Asianet Suvarna News Asianet Suvarna News

ಟ್ರೋಲ್​ಗೆ ಡೋಂಟ್​ ಕೇರ್​: ವಿವಾದ ಮೈಮೇಲೆ ಎಳೆದುಕೊಳ್ಳದ ಜಾಣೆ ಮನಿಷಾ ಹೇಳ್ತಾಳೆ ಕೇಳಿ!

ಕೆಲವರು ಚಿತ್ರರಂಗದಿಂದ ಓಡಿಸಲು ಪ್ರಯತ್ನಿಸುತ್ತಾರೆ. ಅದಕ್ಕಾಗಿಯೇ ಏನೇನೋ ಮಾಡುತ್ತಾರೆ. ತಲೆ ಕೆಡಿಸಿಕೊಳ್ಳೋಕೆ  ಆಗ್ತದಾ ಎನ್ನುತ್ತಲೇ ನಟಿ ಮನಿಷಾ ಕೊಯಿರಾಲ  ಹೇಳಿದ್ದೇನೆಂದರೆ...
 

manisha-koirala-answers-if-she-faced-discrimination-in-bollywood-on-trolling
Author
First Published Jan 2, 2023, 4:10 PM IST

ಕ್ಯಾನ್ಸರ್​ನಿಂದ ಸಾವಿನ ಸಮೀಪ ಹೋಗಿ ಗೆದ್ದು ಬಂದ ನೇಪಾಳಿ ಚೆಲುವೆ ಮನಿಷಾ ಕೊಯಿರಾಲ. 2012ರಲ್ಲಿ ಕ್ಯಾನ್ಸರ್‌ಗೆ ತುತ್ತಾಗಿದ್ದ ಈಕೆ ಈಗ ಸಂಪೂರ್ಣ ಚೇತರಿಸಿಕೊಂಡಿದ್ದಾರೆ. ತಾವು ಸಾವನ್ನು ಗೆದ್ದು ಬಂದ ವಿಷಯವನ್ನು ತಮ್ಮ ಆತ್ಮಚರಿತ್ರೆ ‘ಹೀಲ್ಡ್: ಹೌ ಕ್ಯಾನ್ಸರ್ ಗಿವ್ ಮಿ ಎ ನ್ಯೂ ಲೈಫ್’ ಎಂಬ ಪುಸ್ತಕದಲ್ಲಿ ಬರೆದಿದ್ದಾರೆ. ಅದು 2018ರಲ್ಲಿ ಬಿಡುಗಡೆ ಕಂಡಿತ್ತು. ಇದಾದ ಮೇಲೆ ಹೆಚ್ಚಾಗಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳದ ಈ ಚೆಲುವೆ ಈಗ ತಮ್ಮ ವೈಯಕ್ತಿಕ ಮತ್ತು ವೃತ್ತಿಪರ ಜೀವನದಲ್ಲಿ ಕಂಡ  ಏರಿಳಿತಗಳ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. 1991 ರಲ್ಲಿ ಸುಭಾಷ್ ಘಾಯ್ ಅವರ ಸೌದಾಗರ್‌ನೊಂದಿಗೆ ಪದಾರ್ಪಣೆ ಮಾಡಿದ 52 ವರ್ಷ ವಯಸ್ಸಿನ ಮನಿಷಾ ಈಗ  ತಮ್ಮ  ಕ್ಯಾನ್ಸರ್ ಮತ್ತು ವಿಫಲ ದಾಂಪತ್ಯದ ಕುರಿತು ಡೋಂಟ್​ ಕೇರ್​ ಎಂದಿದ್ದಾರೆ. ಟ್ರೋಲ್​ ಮಾಡುವವರಿಗೆ ತಕ್ಕ ಉತ್ತರ ನೀಡಿದ್ದಾರೆ.

ಸಿನಿ ರಂಗದಲ್ಲಿ ಇತ್ತೀಚೆಗೆ ಮೀ ಟೂ, (Mee too) ಬಾಡಿ ಶೇಮಿಂಗ್​ (Body shaming) ಇತ್ಯಾದಿ ವಿಷಯಗಳು ಬಹಳ ಸದ್ದು ಮಾಡುತ್ತಿರುವ ಈ ಸಂದರ್ಭದಲ್ಲಿ ನಟಿ ಮನಿಷಾ ಕೊಯಿರಾಲ ಅವರು ಏನು ಹೇಳುತ್ತಾರೆ ಎಂದು ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದರು.  ಆದರೆ ಜಾಣ ಉತ್ತರ ನೀಡುವ ಮೂಲಕ ಈಕೆ ಯಾವುದೇ ವಿವಾದವನ್ನು ತಲೆಯ ಮೇಲೆ ಎಳೆದುಕೊಳ್ಳಲು ಹೋಗಲಿಲ್ಲ. 

ಮೊದಲ ಫೋಟೋ ಶೂಟ್ ಫೋಟೋಸ್ ಶೇರ್ ಮಾಡಿಕೊಂಡ ಮನೀಷಾ

ಬಾಲಿವುಡ್​ನಲ್ಲಿ ಟ್ರೋಲಿಂಗ್​ (Trolling) ಮತ್ತು ತಾರತಮ್ಯವನ್ನು ನಾನು ಎದುರಿಸಿದ್ದರೂ ಅದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಿಲ್ಲ ಎಂದು ಹೇಳುವ ಮೂಲಕ ಜಾಣ ಉತ್ತರ ನೀಡಿದ್ದಾರೆ. ತಮ್ಮ ವಯಸ್ಸು ಅಥವಾ ಹೆಣ್ಣು ಎಂಬ  ಕಾರಣದಿಂದ ಯಾವುದೇ ಪಕ್ಷಪಾತವನ್ನು ಎದುರಿಸಲಿಲ್ಲ, ಈ ವಿಷಯದಲ್ಲಿ ನಾನು ಭಾಗ್ಯಶಾಲಿ ಎಂದಿದ್ದಾರೆ. 

'ಟ್ರೋಲ್​ ಮಾಡೋರು ಮಾಡ್ತಾನೆ ಇರ್ತಾರೆ. ಅದಕ್ಕೆಲ್ಲಾ ತಲೆ ಕೆಡಿಸಿಕೊಳ್ತಾ ಕುಳಿತುಕೊಂಡ್ರೆ ಆಗಲ್ಲ. ಜನರು ಟ್ರೋಲ್​ ಮಾಡ್ತಾರೆ ಎಂದು ನಾನು ಎಂದಿಗೂ ಚಿತ್ರರಂಗದಲ್ಲಿ ಯಾವುದೇ ಅವಕಾಶ ಕಳೆದುಕೊಳ್ಳಲಿಲ್ಲ ಎಂದಿದ್ದಾರೆ.  

ಸಾವಿನ್ನು ಗೆದ್ದು ಬಂದ ಮನೀಷಾ

'ಟ್ರೋಲ್​ ಮಾಡುವುದೇ ಕೆಲವರ ಜಾಯಮಾನ. ಇನ್ನು ಕೆಲವರು ಚಿತ್ರರಂಗದಿಂದ ಓಡಿಸಲು ಪ್ರಯತ್ನಿಸುತ್ತಾರೆ. ಅದಕ್ಕಾಗಿಯೇ ಇಂಥದ್ದೆಲ್ಲಾ ಮಾಡುತ್ತಾರೆ. ಟ್ರೋಲಿಂಗ್​ ಬೇರೆ ಬೇರೆ ರೀತಿಯದ್ದಾಗಿರುತ್ತದೆ. ಇನ್ನು ಕೆಲವರಂತೂ ‘ಓಹ್, ನಿನಗೆ ವಯಸ್ಸಾಗಿದೆ ಮತ್ತು ನೀನು ಇದು ಮತ್ತು ಅದು’ ಎಂದೆಲ್ಲಾ ಹೇಳ್ತಾರೆ.  ವಯಸ್ಸಿಗೆ ತಕ್ಕಂತೆ ವರ್ತಿಸು ಎನ್ನುತ್ತಾರೆ. ಇಂಥದ್ದನ್ನೆಲ್ಲಾ ಬಹಳ  ನೋಡಿದ್ದೇನೆ, ಕೇಳಿದ್ದೇನೆ. ಆದರೆ ಅದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳಲಿಲ್ಲ. ಎಲ್ಲವನ್ನೂ ಡೋಂಟ್​ ಕೇರ್​ ಎಂದೇ ಪರಿಗಣಿಸಿಕೊಂಡು ಬಂದಿದ್ದೇನೆ ಎಂದಿದ್ದಾರೆ. 

ಇಂದಿನ ಚಿತ್ರಗಳು ಮಹಿಳಾ ಪ್ರಧಾನವಾಗಿ ಬರುತ್ತಿರುವುದೂ ತುಂಬಾ ಖುಷಿ ಎಂದಿರುವ ಈಕೆ, ಸಿನಿರಂಗದಲ್ಲಿ ಎಲ್ಲರಂತೆಯೇ ತಾನೂ ನೋವು ಅನುಭವಿಸಿರುವುದು ಇದೆ, ಅದೇನೂ ಹೊಸತಲ್ಲ ಎನ್ನುವ ಮೂಲಕ ಯಾವುದೇ ವಿವಾದಗಳಿಗೆ ಸಿಲುಕಲು ಹೋಗದೇ ಹಾರಿಕೆಯ ಉತ್ತರ ನೀಡಿದ್ದಾರೆ!

ಕ್ಯಾನ್ಸರ್​ (cancer) ಪ್ರಾಣಾಂತಿಕವಲ್ಲ ಎನ್ನುವ ಮೂಲಕ ಕ್ಯಾನ್ಸರ್​ ಪೀಡಿತರಿಗೆ ಭರವಸೆ ತುಂಬಿದ್ದ ನಟಿ ಮನಿಷಾ, ತಾವು ಗುಣಮುಖರಾಗಿ ಬಂದ ಮೇಲೆ ತಮ್ಮ ಇನ್​ಸ್ಟಾಗ್ರಾಂ (instagram) ಖಾತೆಯಲ್ಲಿ ದೀರ್ಘವಾಗಿ ಬರೆದುಕೊಂಡಿದ್ದರು. 'ನಾವು ಈ ರೋಗದ ಬಗ್ಗೆ ಜಾಗೃತಿಯನ್ನು ಹರಡಬೇಕು. ರೋಗಿಗಳಿಗೆ ಭರವಸೆಯ ಮಾತುಗಳನ್ನು ಆಡಬೇಕು. ಈ ಕಾಯಿಲೆಯಿಂದ ಗೆದ್ದು ಬಂದವರು ಅವರ ಕಥೆಗಳನ್ನು ಹೇಳಬೇಕು. ಈ ಮೂಲಕ ಕಾಯಿಲೆಯಿಂದ ಬಳಲುತ್ತಿರುವವರಿಗೆ ಭರವಸೆ ಮೂಡಿಸಬೇಕು. ನಮ್ಮ ಬಗ್ಗೆ ಮತ್ತು ಪ್ರಪಂಚದ ಬಗ್ಗೆ ದಯೆ ತೋರೋಣ. ಎಲ್ಲರ ಆರೋಗ್ಯ ಮತ್ತು ಯೋಗಕ್ಷೇಮಕ್ಕಾಗಿ ನಾನು ಪ್ರಾರ್ಥಿಸುತ್ತೇನೆ' ಎಂದು ಬರೆದುಕೊಂಡಿದ್ದರು.

ಅಂದಹಾಗೆ ಮನಿಷಾ, ಸಂಜಯ್ ದತ್ ಅವರ ಜೀವನಚರಿತ್ರೆ ಸಂಜುನಲ್ಲಿ ಕಾಣಿಸಿಕೊಂಡಿದ್ದರು.  ಅಲ್ಲಿ ಅವರು ನರ್ಗೀಸ್ ಪಾತ್ರವನ್ನು ನಿರ್ವಹಿಸಿದ್ದಾರೆ.  ನೆಟ್‌ಫ್ಲಿಕ್ಸ್‌ನಲ್ಲಿ ಓಟಿಟಿ (OTT) ಸಂಕಲನ ಚಲನಚಿತ್ರ 'ಲಸ್ಟ್ ಸ್ಟೋರೀಸ್‌'ನಲ್ಲಿ ಕಾಣಿಸಿಕೊಂಡಿದ್ದಾರೆ. 

Follow Us:
Download App:
  • android
  • ios