ನನ್ನ ಪತಿ ಬೇರೆ ಮಹಿಳೆಯರ ಜೊತೆ ಮಲಗಿದ್ದರು; ಮಂದನಾ ಕರೀಮಿ ಗಂಭೀರ ಆರೋಪ
ನಟಿ ಮಂದನಾ ಕರೀಮಿ(Mandana Karimi) ತನ್ನ ಮಾಜಿ ಪತಿ ಗೌರವ್ ಗುಪ್ತಾ ಬಗ್ಗೆ ಗಂಭೀರ ಆರೋಪ ಮಾಡಿದ್ದಾರೆ. ಗೌರವ್ ಅವರಿಂದ ವಿಚ್ಛೇದನ ಪಡೆದು ದೂರ ಆಗಿರುವ ಮಂದನಾ ತನ್ನ ಮಾಜಿ ಪತಿ ಅನೇಕ ಮಹಿಳೆಯರ ಜೊತೆ ಮಲಗಿದ್ದರು ಎಂದು ಗಂಭೀರ ಆರೋಪ ಮಾಡಿದ್ದಾರೆ.
ಒಟಿಟಿಯಲ್ಲಿ ಪ್ರಸಾರವಾಗುತ್ತಿರುವ ಲಾಕ್ ಅಪ್ ರಿಯಾಲಿಟಿ ಶೋ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಬಾಲಿವುಡ್ ಖ್ಯಾತ ನಟಿ ಕಂಗನಾ ರಣಾವತ್(Kangana Ranaut) ಮತ್ತ ಪ್ರಸಿದ್ಧ ನಿರ್ಮಾಪಕಿ ಏಕ್ತಾ ಕಪೂರ್(Ekta Kapoor) ನಡೆಸಿಕೊಡತ್ತಿರುವ ಲಾಕ್ ಅಪ್ ನಲ್ಲಿ(Lock Upp Show) ಅನೇಕ ವಿವಾದಾತ್ಮಕ ನಟಿಯರು ಸ್ಪರ್ಧಿಗಳಾಗಿ ಭಾಗಿಯಾಗಿದ್ದಾರೆ. ವಿವಾದಾತ್ಮಕ ನಟಿಯರ ಕೆಲವು ಹೇಳಿಕೆಗಳು ಭಾರಿ ಚರ್ಚೆಯಾಗುತ್ತಿದೆ. ಅನೇಕರು ತನ್ನ ಜೀವನದ ಕರಾಳ ರಹಸ್ಯವನ್ನು ಲಾಕ್ ಅಪ್ ಶೋನಲ್ಲಿ ತೆರೆದಿಡುತ್ತಿದ್ದಾರೆ. ಈ ಶೋನ ಹೈಲೆಟ್ ಆಗಿದ್ದ ಪೂನಂ ಪಾಂಡೆ ತನ್ನ ಮಾಜಿ ಪತಿ ಕೊಡುತ್ತಿದ್ದ ಹಿಂಸೆಯ ಬಗ್ಗೆ ಬಹಿರಂಗ ಪಡಿಸಿದ ಬೆನ್ನಲ್ಲೇ ಇದೀಗ ಮತ್ತೋರ್ವ ಸ್ಪರ್ಧಿ ಮಾಜಿ ಪತಿಯ ಬಗ್ಗೆ ಗಂಭೀರ ಆರೋಪ ಮಾಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ನಟಿ ಮಂದನಾ ಕರೀಮಿ(Mandana Karimi) ತನ್ನ ಮಾಜಿ ಪತಿ ಗೌರವ್ ಗುಪ್ತಾ ಬಗ್ಗೆ ಗಂಭೀರ ಆರೋಪ ಮಾಡಿದ್ದಾರೆ. ಗೌರವ್ ಅವರಿಂದ ವಿಚ್ಛೇದನ ಪಡೆದು ದೂರ ಆಗಿರುವ ಮಂದನಾ ತನ್ನ ಮಾಜಿ ಪತಿ ಅನೇಕ ಮಹಿಳೆಯರ ಜೊತೆ ಮಲಗಿದ್ದರು, ನಾವು ಬೇರೆ ಆಗಿ ನಾಲ್ಕು ವರ್ಷಗಳಲ್ಲಿ ಗೌರವ್ ಯಾವ ಯಾವ ಮಹಿಳಯರ ಜೊತೆ ಮಲಗಿದ್ದಾರೆ ಎನ್ನುವುದು ತನಗೆ ಗೊತ್ತಿದೆ ಎಂದು ಹೇಳಿದರು.
ಮಿಡಲ್ ಫಿಂಗರ್ ತೋರಿಸಿದ ಪೂನಂ ಪಾಂಡೆ; ನಿನಗೆ ಅದು ಬೇಕಾ ಎಂದ ನಟ!
ಲಾಕ್ ಅಪ್ ನಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿರುವ ಮಂದನಾ ಕರೀಮಿ ಅವರಿಗೆ ಅಜ್ಮಾ ಫಲ್ಲಾದ್ ಬಾಯ್ ಫ್ರೆಂಡ್ ಇದ್ದಾರಾ ಎಂದು ಪ್ರಶ್ನೆ ಮಾಡಿದರು. ಇದರಿಂದ ಮಂದನಾ ನಾಚಿ ನೀರಾದರು. ಬಳಿಕ ನೋ ಕಾಮೆಂಟ್ಸ್ ಎಂದು ಹೇಳಿ ಜಾರಿಕೊಳ್ಳುತ್ತಾರೆ. ಈ ಸಮಯದಲ್ಲಿ ತನ್ನ ಮದುವೆ ಬಗ್ಗೆ ಮಾತನಾಡಿದ ಮಂದನಾ, ನಾವು ಎರಡೂವರೆ ವರ್ಷಗಳಿಂದ ಡೇಟಿಂಗ್ ಮಾಡಿ ಬಳಿಕ ನಿಶ್ಚಿತಾರ್ಥ ಮಾಡಿಕೊಂಡೆವು. ನಂತರ ಮದುವೆ ಆದೆವು. ನಾವು 8 ತಿಂಗಳ ಕಾಲ ಒಟ್ಟಿಗೆ ವಾಸಿಸಿದವು. ನಂತರ ನಮ್ಮ ಸಂಬಂಧ ಹದೆಗೆಟ್ಟಿತು. ನಂತರ ಬೇರೆಯಾದೆವು. 2021ರಲ್ಲಿ ನಾವು ವಿಚ್ಛೇದನ ಪಡೆದುಕೊಂಡೆವು.
ಜನರು ವೋಟ್ ಮಾಡಿದರೆ ಕ್ಯಾಮೆರಾ ಮುಂದೆ ಶರ್ಟ್ ಬಿಚ್ಚುವೆ: ಪೂನಂ ಪಾಂಡೆ
ಈ ನಾಲ್ಕು ವರ್ಷಗಳಲ್ಲಿ ಅವರು ನನಗೆ ಗೊತ್ತಿರುವವರ ಜೊತೆ ಮಲಗಿದ್ದರು ಎಂದು ಗಂಭೀರ ಆರೋಪ ಮಾಡಿದರು. ಮಾಜಿ ಪತಿ ತನಗೆ ವಿಚ್ಛೇದನ ನೀಡಲು ಏಕೆ ಬಯಸಿಲ್ಲ ಎಂದು ಅಜ್ಮಾ, ಮಂದನಾರನ್ನು ಕೇಳಿದರು. ಇದಕ್ಕೆ ಉತ್ತರಿಸಿದ ಮಂದನಾ ಇದು ತುಂಬಾ ದೀರ್ಘವಾದ ಕಥೆಯಾಗಿದ್ದು, ತನ್ನ ರಹಸ್ಯದ ಭಾಗವಾಗಿದೆ ಎಂದು ಮಂದನಾ ಹೇಳಿದರು. ಲಾಕ್ ಅಪ್ ಶೋನಲ್ಲಿ ಅನೇಕ ರಹಸ್ಯ ವಿಚಾರಗಳು ಬಹಿರಂಗವಾಗುತ್ತಿವೆ. ಕೆಲವು ಸಂಗತಿಗಳು ನೋಡುಗರಿಗೆ ಅಚ್ಚರಿವುಂಟುಮಾಡುತ್ತಿದೆ. ಇನ್ನು ಯಾವೆಲ್ಲ ವಿಚಾರಗಳು ಹೊರಬರಲಿದೆ ಎಂದು ಕಾದು ನೋಡಬೇಕು.