ನೇಪಾಳದ ಸೊಕ್ಕು ಸಮರ್ಥಿಸಿ ಉಂಡ ಮನೆ ಭಾರತಕ್ಕೆ ಎರಡು ಬಗೆದಳೇ ಮೊನಿಶಾ ಕೊಯಿರಾಲ?
ಬಾಲಿವುಡ್ ನಟಿ ಮೊನಿಶಾ ಕೊಯಿರಾಲ ನಿಮಗೆ ಗೊತ್ತು. ಈಕೆ ನೇಪಾಳದವಳು. ಆದರೆ ಬಾಲಿವುಡ್ ಈಕೆಗೆ ಹೆಸರು, ಹಣ ಕೊಟ್ಟಿದೆ. ಇತ್ತೀಚೆಗೆ ಈಕೆ ನೇಪಾಳವನ್ನು ಸಮರ್ಥಿಸಿಕೊಂಡು ಮಾಡಿದ ಟ್ವೀಟ್ ಈಗ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದೆ.
ನೇಪಾಳದಲ್ಲಿ ಜನಿಸಿದ ಮೊನಿಶಾ ಕೊಯಿರಾಲ, ಬಾಲಿವುಡ್‌ಗೆ ಬಂದು ಅಲ್ಲಿ ಹಿಂದಿ ಫಿಲಂಗಳಲ್ಲಿ ನಟಿಸಿ ಹೆಸರು, ಹಣ ಎಲ್ಲಾ ಮಾಡಿದಳು. ದಿಲ್ ಸೆ, ಬಾಂಬೇ, ಅಗ್ನಿಸಾಕ್ಷಿ ಮುಂತಾದ ಚಿತ್ರಗಳಲ್ಲಿ ಈಕೆ ಬಾಲಿವುಡ್‌ನ ಖ್ಯಾತ ಹೀರೋಗಳ ಜೊತೆ ನಟಿಸಿ ಭಾರತೀಯರ ಮನೆಮಾತಾದಳು. ಭಾರತೀಯರು ಈಕೆಯನ್ನು ಇನ್ನಿಲ್ಲದಂತೆ ಪ್ರೀತಿಸಿದರು. ಕೆಲವು ವರ್ಷಗಳ ಹಿಂದೆ ಈಕೆಗೆ ಕ್ಯಾನ್ಸರ್ ಆದಾಗ ಈಕೆಯನ್ನು ಬದುಕಿಸಿದ್ದು ಮುಂಬಯಿಯ ಖ್ಯಾತ ಆಸ್ಪತ್ರೆ.
ಈಗ ತನಗೆ ಬದುಕು ನೀಡಿದ ಭಾರತವನ್ನೇ ಮರೆತಿದ್ದಾಳಾ ಕೊಯಿರಾಲ? ಹಾಗಂತ ಒಂದು ಪ್ರಶ್ನೆ ಕೇಳುವಂತೆ ಮಾಡಿದೆ ಆಕೆಯ ಒಂದು ಟ್ವೀಟ್.
ಇತ್ತೀಚೆಗೆ ಭಾರತಕ್ಕೆ ಸೇರಿದ ಕೆಲವು ಗಡಿ ಪ್ರದೇಶಗಳನ್ನು ತನ್ನದೇ ಎಂದು ನಕಾಶೆಯಲ್ಲಿ ತೋರಿಸಿ ನೇಪಾಳ ಸರಕಾರ ಅದನ್ನು ಸದನದಲ್ಲಿ ಅನುಮೋದನೆ ಮಾಡಿಸಿಕೊಂಡಿತು. ಇತ್ತೀಚೆಗೆ ನೇಪಾಳದ ಓಲಿ ಪ್ರಧಾನಿಯಾಗಿರುವ ಸರಕಾರ ಹೆಚ್ಚು ಹೆಚ್ಚಾಗಿ ಚೀನಾದ ಕಡೆ ವಾಲುತ್ತಿದೆ. ಭಾರತವನ್ನು ಕಡೆಗಣಿಸುತ್ತಿದೆ. ಇತ್ತೀಚೆಗೆ ನೇಪಾಳದ ಮಿಲಿಟರಿಯ ಯೋಧರು ಭಾರತೀಯ ಯೋಧರ ಮೇಲೆ ಗುಂಡಿನ ದಾಳಿ ನಡೆಸಿದ್ದರು. ನಕಾಶೆಯಲ್ಲಿ ಭಾರತದ ಸ್ಥಳವನ್ನು ನೇಪಾಳದ್ದೇ ಎಂದು ತೋರಿಸಿರುವ ಕ್ರಮದ ಬಗ್ಗೆ ಮೊನಿಶಾ ಟ್ವೀಟ್ ಮಾಡಿದ್ದು ಹೀಗೆ: ''ನಮ್ಮ ಪುಟ್ಟ ದೇಶದ ಘನತೆಯನ್ನು ಎತ್ತಿ ಹಿಡಿದಿರುವುದಕ್ಕಾಗಿ ಧನ್ಯವಾದಗಳು. ಈಗ ನಾವು ಮೂರೂ ದೇಶಗಳ ನಡುವೆ ಶಾಂತಿಯುತವಾದ ಹಾಗೂ ಗೌರವಯುತವಾದ ಮಾತುಕತೆಯನ್ನು ನಿರೀಕ್ಷಿಸುತ್ತೇವೆ..''
ಅಂದರೆ ಇದರರ್ಥ, ನೇಪಾಳ ಮಾಡಿರುವ ಕ್ರಮವನ್ನು ಸಮರ್ಥಿಸಿಕೊಂಡಂತೆ ಆಗಿದೆ. ಮೂರೂ ದೇಶಗಳು ಎಂದರೆ ಭಾರತ, ನೇಪಾಳ ಮತ್ತು ಚೀನಾ. ಇಲ್ಲಿ ಮೂರು ದೇಶಗಳೇಕೆ? ಭಾರತ ಹಾಗೂ ನೇಪಾಳದ ಸಂಬಂಧಗಳ ನಡುವೆ ಚೀನಾವನ್ನು ಮೊನಿಶಾ ಎಳೆದು ತಂದಿರುವುದೇಕೆ? ಮೊನಿಶಾಳ ಈ ನಡೆ ಬಾಲಿವುಡ್‌ನ ಹಲವರನ್ನು ಹಾಗೂ ಟ್ವಟ್ಟರ್‌ನಲ್ಲಿ ಬಹು ಮಂದಿಯನ್ನು ಅಚ್ಚರಿಯಲ್ಲಿ ಕೆಡವಿದೆ. ಉಪ್ಪು ತಿಂದ ಮನೆಗೆ ಎರಡು ಬಗೆದರೇ ಮೊನಿಶಾ? ಉಣಲು ಅನ್ನ ನೀಡಿದ ಬಟ್ಟಲಿಗೆ ಹೊಲಸು ಸುರಿದಳೇ? ಚೀನಾದ ಪರವಾಗಿ ಆಕೆ ಮಾತಾಡುವ ಪ್ರಮೇಯ ಏನಿತ್ತು? ಹೀಗೆಲ್ಲಾ ಚರ್ಚೆಗಳಾಗುತ್ತಿವೆ.
ಮಾಜಿ ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ಅವರ ಪತಿ ಹಾಗೂ ಮಿಜೋರಾಂನ ಮಾಜಿ ಗವರ್ನರ್, ಕ್ರಿಮಿನಲ್ ಲಾಯರ್ ಆಗಿರವ ಸ್ವರಾಜ್ ಅವರು ಮೊನಿಶಾ ಅವರ ಆಪ್ತರಲ್ಲಿ ಒಬ್ಬರು. ಅವರು ಈ ಬಗ್ಗೆ ಮೊನಿಶಾ ಮೇಲೆ ಬೇಜಾರು ಮಾಡಿಕೊಂಡು ಟ್ವಿಟ್ಟರ್‌ನಲ್ಲಿ ಆಕೆಗೆ ಸರಣಿ ಉತ್ತರ ನೀಡಿದ್ದಾರೆ. ಅದು ಹೀಗಿದೆ:
ಕಾರಣ ಹೇಳದೆ ಹೋದ ಸುಶಾಂತ್ ಮನೆ ನೋಡಿದ್ದೀರಾ?
ಮೊನಿಶಾ, ನಾನು ನಿನ್ನೊಡನೆ ವಾದಿಸಲಾರೆ. ನೀನು ನಿನ್ನ ಫಿಲಂ ಪ್ರೀಮಿಯರ್‌ಗಳಿಗೆ ನಮ್ಮನ್ನು ಕರೆದಿದ್ದೀ. ಸುಷ್ಮಾ ಅವುಗಳನ್ನು ನೋಡಿದ್ದಾಳೆ. ಅದು ೨೭ ವರ್ಷಗಳ ಹಿಂದೆ. ೧೯೭೭ರಲ್ಲಿ ನೀನು ಸಾಕೇತದ ಸ್ಕೂಲ್‌ಗೆ ಹೋಗುತ್ತಿದ್ದಾಗ ನಿನ್ನ ತಂದೆ- ತಾಯಿ ಇಬ್ಬರೂ ನಮಗೆ ಆಪ್ತರಾಗಿದ್ದರು. ನಾವು ಸಂಕಷ್ಟದ ಪರಿಸ್ಥಿತಿಗಳನ್ನು ಜೊತೆಯಾಗಿ ಎದುರಿಸಿದ್ದೇವೆ. ಏಮ್ಸ್‌ನಲ್ಲಿ ನಿನ್ನ ತಾತ ಬಿಪಿ ಕೊಯಿರಾಲ (ಇವರು ನೇಪಾಳದ ಪ್ರಧಾನಿ ಆಗಿದ್ದರು) ಅವರಿಗೆ ಕ್ಯಾನ್ಸರ್ ಎಂದು ದೃಢಪಟ್ಟಾಗ ನಾನು ಅಲ್ಲಿದ್ದೆ. ನಾನಿನ್ನು ಆರು ತಿಂಗಳು ಮಾತ್ರ ಬದುಕುತ್ತೇನೆ ಎಂದು ಅವರು ಹೇಳಿದ್ದರು. ನಿನ್ನ ತಾತ ಹಾಗೂ ಅವರ ಇಬ್ಬರು ಸಹೋದರರೂ ನೇಪಾಳದ ಪ್ರ್ರಧಾನಿಗಳಾಗಿದ್ದರು. ನಿನ್ನ ಅತ್ತೆ ನೇಪಾಳದ ಉಪಪ್ರಧಾನಿಯಾಗಿದ್ದರು, ನಿನ್ನ ತಾತ ೧೮ ವರ್ಷ ಜೈಲಿನಲ್ಲಿ ಇದ್ದರು. ಹಿಂದೂ ದೇಶದಲ್ಲಿ ಬ್ರಾಹ್ಮಣನನ್ನು ಗಲ್ಲಿಗೆ ಹಾಕಬಾರದು ಎಂಬ ಕಾರಣಕ್ಕಾಗಿ ಅವರು ಜೈಲಿನಲ್ಲಿದ್ದರು. ೧೯೭೩ರಲ್ಲಿ ಶಾಂತಿ ಮಾತುಕತೆಗಳಲ್ಲಿ ನಿನ್ನ ತಂದೆಯೂ ಇದ್ದರು.
ಮನಿಷಾ ಕೊಯಿರಾಲಾ ಸಾವಿನ ಭಯ ಮೆಟ್ಟಿ ನಿಂತ ಕಥೆ
ಭಾರತೀಯರು ತಿಳಿಯಬೇಕು. ಜಗತ್ತಿನ ಏಕೈಕ ಹಿಂದೂ ದೇಶವನ್ನು ಸರ್ವನಾಶ ಮಾಡುವುದಕ್ಕೆ ಕಮ್ಯುನಿಸ್ಟ್ ಚೀನಾ ಸಂಚು ನಡೆಸಿದೆ. ಅವರ ಸಂಚು ಪೂರ್ತಿಯಾಗುವುದನ್ನು ನಾವೆಲ್ಲ ನೋಡುತ್ತಿದ್ದೇವೆ. ಇದರ ಪರಿಣಾಮ ಏನೆಂದರೆ, ಚೀನೀಯರು ನೇಪಾಳವನ್ನು ಭಾರತದ ವಿರುದ್ಧ ಉಪಯೋಗಿಸಲಿದ್ದಾರೆ. ಕೊನೆಗೆ ಇದರಿಂದ ನೇಪಾಳಕ್ಕೂ ಲಾಭವಿಲ್ಲ. ಇದೆಲ್ಲ ನೇಪಾಳ ಮತ್ತು ಭಾರತದ ನಡುವೆ ಇರಬೇಕಾದ ಸಂಗತಿ. ಇದರ ನಡುವೆ ನೀನು ಚೀನಾವನ್ನು ಎಳೆದು ತರಲು ಹೇಗೆ ಸಾಧ್ಯ? ಭಾರತಕ್ಕೂ ನೇಪಾಳಕ್ಕೂ ಒಂದೇ ಪರಂಪರೆ ಇದೆ. ಚೀನಾವನ್ನು ಅಪ್ಪಿಕೊಳ್ಳುವ ಮೂಲಕ ನೇಪಾಳ ತನ್ನ ಸಾರ್ವಭೌಮತ್ವವನ್ನು ತಾನೇ ನಾಶ ಮಾಡಿಕೊಳ್ಳುತ್ತಿದೆ.
ಸ್ವರಾಜ್ ಅವರ ಈ ಟ್ವೀಟ್‌ಗೆ ಮೊನಿಶಾ ಇನ್ನೂ ಉತ್ತರಿಸಿಲ್ಲ.
2 ನೇ ಚಾನ್ಸ್ ಕೊಟ್ಟ ಬದುಕಿಗೆ ನಾನು ಗ್ರೇಟ್‌ಫುಲ್; ಮನಿಶಾ ಕೊಯಿರಾಲಾ ಪೋಸ್ಟ್ ವೈರಲ್!