ಸಿನಿಮಾ ನಟರನ್ನು ನೋಡಲು ಅವರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಯುವ ಸಮೂಹ ಅವರನ್ನು ನೋಡಿ ಮುಗಿಬೀಳಲು ಶುರು ಮಾಡುತ್ತದೆ. ಆದರೆ ಹೀಗೆ ಸೇರಿದ ಜನ ಸಾಗರದಿಂದ ಸಿನಿಮಾ ತಂಡ ತಮ್ಮ ಸಿನಿಮಾದ ಪ್ರಮೋಷನ್ ಮಾಡಲಾಗದೇ ಕಾರ್ಯಕ್ರಮವನ್ನೇ ರದ್ದುಗೊಳಿಸಿದ ಘಟನೆ ದೇವರನಾಡು ಕೇರಳದ ಕೊಝಿಕೋಡ್‌ನಲ್ಲಿ ನಡೆದಿದೆ.

ಕೇರಳ: ಸಿನಿಮಾ ನಟರು ಎಂದರೆ ಬಹುತೇಕ ಜನ ಸಾಮಾನ್ಯರಿಗೆ ಏನೋ ಕ್ರೇಜ್‌, ಸಿನಿಮಾ ನಟರನ್ನು ನೋಡಲು ಅವರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಯುವ ಸಮೂಹ ಅವರನ್ನು ನೋಡಿ ಮುಗಿಬೀಳಲು ಶುರು ಮಾಡುತ್ತದೆ. ಆದರೆ ಹೀಗೆ ಸೇರಿದ ಜನ ಸಾಗರದಿಂದ ಸಿನಿಮಾ ತಂಡ ತಮ್ಮ ಸಿನಿಮಾದ ಪ್ರಮೋಷನ್ ಮಾಡಲಾಗದೇ ಕಾರ್ಯಕ್ರಮವನ್ನೇ ರದ್ದುಗೊಳಿಸಿದ ಘಟನೆ ದೇವರನಾಡು ಕೇರಳದ ಕೊಝಿಕೋಡ್‌ನಲ್ಲಿ ನಡೆದಿದೆ. ಮಲೆಯಾಳಂ ನಟ ಟೊವಿನೋ ಥಾಮಸ್ ಮತ್ತು ಕಲ್ಯಾಣಿ ಪ್ರಿಯದರ್ಶನ್ ಅಭಿನಯದ ಮಲೆಯಾಳಂ ಚಿತ್ರ ತಲ್ಲುಮಾಲಾ ಆಗಸ್ಟ್ 12 ರಂದು ಬಿಡುಗಡೆಗೆ ಸಜ್ಜಾಗುತ್ತಿದೆ. ಹೀಗಾಗಿ ಸಿನಿಮಾ ತಂಡ ಮತ್ತು ನಿರ್ಮಾಪಕರು ಭರ್ಜರಿ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ಹೀಗೆ ಸಿನಿಮಾ ಪ್ರಮೋಷನ್‌ಗೆ ಬಂದವರಿಗೆ ಶಾಕ್ ನೀಡಿದ್ದು, ಸಾಗರದಂತೆ ಸೇರಿದ ಜನ.

ಕೋಜಿಕೋಡ್‌ನ ಮಾಲ್‌ವೊಂದರಲ್ಲಿ ಚಿತ್ರ ತಂಡ ಸಿನಿಮಾ ಪ್ರಚಾರಕ್ಕೆ ಸಮಯ ನಿಗದಿ ಮಾಡಿತ್ತು. ಈ ಬಗ್ಗೆ ಪ್ರಚಾರವನ್ನೂ ಮಾಡಲಾಗಿತ್ತು. ಹೀಗಾಗಿ ಅಲ್ಲಿ ಜನ ಸಾಗರವೇ ಸೇರಿದೆ. ನಿರೀಕ್ಷೆಗೂ ಮೀರಿದ ಸಂಖ್ಯೆಯಲ್ಲಿ ಜನ ಸೇರಿದ್ದರಿಂದ ಜನರನ್ನು ನಿಯಂತ್ರಿಸಲು ಯಾವುದೇ ಸುರಕ್ಷತಾ ಮುಂಜಾಗೃತಾ ಕ್ರಮ ಕೈಗೊಳ್ಳದ ಕಾರಣ ಹಾಗೂ ನಟರ ಸುರಕ್ಷತೆಯ ದೃಷ್ಟಿ ಈ ಎಲ್ಲವನ್ನು ಗಮನಿಸಿ ಚಿತ್ರತಂಡ ಪ್ರಚಾರ ಕಾರ್ಯಕ್ರಮವನ್ನು ರದ್ದುಗೊಳಿಸಿದೆ.

Scroll to load tweet…


ಕೇರಳದ ಕೋಝಿಕ್ಕೋಡ್‌ನಲ್ಲಿರುವ HiLITE ಮಾಲ್‌ನಲ್ಲಿ ಈ ಘಟನೆ ನಡೆದಿದೆ. ಮಾಲ್‌ನಲ್ಲಿ ಜನ ಕಾಲಿಡಲು ಸಾಧ್ಯವಿಲ್ಲದಂತೆ ಕಿಕ್ಕಿರಿದು ತುಂಬಿರುವ ದೃಶ್ಯದ ವಿಡಿಯೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಚಿತ್ರತಂಡವೇ ಅಚ್ಚರಿ ಹಾಗೂ ದಿಗ್ಭ್ರಮೆ ವ್ಯಕ್ತಪಡಿಸಿದೆ. ಒಂದು ವೇಳೆ ಇಲ್ಲಿ ಕಾರ್ಯಕ್ರಮ ನಡೆದಿದ್ದರೂ ಅಪಾಯವಾಗುವ ಸಾಧ್ಯತೆ ಇತ್ತು ಎಂದು ವಿಡಿಯೋ ನೋಡಿದವರು ಆತಂಕ ವ್ಯಕ್ತಪಡಿಸಿದ್ದಾರೆ. 

Scroll to load tweet…

ಈ ಅಭೂತಪೂರ್ವ ಜನಸಮೂಹವನ್ನು ನೋಡಿದ ನಂತರ ತಳ್ಳುಮಾಲ ಚಿತ್ರ ತಂಡವ ಈ ಸಿನಿಮಾ ಪ್ರಚಾರ ಕಾರ್ಯವನ್ನು ರದ್ದುಪಡಿಸಿತ್ತು. ಈ ಚಲನಚಿತ್ರ ವಿತರಕ ಎಬಿ ಜಾರ್ಜ್ ಅವರು ತಮ್ಮ ಟ್ವಿಟರ್ ಹ್ಯಾಂಡಲ್‌ನಲ್ಲಿ ಈ ಮಾಲ್‌ನಲ್ಲಿ ಸೇರಿರುವ ಜನ ಸಮೂಹದ ವೀಡಿಯೊವನ್ನು ಹಂಚಿಕೊಂಡಿದ್ದಾರೆ ಮತ್ತು ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ ಎಂದು ಎಲ್ಲರಿಗೂ ತಿಳಿಸಿದ್ದಾರೆ.

View post on Instagram

ಮಾಲ್ ಅಧಿಕಾರಿಗಳು ಸುರಕ್ಷತಾ ಮಾನದಂಡಗಳನ್ನು ಅನುಸರಿಸದಿರುವ ಬಗ್ಗೆ ಅನೇಕ ಬಳಕೆದಾರರು ತಮ್ಮ ಕಳವಳವನ್ನು ವ್ಯಕ್ತಪಡಿಸಿದ್ದಾರೆ, ಮಾಲ್‌ನೊಳಗೆ ಇಷ್ಟೊಂದು ಜನರು ಸೇರಲು ಅವಕಾಶ ಮಾಡಿಕೊಟ್ಟಿದ್ದಾರೆ. ಅಲ್ಲದೇ ಸಿನಿಮಾದ ನಾಯಕ ನಟ ಟೊವಿನೋ ಥಾಮಸ್ ಅವರು ಕೂಡ ಹೀಗೆ ಸೇರಿದ ಜನಸಾಗರದ ಬಗ್ಗೆ ಮಾತನಾಡುತ್ತಾ ಇನ್ಸ್ಟಾಗ್ರಾಮ್‌ನಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದು, ನಾನು ತನ್ನ ಜೀವನದಲ್ಲಿ ಈ ರೀತಿಯ ಜನ ಜಾತ್ರೆಯನ್ನು ಎಂದೂ ನೋಡಿಲ್ಲ ಎಂದು ಹೇಳಿದರು. ಇಲ್ಲಿಂದ ಜೀವಂತವಾಗಿ ಹಿಂತಿರುಗುತ್ತೇನೆ ಎನ್ನುವ ಖಚಿತತೆಯೂ ಇರಲಿಲ್ಲ ಎಂದಿರುವ ಅವರು ಕೋಜಿಖೋಡ್ ಜನತೆಯ ಪ್ರೀತಿ ಮತ್ತು ಅಭಿಮಾನಕ್ಕೆ ಧನ್ಯವಾದ ಅರ್ಪಿಸಿದರು.

ಸಿದ್ದರಾಮೋತ್ಸವಕ್ಕೆ ಹರಿದು ಬಂದ 10 ಲಕ್ಷ ಜನ: ಜನಸ್ತೋಮ ನೋಡಿ ಕಾಂಗ್ರೆಸ್ಸಿಗರಿಗೇ ಅಚ್ಚರಿ..!

ತಳ್ಳುಮಾಲ ಚಿತ್ರವನ್ನು ಖಲೀದ್ ರೆಹಮಾನ್ ನಿರ್ದೇಶಿಸಿದ್ದಾರೆ ಶೈನ್ ಟಾಮ್ ಚಾಕೊ ಸಹ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರದ ಟ್ರೇಲರ್ ಮೂಲಕ ಹೋಗುವಾಗ, ಕಥಾವಸ್ತುವು ಇಂಟರ್ನೆಟ್ ಸೆಲೆಬ್ರಿಟಿ ಮತ್ತು ವ್ಲಾಗರ್ ಜೀವನದ ಸುತ್ತ ಸುತ್ತುತ್ತದೆ.

ಕೋವಿಡ್‌ಗೆ ರಹದಾರಿ : ಗೋವಾದ ಸುಪ್ರಸಿದ್ಧ ಬೀಚ್‌ನಲ್ಲಿ ಜಾತ್ರೆಯಂತೆ ಸೇರಿದ ಜನ ಸಾಗರ

ಕಳೆದ ಜುಲೈನಲ್ಲಿ, ತಿರುವನಂತಪುರಂ ಮತ್ತು ಕೊಚ್ಚಿಯ ಲುಲು ಮಾಲ್ ಗಳಲ್ಲಿ ಇದೇ ರೀತಿಯ ಜನ ಸಾಗರ ಸೇರಿತ್ತು. ಭಾರೀ ರಿಯಾಯಿತಿ ದರದಲ್ಲಿ ಮಾರಾಟದ ಬಗ್ಗೆ ಪ್ರಚಾರವಾದ ಹಿನ್ನೆಲೆಯಲ್ಲಿ ಸಾವಿರಾರು ಜನರು ಶಾಪಿಂಗ್ ಮಾಡಲು ಮಧ್ಯರಾತ್ರಿಯ ಸಮಯದಲ್ಲಿಯೂ ಕಾಣಿಸಿಕೊಂಡಿದ್ದರು. ಈ ಮಾಲ್‌ಗೆ ಸಾರ್ವಜನಿಕರ ಪ್ರವೇಶಕ್ಕೆ ರಾತ್ರಿ 11:59 ರವರೆಗೆ ಅವಕಾಶ ನೀಡಲಾಗಿತ್ತು. ಆದರೆ ಜುಲೈ 6 ರಂದು ಜುಲೈ 7 ರಂದು ಸೂರ್ಯೋದಯದವರೆಗೂ ಇಲ್ಲಿ ಜನ ಸಾಗರ ಸೇರಿದ್ದರು.