ಬಾಲಿವುಡ್‌ ಎವರ್‌ ಸ್ಮೈಲಿಂಗ್ ಫೇಸ್‌ ಸುಶಾಂತ್‌ ಸಿಂಗ್‌ ಇನ್ನಿಲ್ಲವೆಂಬ ನೋವು ಅಭಿಮಾನಿಗಳನ್ನು ಕಾಡುತ್ತಿದೆ. ಪ್ರಕರಣಕ್ಕೆ ಕಾರಣಕರ್ತರಾದವರನ್ನು ವಿಚಾರಣೆಯನ್ನು ಸಿಬಿಐ ನಡೆಸುತ್ತಿದೆ. ಆದರೆ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ಹೇಳಿಕೆ ಸರಿಯಲ್ಲ ಎಂದು ಬಾಲಿವುಡ್‌ ಮತ್ತೊಬ್ಬ ಬೋಲ್ಡ್ ನಟಿ ತಾಪ್ಸಿ ಹಾಗೂ ಟಾಲಿವುಡ್‌ ನಟಿ ಲಕ್ಷ್ಮಿ ಮಂಚು ಟ್ಟೀಟ್ ಮಾಡಿದ್ದಾರೆ.

ಸುಶಾಂತ್ ಮಾಜಿ ಗರ್ಲ್‌ಫ್ರೆಂಡನ್ನು ವಿಧವೆ ಎಂದ ನಟಿ ರಿಯಾ ಚಕ್ರವರ್ತಿ..!

ಸುಶಾಂತ್‌ ಸಾವಿನ ಹಿಂದೆ ಅನೇಕ ಸ್ಟಾರ್ ನಟರ ಕೈವಾಡವಿದೆ, ಎಂದು ಕೆಲವರ ಹೆಸರು ಕೇಳಿ ಬಂದಿತ್ತು. ಆದರೆ ಪ್ರತ್ಯೇಕವಾಗಿ ವಿಚಾರಣೆಯಲ್ಲಿ ಭಾಗಿಯಾಗುತ್ತಿರುವುದು ನಟಿ ರಿಯಾ ಚಕ್ರವರ್ತಿ ಮಾತ್ರ. ಕೆಲವು ದಿನಗಳ ಹಿಂದೆ ರಾಷ್ಟ್ರೀಯ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಭಾಗಿಯಾಗಿದ್ದ ರಿಯಾ ಹೇಳಿಕೆಗಳನ್ನು ವಿರೋಧಿಸಿರುವ ನೆಟ್ಟಿಗರು, ಸೋಷಿಯಲ್ ಮೀಡಿಯಾದಲ್ಲಿ ಈಗ ಸಮ್ಮಿಶ್ರ ಅಭಿಪ್ರಾಯ ವ್ಯಕ್ತ ಪಡಿಸುತ್ತಿದ್ದಾರೆ. ಇನ್ನು ಕೆಲವರು ರಿಯಾ ತಪ್ಪಿಲ್ಲ ಎಂದು ನಟಿ ಪರ ನಿಂತಿದ್ದಾರೆ.

ತಾಪ್ಸಿ -ಲಕ್ಷ್ಮಿ ಹೇಳಿಕೆ:
'ರಿಯಾ ಚಕ್ರವರ್ತಿ ಹಾಗೂ ರಾಜ್‌ದೀಪ್‌ ಸರ್‌ದೇಸಾಯಿ ಅವರ ಸಂದರ್ಶನವನ್ನು ನಾನು ಸಂಪೂರ್ಣವಾಗಿ ವೀಕ್ಷಿಸಿರುವೆ. ಇದರ ಬಗ್ಗೆ ನಾನು ಮಾತನಾಡಬೇಕಾ ಎಂದು ಹಲವು ಬಾರಿ ಯೋಚಿಸಿದೆ. ಇದು ಸರಿಯಾದ ಸಮಯ.  ಈ ವಿಚಾರದ ಬಗ್ಗೆ ಹಲವುರು ಮೌನವಾಗಿರಲು ಕಾರಣವೇ ಮಾಧ್ಯಮಗಳು. ಆಕೆಯನ್ನು ಮಾನ್ಸಟರ್‌ ರೀತಿಯಲ್ಲಿ ಪ್ರತಿಬಿಂಬಿಸಿರುವುದಕ್ಕೆ. ಘಟನೆ ಹಿಂದಿರುವ ಸತ್ಯ ನನಗೆ ಗೊತ್ತಿಲ್ಲ. ಆದರೆ ನಾನು ಸತ್ಯ ತಿಳಿದುಕೊಳ್ಳಬೇಕು. ಪ್ರಾಮಾಣಿಕವಾದ ಸತ್ಯವನ್ನು ನಾನು ತಿಳಿದುಕೊಳ್ಳಬೇಕಾಗಿದೆ. ನ್ಯಾಯಂಗ ಹಾಗೂ ಏಜನ್ಸಿ ಬಗ್ಗೆ ನನಗೆ ಸಂಪೂರ್ಣವಾದ ನಂಬಿಕೆ ಇದೆ. ನಾವು ಸತ್ಯ ಹೊರ ಬರುವವರೆಗೂ ಸುಮ್ಮನಿರ ಬೇಕು. ರಿಯಾಳ ಕುಟುಂಬವನ್ನು ಈ ಪ್ರಕರಣಕ್ಕೆ ಸಂಬಂಧಿಸದಂತೆ ಆರೋಪಿಸಬಾರದು. ಮಾನಸಿಕವಾಗಿ ತೊಂದರೆ ಕೊಡಬಾರದು.  ಒಂದು ವೇಳೆ ನನಗೆ ಇಂಥ ಪರಿಸ್ಥಿತಿ ಎದುರಾದರೆ ನನ್ನ ಸಹೋದ್ಯೋಗಿಗಳು ನನ್ನ ಪರ ನಿಲ್ಲಬೇಕು, ಅಟ್‌ಲೀಸ್ಟ್‌ ನನ್ನ ಬಗ್ಗೆ ತಿಳಿದುಕೊಂಡಿರುವವರಾದರೂ ನನ್ನ ಪರ ನಿಲ್ಲಬೇಕು. ಆದರೆ ಇಲ್ಲಿ ಹಾಗೆ ನಡೆಯುತ್ತಿಲ್ಲ ಇದರಿಂದ ನನಗೆ ತುಂಬಾನೇ ಬೇಸರವಾಗಿದೆ. ನಾನು ರಿಯಾ ಪರ ನಿಲ್ಲುತ್ತೇನೆ' ಎಂದು ಲಕ್ಷ್ಮಿ ಮಂಚು ಟ್ಟೀಟ್‌ ಮಾಡಿದ್ದಾರೆ.

 

ಲಕ್ಷ್ಮಿ ಟ್ಟೀಟ್‌ ಮಾಡಿದ ಕೆಲವೇ ಸಿಮಿಷಗಳಲ್ಲಿ ನಟಿ ತಾಪ್ಸಿ ಟ್ಟೀಟ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ. 'ನನಗೆ ಸುಶಾಂತ್ ಹಾಗೂ ರಿಯಾ ಇಬ್ಬರು ವೈಯಕ್ತಿಕವಾಗಿ ಗೊತ್ತಿಲ್ಲ, ಆದರೆ ನಾನು ಮನುಷ್ಯರಾಗಿ ಕಾನೂನು ನ್ಯಾಯ ಕೊಡುವವರೆಗೂ ಕಾಯೋಣ.ಭಾರತೀಯ ನ್ಯಾಯ ವ್ಯವಸ್ಥೆ ಮೇಲ ನಂಬಿಕೆ ಇಡೋಣ,' ಎಂದು ತಾಪ್ಸಿ ಬರೆದಿದ್ದಾರೆ.

ಸುಶಾಂತ್ ಗ್ರೇಟ್ ಬಾಯ್‌ಫ್ರೆಂಡ್, ಆತನಿಲ್ಲದೆ ಬದುಕೋದು ಕಷ್ಟವಾಗ್ತಿದೆ ಎಂದ ರಿಯಾ