ಮಲಯಾಳಂ ಖ್ಯಾತ ನಟಿ ಮಂಜು ವಾರಿಯರ್(Manju Warrier) ಅವರಿಗೆ ಅವಮಾನ ಮತ್ತು ಬೆದರಿಕೆ ಪ್ರಕರಣದಲ್ಲಿ ಖ್ಯಾತ ನಿರ್ದೇಶಕ ಸನಲ್ ಕುಮಾರ್ ಶಶಿಧರನ್(Sanal Kumar Sasidharan) ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮಲಯಾಳಂ ಖ್ಯಾತ ನಟಿ ಮಂಜು ವಾರಿಯರ್(Manju Warrier) ಅವರಿಗೆ ಅವಮಾನ ಮತ್ತು ಬೆದರಿಕೆ ಪ್ರಕರಣದಲ್ಲಿ ಖ್ಯಾತ ನಿರ್ದೇಶಕ ಸನಲ್ ಕುಮಾರ್ ಶಶಿಧರನ್(Sanal Kumar Sasidharan) ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಜೀವಕ್ಕೆ ಅಪಾಯವಿದೆ ಎಂದು ಹೇಳುವ ಮೂಲಕ ಪದೇ ಪದೇ ಅವಮಾನ ಮತ್ತು ಬೆದರಿಕೆ ಹಾಕಿದ್ದರು ಎಂದು ನಟಿ ಮಂಜು ವಾರಿಯರ್ ದೂರು ನೀಡಿದ್ದರು. ದೂರಿನದ ಆಧಾರದ ಮೇಲೆ ನಿರ್ದೇಶಕ ಸನಲ್ ಕುಮಾರ್ ಶಶಿಧರನ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ತಿರುವನಂತಪುರಂ ನಿವಾಸದಿಂದ ಶಶಿಧರನ್ ಅವರನ್ನು ಪೊಲೀಸರು ವಶಕ್ಕೆ ಪಡೆದ್ದಾರೆ. ಮಂಜು ವಾರಿಯರ್ ಅಭಿನಯದ ಕಯಾಟ್ಟಂ ಸಿನಿಮಾಗೆ ಶಶಿಧರನ್ ನಿರ್ದೇಶನ ಮಾಡಿದ್ದರು. ಇತ್ತೀಚಿಗಷ್ಟೆ 2017ರಲ್ಲಿ ನಡೆದ ಖ್ಯಾತ ನಟಿಯ ಅಪಹರಣ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮಂಜು ವಾರಿಯರ್ ಅವರ ಹೇಳಿಕೆ ದಾಖಲಿಸಿದ್ದರು. ಇದರಲ್ಲಿ ಮಂಜು ವಾರಿಯರ್ ಅವರ ಮಾಜಿ ಪತಿ ಮತ್ತು ಜನಪ್ರಿಯ ನಟ ದಿಲೀಪ್ ಕುಮಾರ್ ಆರೋಪಿಯಾಗಿದ್ದರು.
South Celebrity Divorce: ಸೌತ್ ಸೆಲೆಬ್ರಿಟಿಗಳ ಶಾಕಿಂಗ್ ಡಿವೋರ್ಸ್!
ಮಂಜು ವಾರಿಯರ್ ಪೊಲೀಸರ ಮುಂದೆ ಹೇಳಿಕೆ ದಾಖಲಿಸಿದ ಬಳಿಕ ಶಶಿಧರನ್ ಸಾಮಾಜಿಕ ಜಾಲತಾಣದಲ್ಲಿ ಆಕೆಯ ಜೀವಕ್ಕೆ ಅಪಾಯವಿದೆ ಎಂದು ಪ್ರತಿಕ್ರಿಯಿಸಿದ್ದರು. ಮಂಜು ವಾರಿಯರ್ ಹೇಳಿಕೆ ಬಳಿಕ ತನಿಖಾತಂಡದ ಮುಖ್ಯಸ್ಥರನ್ನು ತೆಗೆದುಹಾಕಲಾಗಿದೆ ಎಂದು ಹೇಳಿದ್ದರು. ಬಳಿಕ ಮತ್ತೆ ಶಶಿಧರನ್ ಮತ್ತೆ ಜೀವಕ್ಕೆ ಅಪಾಯವಿದೆ ಎಂದು ಹೇಳಿದ್ದರು. ಫೇಸ್ ಬುಕ್ ಪೋಸ್ಟ್ ನಲ್ಲಿ ಶಶಿಧರನ್, 'ನಾನು ಮಂಜು ವಾರಿಯರ್ ಅವರಿಗೆ ನನ್ನ ಆತಂಕದ ಬಗ್ಗೆ ಇಮೇಲ್ ಮತ್ತು ಸಂದೇಶವನ್ನು ಕಳುಹಿಸಿದ್ದೇನೆ. ನನ್ನ ಮೊದಲ ಪೋಸ್ಟ್ ಹಾಕುವ ಮೊದಲು ಸಾಮಾಜಿಕ ಜಾಲತಾಣದಲ್ಲಿ ನನ್ನ ಅನುಮಾನಗಳನ್ನು ಬಹಿರಂಗ ಪಡಿಸಲು ಯೋಜಿಸುತ್ತಿದ್ದೇನೆ. ನಾನು ಅವರದಿಂದ ಯಾವುದೇ ಉತ್ತರ ಸ್ವೀಕರಿಸಿಲ್ಲ. ಈ ವಿಚಾರದಲ್ಲಿ ನನಗೆ ಯಾವುದೇ ವೈಯಕ್ತಿಕ ಆಸಕ್ತಿ ಇಲ್ಲ. ಇದರಿಂದ ನಾನು ಅಪಾಯದ ಅಂಚಿನಲ್ಲಿ ಇದ್ದೀನಿ ಎಂದು ಸಂಪೂರ್ಣವಾಗಿ ಗೊತ್ತು. ಮಂಜು ವಾರಿಯರ್ ಹೊರಬರುವ ಸಾಧ್ಯತೆ ಇದೆ. ಅವರು ಅರಾಮಾಗಿ ಇದ್ದಾರೆ. ಆದರೆ ನಾನು ಅಳುತ್ತಿದ್ದೇನೆ' ಹೇಳಿದ್ದಾರೆ.
ಮಂಜು ವಾರಿಯರ್ ಹೊಸ ಫೋಟೋ ವೈರಲ್: ಕೊರಿಯನ್ ನಟಿ ಥರಾನೇ ಕಾಣ್ತೀರಿ ಎಂದ ಫ್ಯಾನ್ಸ್
ಶಶಿಧರನ್ ಅತ್ಯುತ್ತಮ ಸಿನಿಮಾಗಾಗಿ ಕೇರಳ ರಾಜ್ಯ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು. ಓಜಿವುದುವಸತೆ ಕಲೆ ಸಿನಿಮಾಗಾಗಿ 2015ರಲ್ಲಿ ಪ್ರಶಸ್ತಿ ಗೆದ್ದು ಬೀಗಿದ್ದರು. 2017ರಲ್ಲಿ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಿಂದ ತನ್ನ ಎಸ್ ದುರ್ಗಾ ಸಿನಿಮಾವನ್ನು ಕೈಬಿಡಲಾಗಿದೆ ಎಂದು ಶಶಿಧರನ್ ಕರಳ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಈ ಸಿನಿಮಾಗೆ ಮೊದಲು ಸೆಕ್ಸಿ ದುರ್ಗಾ ಎಂದು ಹೆಸರಿಡಲಾತ್ತು. ವಿವಾದದ ಬಳಿಕ ಎಸ್ ದುರ್ಗಾ ಎಂದು ಹೆಸರಿಡಲಾಯಿತು. ಸದಾ ಒಂದಲ್ಲೊಂದು ವಿಚಾರದ ಮೂಲಕ ಸದ್ದು ಮಾಡುತ್ತಲೇ ಇರುವ ಶಶಿಧರನ್ ಇದೀಗ ಪೋಲೀಸರ ವಶದಲ್ಲಿದ್ದಾರೆ.
