ಮಲಯಾಳಂ ಚಿತ್ರರಂಗದಲ್ಲ ತನ್ನದೇ ಆದ ಛಾಪು ಮೂಡಿಸಿರುವ ಮಂಜು ವಾರಿಯರ್ ತಮಿಳು ಸ್ಟಾರ್ ಅಜಿತ್ ಜೋತೆ ನಟಿಸಲಿದ್ದಾರೆ ಎನ್ನುವ ಸುದ್ದಿ ಕೇಳಿಬರುತ್ತಿದೆ.ಅಸುರನ್ ಸಿನಿಮಾ ಮೂಲಕ ಮಂಜು ವಾರಿಯರ್ ತಮಿಳು ಸಿನಿಮಾರಂಗಕ್ಕೆ ಕಾಲಿಟ್ಟದ್ದರು. ಇದೀಗ ಅಜಿತ್ ಸಿನಿಮಾಗೆ ನಾಯಕಿಯಾಗುವ ಮೂಲಕ ಮತ್ತೊಮ್ಮೆ ತಮಿಳು ಪ್ರೇಕ್ಷಕರನ್ನು ರಂಜಿಸಲು ಮುಂದಾಗಿದ್ದಾರೆ.

ತೆಲುಗು ಸ್ಟಾರ್ ನಟ ಅಜಿತ್ ಕುಮಾರ್(Ajith Kumar) ವಲಿಮೈ ಸಿನಿಮಾ ಬಳಿಕ ಮತ್ತೊಂದು ಸಿನಿಮಾಗೆ ಸಜ್ಜಾಗಿದ್ದಾರೆ. ಇತ್ತೀಚಿಗಷ್ಟೆ ತೆರೆಗೆ ಬಂದ ವಲಿಮೈ ಸಿನಿಮಾಗೆ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಾಕ್ಸ್ ಆಫೀಸ್ ನಲ್ಲೂ ಸಿನಿಮಾ ಭರ್ಜರಿ ಕಮಾಯಿ ಮಾಡುವಲ್ಲಿ ವಿಫಲವಾಗಿದೆ. ಈ ಸಿನಿಮಾ ನಂತರ ಅಜಿತ್ ಮುಂದಿನ ಸಿನಿಮಾಗೆ ತಯಾರಿ ನಡೆಸುತ್ತಿದ್ದಾರೆ. ಅಂದಹಾಗೆ ಅಜಿತ್ ಮುಂದಿನ ಚಿತ್ರಕ್ಕೆ ವಿನೋದ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಚಿತ್ರಕ್ಕೆ ಬಾಲಿವುಡ್ ಸ್ಟಾರ್ ನಿರ್ಮಾಪಕ ಬೋನಿ ಕಪೂರ್ ಬಂಡವಾಳ ಹೂಡುತ್ತಿದ್ದಾರೆ. ಈಗಾಗಲೇ ಅಜಿತ್ ಜೊತೆ ಕೆಲಸ ಮಾಡಿರುವ ಬೋನಿ ಕಪೂರ್ ಇದೀಗ ಮತ್ತೊಮ್ಮೆ ಅಜಿತ್ ಚಿತ್ರ ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಸದ್ಯ ಚಿತ್ರಕ್ಕೆ AK 61 ಎಂದು ಟೈಟಲ್ ಇಡಲಾಗಿದೆ.

ಅಂದಹಾಗೆ ಇದು ಅಜಿತ್ ನಟನೆಯ 61ನೇ ಸಿನಿಮಾವಾಗಿದೆ. ಇದೀಗ ಈ ಸಿನಿಮಾದ ಬಗ್ಗೆ ಮತ್ತೊಂದು ಸುದ್ದಿ ವೈರಲ್ ಆಗಿದೆ. ಈ ಚಿತ್ರದಲ್ಲಿ ಅಜಿತ್ ಗೆ ನಾಯಕಿಯಾಗಿ ಮಲಯಾಳಂನ ಸ್ಟಾರ್ ನಟಿ ಅಭಿನಯಿಸುತ್ತಿದ್ದಾರೆ ಎನ್ನಲಾಗಿದೆ. ಅದು ಮತ್ಯಾರು ಮಂಜು ವಾರಿಯರ್(Manju Warrier). ಹೌದು, ಮಲಯಾಳಂ ಚಿತ್ರರಂಗದಲ್ಲ ತನ್ನದೇ ಆದ ಛಾಪು ಮೂಡಿಸಿರುವ ಮಂಜು ವಾರಿಯರ್ ತಮಿಳು ಸ್ಟಾರ್ ಅಜಿತ್ ಜೋತೆ ನಟಿಸಲಿದ್ದಾರೆ ಎನ್ನುವ ಸುದ್ದಿ ಕೇಳಿಬರುತ್ತಿದೆ. ಅಂದಹಾಗೆ ಮಂಜು ವಾರಿಯರ್ ಈಗಾಗಲೇ ತಮಿಳು ಸಿನಿಮಾದಲ್ಲಿ ನಟಿಸಿದ್ದಾರೆ. ಧನುಷ್ ನಟನೆಯ ಅಸುರನ್ ಸಿನಿಮಾದಲ್ಲಿ ಮಂಜು ವಾರಿಯರ್ ಧನುಷ್ ಪತ್ನಿಯ ಪಾತ್ರದಲ್ಲಿ ನಟಿಸಿದ್ದರು.

ಅಸುರನ್ ಸಿನಿಮಾ ಮೂಲಕ ಮಂಜು ವಾರಿಯರ್ ತಮಿಳು ಸಿನಿಮಾರಂಗಕ್ಕೆ ಕಾಲಿಟ್ಟದ್ದರು. ಇದೀಗ ಅಜಿತ್ ಸಿನಿಮಾಗೆ ನಾಯಕಿಯಾಗುವ ಮೂಲಕ ಮತ್ತೊಮ್ಮೆ ತಮಿಳು ಪ್ರೇಕ್ಷಕರನ್ನು ರಂಜಿಸಲು ಮುಂದಾಗಿದ್ದಾರೆ. ಈಗಾಗಲೇ ಸಿನಿಮಾತಂಡ ಮಂಜು ವಾರಿಯರ್ ಜೊತೆ ಮಾತುಕತೆ ನಡೆಸಿದ್ದು ಅಧಿಕೃತ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಆದರೆ ಈ ಬಗ್ಗೆ ಚಿತ್ರತಂಡ ಇನ್ನೂ ಬಹಿರಂಗ ಪಡಿಸಿಲ್ಲ. ಸದ್ಯದಲ್ಲೇ ಮಂಜು ವಾರಿಯರ್ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ. ಈ ಸಿನಿಮಾಗೆ ಮಂಜು ವಾರಿಯರ್ ಸೂಟ್ ಆಗ್ತಾರೆ ಎನ್ನುವ ಕಾರಣಕ್ಕೆ ಅವರನ್ನು ಯಾಕೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ ಅಂತ ಆಂಗ್ಲ ವೆಬ್ ಸೈಟ್ ಪಿಂಕ್ ವಿಲ್ಲ ವರದಿ ಮಾಡಿದೆ.

ಖ್ಯಾತ ನಟಿ ಮಂಜು ವಾರಿಯರ್‌‌ಗೆ ಬೆದರಿಕೆ; ನಿರ್ದೇಶಕ ಸನಲ್ ಕುಮಾರ್ ಅರೆಸ್ಟ್

ಈ ಸುದ್ದಿ ಅಜಿತ್ ಮತ್ತು ಮಂಜು ವಾರಿಯರ್ ಅಭಿಮಾನಿಗಳಿಗೆ ಸಖತ್ ಥ್ರಿಲ್ ನೀಡಿದೆ. ಒಂದು ವೇಳೆ ನಿಜಾವಾದರೇ ಅಭಿಮಾನಿಗಳಿಗೆ ಸಖತ್ ಟ್ರೀಟ್ ಸಿಗಲಿದೆ. ಮಂಜು ವಾರಿಯರ್ ಸದ್ಯ ಜಾಕ್ ಅಂಡ್ ಜಿಲ್ ಸಿನಿಮಾದಲ್ಲಿ ನಟಿಸಿದ್ದಾರೆ. ಸಂತೋಷ್ ಶಿವನ್ ಆಕ್ಷನ್ ಕಟ್ ಹೇಳಿದ್ದಾರೆ. ಇತ್ತೀಚಿಗಷ್ಟೆ ಟ್ರೇಲರ್ ಬಿಡುಗಡೆಯಾಗಿದ್ದು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಮಂಜು ವಾರಿಯರ್‌ಗೆ ಬೆದರಿಕೆ; ನಿರ್ದಶಕ ಅರೆಸ್ಟ್

ಇದೆಲ್ಲದರ ನಡುವೆ ಮಂಜು ವಾರಿಯರ್ ಅವರಿಗೆ ಬೆದರಿಕೆ ಮತ್ತು ಅವಮಾನ ಮಾಡಿದ ಆರೋಪ ಮೇರೆಗೆ ನಿರ್ದೇಶಕ ಸನಲ್ ಕುಮಾರ್ ಅವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. 

ಪತ್ನಿಯನ್ನು ಹಗ್ ಮಾಡಿ ಚುಂಬಿಸಿದ ತಲಾ ಅಜಿತ್ ರೊಮ್ಯಾಂಟಿಕ್ ಫೋಟೋ ವೈರಲ್

ಸಾಮಾಜಿಕ ಜಾಲತಾಣದಲ್ಲಿ ಮುಂಜು ವಾರಿಯರ್ ಜೀವಕ್ಕೆ ಅಪಾಯವಿದೆ ಎಂದು ಹೇಳುವ ಮೂಲಕ ಪದೇ ಪದೇ ಅವಮಾನ ಮತ್ತು ಬೆದರಿಕೆ ಹಾಕುತ್ತಿದ್ದರು ಎಂದು ಮಂಜು ವಾರಿಯರ್ ನೀಡಿದ ದೂರಿನ ಆಧಾರದ ಮೇಲೆ ನಿರ್ದೇಶಕ ಸನಲ್ ಕುಮಾರ್ ಶಶಿಧರನ್ ಅವರನ್ನು ವಶಕ್ಕೆ ಪಡೆಯಲಾಗಿದೆ. ಇತ್ತೀಚಿಗಷ್ಟೆ 2017ರಲ್ಲಿ ನಡೆದ ಖ್ಯಾತ ನಟಿಯ ಅಪಹರಣ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮಂಜು ವಾರಿಯರ್ ಅವರ ಹೇಳಿಕೆ ದಾಖಲಿಸಿದ್ದರು. ಇದರಲ್ಲಿ ಮಂಜು ವಾರಿಯರ್ ಅವರ ಮಾಜಿ ಪತಿ ಮತ್ತು ಜನಪ್ರಿಯ ನಟ ದಿಲೀಪ್ ಕುಮಾರ್ ಆರೋಪಿಯಾಗಿದ್ದರು. ಮಂಜು ವಾರಿಯರ್ ಪೊಲೀಸರ ಮುಂದೆ ಹೇಳಿಕೆ ದಾಖಲಿಸಿದ ಬಳಿಕ ಶಶಿಧರನ್ ಸಾಮಾಜಿಕ ಜಾಲತಾಣದಲ್ಲಿ ಆಕೆಯ ಜೀವಕ್ಕೆ ಅಪಾಯವಿದೆ ಎಂದು ಪದೇ ಪದೇ ಕಾಮೆಂಟ್ ಮಾಡುತ್ತಿದ್ದ ಆರೋಪದ ಮೇಲೆ ಬಂಧಿಸಲಾಗಿದೆ.