ಕೋವಿಡ್ ನಿಮಯ ಉಲ್ಲಂಘಿಸಿದ ಮಲಯಾಳಂ ಹಿರಿಯ ನಟ ಮಮ್ಮುಟಿ. 300 ಮಂದಿ ವಿರುದ್ಧ ಪ್ರಕರಣ ದಾಖಲು.
ಕಳೆದ ಮಂಗಳವಾರ ಕೋಯಿಕ್ಕೋಡನ್‌ನಲ್ಲಿರುವ ಮೈತ್ರಾ ಆಸ್ಪತ್ರೆಯಲ್ಲಿ ರೋಬೋಟ್ ನೆರವಿನ ಶಸ್ತ್ರಚಿಕಿತ್ಸೆ ಸೇವೆ ಉದ್ಘಾಟನೆ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಮಲಯಾಳಂ ಹಿರಿಯ ನಟ ಮಮ್ಮುಟಿ ತೆರಳಿದ್ದರು. ಈ ವೇಳೆ ಕೋವಿಡ್ ನಿಯಮ ಉಲ್ಲಂಘನೆ ಆಗಿದೆ ಎಂದು ಪೊಲೀಸರು ಆರೋಪಿಸಿ, ನಟ ಸೇರಿ ಉಳಿದ 300 ಜನರ ವಿರುದ್ಧ ದೂರು ದಾಖಲಿಸಿದ್ದಾರೆ.
ಸರ್ಕಾರಿ ಜಾರಿಗೊಳಿಸಿರುವ ಕೋವಿಡ್ ನಿಯಮ ಉಲ್ಲಂಘಿಸಿ ಸಮಾರಂಭದಲ್ಲಿ ಹೆಚ್ಚಿನ ಜನ ಸೇರಿದ್ದರು. ಸಾಂಕ್ರಾಮಿಕ ರೋಗ ಕಾಯ್ದೆ ಅನ್ವಯ ಕೇರಳ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ವಿಡಿಯೋ ಹಾಗೂ ಫೋಟೋವನ್ನು ಪರಿಶೀಲಿಸಿ, ಕಾರ್ಯಕ್ರಮ ಆಯೋಜಿಸಿದ್ದ ಆಸ್ಪತ್ರೆಯ ಆಡಳಿತ ಸಿಬ್ಬಂದಿ ವಿರುದ್ಧವೂ ಕೇಸ್ ದಾಖಲಿಸಿದ್ದಾರೆ ಪೊಲೀಸರು.
ಮಮ್ಮುಟ್ಟಿ-ಸಲ್ಫತ್ ಜೊತೆಯಾಗಿ 42 ವರ್ಷ..! ಟೈಂ ಸಿಕ್ಕಾಗಲೆಲ್ಲಾ ಹೆಂಡ್ತಿಗೆ ಫೋನ್ ಮಾಡೋ ಮೆಗಾಸ್ಟಾರ್
'ಸಮಾರಂಭದ ಆರಂಭದಲ್ಲಿ ಕೋವಿಡ್ ನಿಯಮಗಳನ್ನು ಪಾಲನೆ ಮಾಡಿದ್ದರು. ಆದರೆ ಕೆಲ ಸಮಯದ ಬಳಿಕ ಸಮಾರಂಭದಲ್ಲಿ ಭಾಗವಹಿಸಿದವರು ಸಾಮಾಜಿಕ ಅಂತರ ಕಾಪಾಡಿಕೊಳ್ಳಲಿಲ್ಲ. ಆಗಮಿಸಿದ ಅತಿಥಿಗಳು ಬೇಜವಾಬ್ದಾರಿಯಿಂದ ನಡೆದುಕೊಂಡರು,' ಎಂದು ಪೊಲೀಸರು ತಿಳಿಸಿದ್ದಾರೆ. 'ಸಮಾರಂಭಕ್ಕೆ ಸೆಲೆಬ್ರಿಟಿಗಳು ಬಂದಿದ್ದರಿಂದ ಅನಿರೀಕ್ಷತ ಸನ್ನಿವೇಶಗಳು ಎದುರಾಯ್ತು,' ಎಂದು ಮೈತ್ರಾ ಆಸ್ಪತ್ರೆ ಸಿಬ್ಬಂದಿ ಹೇಳಿಕೆ ನೀಡಿದ್ದಾರೆ.
ಕೇರಳದಲ್ಲಿ ದೇಶದ ಸುಮಾರು ಅರ್ಧದಷ್ಟು ಕೊರೋನಾ ಪ್ರಕರಣಗಳು ದಾಖಲಾಗಿದ್ದು, ಕರ್ನಾಟಕ ಗಡಿ ಜಿಲ್ಲೆಯಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಕೇರಳದಲ್ಲಿ ರೋಗ ಹೆಚ್ಚು ಹರಡದಂತೆ ತಡೆಯಲು ಅಗತ್ಯ ಕ್ರಮಗಳನ್ನು ಕೈಗೊಂಡಿದ್ದು, ವೀಕೆಂಡ್ ಲಾಕ್‌ಡೌನ್‌ವಂಥ ಕ್ರಮಗಳಿಗೂ ಸರಕಾರ ಮುಂದಾಗಿದೆ.
