ಶ್ರೀದೇವಿ ಕಾರಣದಿಂದ ಅಣ್ಣ ಬೋನಿ ಮೇಲೆ ಸಿಟ್ಟಾಗಿದ್ದ ಅನಿಲ್‌ ಕಪೂರ್‌

First Published 25, May 2020, 6:39 PM

ಬಾಲಿವುಡ್‌ನ ಹಿಟ್‌ ಸಿನಿಮಾಗಳ ಹೆಸರಿನಲ್ಲಿ 3 ದಶಕಗಳಿಂದಲೂ ದಾಖಲೆ ಉಳಿಸಿಕೊಂಡಿರುವ ಚಿತ್ರ ಮಿಸ್ಟರ್‌ ಇಂಡಿಯಾ. ಈ ಚಿತ್ರ (ಮೇ 25) ಬಿಡುಗಡೆಯಾಗಿ 33 ವರ್ಷಗಳಾಗಿವೆ. ಅನಿಲ್‌ ಕಪೂರ್‌ ಹಾಗೂ ಶ್ರೀದೇವಿ ನಟಿಸಿರುವ ಈ ಚಿತ್ರ ಬಾಕ್ಸ್‌ಅಫೀಸ್‌ನಲ್ಲಿ ಬಾರಿ ಸದ್ದು ಮಾಡಿತ್ತು. ಈ ಸಮಯದಲ್ಲಿ ಮಿ ಇಂಡಿಯಾ ಸಿನಿಮಾ ಸಮಯದ ಷಟನೆಯೊಂದು ವೈರಲ್‌ ಆಗಿದೆ. ಶ್ರೀದೇವಿ ಕಾರಣದಿಂದ ಅಣ್ಣ ಬೋನಿ ಕಪೂರ್‌ ಮೇಲೆ ಸಿಟ್ಟಾಗಿ ಅನಿಲ್‌ ಕಪೂರ್‌ ಸೆಟ್‌ ಬಿಟ್ಟು ನೆಡೆದಿದ್ದರಂತೆ.

ಬಾಲಿವುಡ್‌ನ ದಿವಾ ಶ್ರೀದೇವಿ ಈಗ ನಮ್ಮ ಜೊತೆ ಇಲ್ಲ. ಆದರೂ ಅವರಿಗೆ ಸಂಬಂಧಿಸಿದ ಘಟನೆಗಳು ಆಗಾಗ ಸದ್ದು ಮಾಡುತ್ತಲೇ ಇರುತ್ತವೆ.

ಶ್ರೀದೇವಿ ಮುಖ್ಯ ಪಾತ್ರದಲ್ಲಿ ನಟಿಸಿರುವ  1987ರ ಮಿಸ್ ಇಂಡಿಯಾ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಬ್ಲಾಕ್ ಬಸ್ಟರ್ ಆಗಿತ್ತು. ಆದರೆ ಈ ಚಿತ್ರದ ಶೂಟಿಂಗ್ ವೇಳೆ ಅನಿಲ್ ಹಾಗೂ ಬೋನಿ ನಡುವೆ ಘರ್ಷಣೆಯಾಗಿತ್ತು. ಸಹೋದರರ ಇಬ್ಬರ ಮನಸ್ಥಾಪಕ್ಕೆ ಕಾರಣವಾಗಿದ್ದು ನಟಿ ಶ್ರೀದೇವಿ.

ಅನಿಲ್ ಮತ್ತು ಶ್ರೀದೇವಿ ಒಟ್ಟಿಗೆ ಅನೇಕ ಚಿತ್ರಗಳನ್ನು ಮಾಡಿದ್ದು ಇಬ್ಬರ ನಡುವೆ ಉತ್ತಮ ಸ್ನೇಹವಿತ್ತು.

ಆದರೆ, ಶ್ರೀದೇವಿ ಕಾರಣ ಅನಿಲ್ ತನ್ನ ಸಹೋದರನ ಮೇಲೆ ಕೋಪಗೊಂಡ ಸಮಯವೊಂದಿತ್ತು. ಆಗಿನ್ನೂ ಶ್ರೀದೇವಿ ಬೋನಿ ಕಪೂರ್‌ರನ್ನು ಮದುವೆಯಾಗಿರಲಿಲ್ಲ.

ಶ್ರೀದೇವಿಯನ್ನು ನೋಡಿದ ನಂತರ ಹುಚ್ಚನಾಗಿದ್ದೇನೆ ಎಂದು ಬೋನಿ ಸಂದರ್ಶನವೊಂದರಲ್ಲಿ ಹೇಳಿದ್ದರು. ಯಾವುದೇ ವೆಚ್ಚದಲ್ಲಿ ಅವಳು ತನ್ನ ಚಿತ್ರದ ನಟಿಯಾಗಿಸಲು ಅವರು ಬಯಸಿದರು. ಅದಕ್ಕಾಗಿ ನಟಿ ತಾಯಿಯ ಮನ ಸಹ ಒಲಿಸಬೇಕಾಗಿತ್ತಂತೆ.

ಶ್ರೀದೇವಿ ಮಿ.ಇಂಡಿಯಾದ ಅಫರ್‌ ರಿಜೆಕ್ಟ್‌ ಮಾಡಿದ್ದರು. ನಂತರ 10 ಲಕ್ಷ ರೂ.ಗಳ ಫೀಸ್‌ ಕೇಳಿದರೆ  ಬೋನಿ 11 ಲಕ್ಷ ರೂ ನೀಡಿದ್ದರು.  ಸಿನಿಮಾಕ್ಕೆ ಹಣ ಹೂಡಿಕೆ ಮಾಡಿದ್ದ ಅನಿಲ್‌ ಕಪೂರ್‌ಗೆ ಶ್ರೀದೇವಿಗೆ ಇಷ್ಟು ದೊಡ್ಡ ಮೊತ್ತ ಕೊಡುವುದು ಇಷ್ಟವಾಗಲಿಲ್ಲ. ಆ ಸಮಯದಲ್ಲಿ ಬೋನಿಗೆ ಅನಿಲ್ ಏನನ್ನೂ ಹೇಳಿರಲಿಲ್ಲ.

ಸುದ್ದಿಗಳ ಪ್ರಕಾರ, ಇದರ ನಂತರ, ಶ್ರೀದೇವಿಗೆ ತಾಯಿಯ ಚಿಕಿತ್ಸೆಗಾಗಿ ಹಣದ ಅಗತ್ಯವಿದ್ದಾಗ, ಬೋನಿ ಅವರಿಗೆ ಸಹಾಯ ಮಾಡಿದರು.ಇದರಿಂದಾಗಿ ಅನಿಲ್‌ ಕಪೂರ್ ಕೋಪಗೊಂಡಿದ್ದು ಮಾತ್ರವಲ್ಲ‌, ಮಿಸ್ಟರ್ ಇಂಡಿಯಾದ ಸೆಟ್‌ನ್ನು ಸಹ ತೊರೆದು ಸಿನಿಮಾ ಮಾಡಲು ನಿರಾಕರಿಸಿದ್ದರು.

ಚಿತ್ರದ ನಿರ್ದೇಶಕ ಶೇಖರ್ ಕಪೂರ್ ಮನವೊಲಿಸಿ ಕೆಲವು ಷರತ್ತುಗಳೊಂದಿಗೆ ಅನಿಲ್‌ ಸಿನಿಮಾ ಶೂಟಿಂಗ್‌ ಹಿಂದಿರುಗಿದರು. ಪ್ರೊಡೆಕ್ಷನ್‌ ಕೆಲಸವನ್ನು ಕೈಗೆತ್ತಿಕೊಂಡು ಲಾಭದಲ್ಲಿ ದೊಡ್ಡ ಭಾಗವನ್ನು ಸಹ ತಮ್ಮ ಹೆಸರಿಗೆ ಮಾಡಿಕೊಂಡರು ಅನಿಲ್.

ಮಿ.ಇಂಡಿಯಾ ಸಿನಿಮಾ ಸೆಟ್‌ನ ಫೋಟೋ.

ಮಿ.ಇಂಡಿಯಾ ಸಿನಿಮಾ ಸೆಟ್‌ನ ಫೋಟೋ.

loader