ಮಂಜು ವಾರಿಯರ್ ಹೊಸ ಫೋಟೋ ವೈರಲ್: ಕೊರಿಯನ್ ನಟಿ ಥರಾನೇ ಕಾಣ್ತೀರಿ ಎಂದ ಫ್ಯಾನ್ಸ್
ಸ್ಕರ್ಟ್-ಶರ್ಟ್‌ನಲ್ಲಿ ಕಾಣಿಸ್ಕೊಂಡ ಮಂಜು ವಾರಿಯರ್ | ಮಾಲಿವುಡ್ ನಟಿಗೆ ಭಾರೀ ಮೆಚ್ಚುಗೆ | ವಯಸ್ಸು ಸಂಖ್ಯೆ ಮಾತ್ರ ಎಂದ ನೆಟ್ಟಿಗರು
ಮಂಜು ವಾರಿಯರ್ ತನ್ನ ಮುಂಬರುವ ಮಲಯಾಳಂ ಚಿತ್ರ ಚತುರ್ಮುಖಂ ಚಿತ್ರದ ಪ್ರಚಾರದಲ್ಲಿ ನಿರತರಾಗಿದ್ದಾರೆ.
ಇತ್ತೀಚೆಗೆ ಕೇರಳದಲ್ಲಿ ನಡೆದ ಈ ಚಿತ್ರದ ಪ್ರೆಸ್ ಮೀಟ್ ನಿಂದ ತನ್ನ ಫೋಟೋ ಶೇರ್ ಮಾಡಿದ್ದಾರೆ.
42 ವರ್ಷದ ನಟಿ ಫೋಟೋ ಹಂಚಿಕೊಂಡ ಕೂಡಲೇ ತಕ್ಷಣವೇ ಅನೇಕ ಪ್ಲಾಟ್‌ಫಾರ್ಮ್‌ಗಳಲ್ಲಿ ವೈರಲ್ ಆಗಿದೆ.
ಕಾಮೆಂಟ್‌ನಲ್ಲಿ ಅಭಿಮಾನಿಗಳು ಮತ್ತು ಸೆಲೆಬ್ರಿಟಿಗಳು ಮಂಜು ಎಂದಿಗಿಂತಲೂ ಚಿಕ್ಕವರಾಗಿ ಕಾಣುತ್ತಾರೆ ಎಂದು ಹೇಳಿದ್ದಾರೆ.
ಚತುರ್ಮುಖಮ್ ಅವರ ಪ್ರೆಸ್ ಮೀಟ್‌ಗೆ ಅವರು ಬಿಳಿ ಶರ್ಟ್ ಮತ್ತು ಕಪ್ಪು ಬಣ್ಣದ ಸ್ಕರ್ಟ್ ಧರಿಸಿದ್ದರು.
ಅವಳು ಬಿಳಿ ಸ್ನೀಕರ್ಸ್ ಧರಿಸಿ ಲುಕ್ ಕಂಪ್ಲೀಟ್ ಮಾಡಿದ್ದರು.
ಮಂಜು ಫೋಟೋಗೆ ಬಂದ ಕಮೆಂಟ್ಸ್