ಮಲಯಾಳಂ 'ವಿನ್ನಲ್ ಮುರಲಿ' ಚಿತ್ರತಂಡ ಕೇರಳದ ಪೆರಿಯಾರ್‌ ನದಿ ಬಳಿ ಸನ್ನಿವೇಶವೊಂದಕ್ಕೆ ಸೆಟ್‌ ಹಾಕಲಾಗಿತ್ತು. ಲಾಕ್‌ಡೌನ್ ಸಮಯದಲ್ಲಿ ಕೆಲ ದುಷ್ಕರ್ಮಿಗಳು ಅದನ್ನು ಹಾಳು ಮಾಡಿದ್ದಾರೆ.

ಶೂಟಿಂಗ್ ಸೆಟ್‌ ಹಾಕಲಾಗಿದ್ದ ಸ್ಥಳಕ್ಕೆ ತುಂಬಾ ಸಮೀಪವಾಗಿ ಹಿಂದು ದೇವಾಲವಿತ್ತು. ಮಹದೇವನ ದೇವಸ್ಥಾನದ ಬಳಿ ಚಿತ್ರೀಕರಣ ಮಾಡುವುದು ಬೇಡ ಅದು ಸರಿಯಲ್ಲ ಎಂದು ಅನೇಕ ಬಾರಿ ದೇವಾಲಯದ ಆಡಳಿತದವರು ಮುನ್ನೆಚರಿಕೆ ನೀಡಿದ್ದಾರೆ. ಅವರ ಬೆದರಿಕೆ ಅಂಜದೆ ಚಿತ್ರರಂಗ ಚಿತ್ರೀಕರಿಸುತ್ತಿತ್ತು . ಕೊರೋನಾ ವೈರಸ್‌ ಲಾಕ್‌ಡೌನ್‌ನಿಂದಾಗಿ ಕೆಲ ತಿಂಗಳುಗಳ ಕಾಲ ಚಿತ್ರೀಕರಣ ರದ್ದು ಮಾಡಲಾಗಿತ್ತು. ಈ ಸಮಯದಲ್ಲಿ ಅನೇಕ ಹಿಂದು ಸಂಘಟನೆಗಳು ಭಜರಂಗದಳದವರಿಗೆ ಇದನ್ನು ತೆರವು ಮಾಡುವಂತೆ ಒತ್ತಾಯ ಮಾಡಿದ್ದಾರೆ. 

ಸೋಶಿಯಲ್‌ ಮಿಡೀಯಾದಲ್ಲಿ ಫ್ಯಾನ್ಸ್‌ಗೆ ಸೆಲೆಬ್ರೆಟಿಗಳ ಈದ್‌ ಮುಬಾರಖ್‌

ದೇವಾಲಯದವರು ಹಾಗೂ ಸಂಘದವರು ಸುತ್ತಿಗೆ ಹಾಗೂ ಪಿಕಾಸಿಯನ್ನು ಬಳಸಿ ಸೆಟ್‌ ನಾಶ ಮಾಡಿದ್ದಾರೆ. ಈ ಪ್ರಕರಣವನ್ನು ಚಿತ್ರತಂಡದ ಪೊಲೀಸರಿಗೆ ಹಾಗೂ ಕೇರಳ ಸಿಎಂಗೆ ದೂರು ನೀಡಿದ್ದಾರೆ. ಇದನ್ನು ಅಂತರಾಷ್ಟ್ರಿಯ ಹಿಂದು ಪರಿಷತ್ ಗೆ ಸೇರಿದ ಹರಿ ಎಂಬಾತ ಸೆಟ್‌ ಹಾಳು ಮಾಡುತ್ತಿರುವ ಫೋಟೋವನ್ನು ಫೇಸ್‌ಬುಕ್‌ನಲ್ಲಿ ಶೇರ್ ಮಾಡಿಕೊಂಡು ಹೆಮ್ಮೆಯಿಂದ ಹೇಳಿಕೊಂಡಿದ್ದಾನೆ ಇದಕ್ಕೆ  ಭಜರಂಗದಳ ಜಿಲ್ಲಾಧ್ಯಕ್ಷ ಧನ್ಯವಾದ ತಿಳಿಸಿದ್ದಾರೆ. 

ಶ್ರೀದೇವಿ ಕಾರಣದಿಂದ ಅಣ್ಣ ಬೋನಿ ಮೇಲೆ ಸಿಟ್ಟಾಗಿದ್ದ ಅನಿಲ್‌ ಕಪೂರ್‌

ಈ ಎಲ್ಲಾ ಆಧಾರಗಳೊಂದಿಗೆ ಪೊಲೀಸರು ಆತನನ್ನು ಹಾಗೂ ತಂಡದವರನ್ನು ಬಂಧಿಸಿದ್ದಾರೆ. ಈ ಘಟನೆ ಬಗ್ಗೆ ಕೇರಳ ಸಿಎಂ ಮಾತಮಾಡಿದ್ದಾರೆ. 'ಈ ರೀತಿಯ ಗಲಾಟೆಗೆ ಕೇರಳದಲ್ಲಿ ಜಾಗವಿಲ್ಲ. ಲಕ್ಷಾಂತರ  ವೆಚ್ಚದಿಂದ ಸೆಟ್‌ ಹಾಕಲಾಗುತ್ತದೆ. ಲಾಕ್‌ಡೌನ್‌ ಇದ್ದ ಕಾರಣ ಶೂಟಿಂಗ್ ಮುಂದೂಡಲಾಗಿದ್ದು ಇಲ್ಲವಾದರೆ ಅವರ ಚಿತ್ರೀಕರಣ ಮಾಡಿ ಮುಗಿಸುತ್ತಿದ್ದರು. ಈ ಘಟನೆಯನ್ನು ಕೇರಳ ಸರ್ಕಾರ ಸಹಿಸುವುದಿಲ್ಲ. ಅವರಿಗೆ ಶಿಕ್ಷೆ ಆಗಲಿದೆ' ಎಂದು ಮಾತನಾಡಿದ್ದಾರೆ.