ಮಲಯಾಳಂ ಚಿತ್ರರಂಗದಲ್ಲಿ 50 ವರ್ಷ ಪೂರೈಸಿದ ಮಮ್ಮುಟ್ಟಿಗೆ ವಿಶೇಷ ಗೌರವ ಕಾರ್ಯಕ್ರಮ. ಬೇಡವೇ ಬೇಡ ಎಂದು ಸ್ಟಾರ್ ನಟ. 

ಭಾರತೀಯ ಚಿತ್ರರಂಗ ಕಂಡಂತಹ ಅದ್ಭುತ ನಟ, ಸೂಪರ್ ಸ್ಟಾರ್ ಮಮ್ಮುಟ್ಟಿ ಬಣ್ಣದ ಲೋಕಕ್ಕೆ ಕಾಲಿಟ್ಟು 50 ವರ್ಷ ಪೂರೈಸಿದ್ದಾರೆ. ಆಗಸ್ಟ್‌ 6ರಂದು ಸರಳವಾಗಿ ಕುಟುಂಬಸ್ಥರು ಹಾಗೂ ಸಿನಿ ಆಪ್ತರ ಜೊತೆ ಸಂಭ್ರಮ ಆಚರಿಸಿಕೊಂಡಿದ್ದಾರೆ. ಆದರೆ ಕೇರಳ ಸರ್ಕಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭಾಗಿಯಾಗಲು ನಿರಾಕರಿಸಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹಿರಿಯ ನಟ ಮಮ್ಮುಟಿ ಸೇರಿ 300 ಮಂದಿ ವಿರುದ್ಧ ದೂರು ದಾಖಲು!

ಹೌದು! ಪಿಣರಾಯಿ ಸರ್ಕಾರ ಮಲಯಾಳಂ ಸೂಪರ್ ಸ್ಟಾರ್‌ ಈ ಸಾಧನೆಯನ್ನು ಗೌರವಿಸಬೇಕು ಎಂಬ ಉದ್ದೇಶದಿಂದ ಸರಳ ಕಾರ್ಯಕ್ರಮವನ್ನು ಹಮ್ಮಿಕೊಳ್ಳವ ನಿರ್ಧಾರ ಮಾಡಿತ್ತು. ಈ ವಿಚಾರವನ್ನು ಮಮ್ಮುಟ್ಟಿ ಅವರಿಗೆ ತಿಳಿಸಿದಾಗ ಬೇಡವೇ ಬೇಡ ಎಂದು ನಿರಾಕರಿಸಿದ್ದಾರಂತೆ. ಹೀಗೆಂದು ಮಲಯಾಳಂನ ಖಾಸಗಿ ವೆಬ್‌ಸೈಟ್‌ಗಳು ವರದಿ ಮಾಡಿದೆ. 

'ಸರ್ಕಾದಿಂದ ಅಂತಹ ಯಾವುದೇ ಕಾರ್ಯಕ್ರಮ ನಡೆಯುತ್ತಿಲ್ಲ. ಸಾರ್ವಜನಿಕರ ಹಣದಿಂದ ಸುವರ್ಣ ಮಹೋತ್ಸವ ಆಚರಿಸಿಕೊಳ್ಳಲು ನಾನು ಬಯಸುವುದಿಲ್ಲ' ಎಂದು ಮಮ್ಮುಟ್ಟಿ ಹೇಳಿದ್ದಾರೆ. ಕೋವಿಡ್‌ ಸಂದರ್ಭದಲ್ಲಿ ಹಣ ಖರ್ಚು ಮಾಡಿ ಸಂಭ್ರಮಿಸುವುದು ಬೇಡ ಎಂಬ ಮಮ್ಮುಟ್ಟಿ ನಿರ್ಧಾರವನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಸರ್ಕಾರಕ್ಕಿಂತ ನೀವು ಜನರ ಕಷ್ಟವನ್ನು ಅರ್ಥ ಮಾಡಿಕೊಂಡಿದ್ದೀರಿ ಭೇಷ್ ಎಂದು ಎಲ್ಲೆಡೆ ಕಾಮೆಂಟ್ ಮಾಡುತ್ತಿದ್ದಾರೆ.