದ್ದೇನೆ. ಮಂಬೈನ ಮನೆಯಲ್ಲಿ ಡ್ರಗ್ಸ್ ಪಾರ್ಟಿ ನಡೆಸಿದ್ದಕ್ಕೆ ದೂರು ನೀಡಿದ್ದೇನೆ ಎಂದು ಅವರು ಹೇಳಿದ್ದಾರೆ.

ಕರಣ್ ಜೋಹರ್‌ನನ್ನು ಶೀಘ್ರವೇ ಎನ್‌ಸಿಬಿ ಕರೆಯಬಹುದು. ಕರಣ್ ಜೋಹಾರ್ ಎನ್‌ಸಿಬಿ ಜೊತೆ ಕಾಫಿ ಕುಡಿಯಲಿದ್ದಾರೆ ಎಂದು ವ್ಯಂಗ್ಯ ಮಾಡಿದ್ದಾರೆ. ಇಷ್ಟೇ ಅಲ್ಲದೆ ಶಾಸಕ ದೀಪಿಕಾ ಪಡುಕೋಣೆ, ಮಲೈಕಾ ಅರೋರಾ, ಅರ್ಜುನ್ ಕಪೂರ್, ಶಾಹೀದ್ ಕಪೂರ್, ವಿಕ್ಕಿ ಕೌಶಲ್, ವರುಣ್ ಧವನ್ ಹಾಗೂ ವಿಡಿಯೋದಲ್ಲಿದ್ದ ಇತರರ ವಿರುದ್ಧವೂ ದೂರು ದಾಖಲಿಸಲಾಗಿದೆ ಎಂದಿದ್ದಾರೆ.