ಸಾರ್ವಜನಿಕವಾಗಿ ಬಾಲಕಿಯರಿಗೆ ಗುಪ್ತಾಂಗ ಪ್ರದರ್ಶನ (Flashing) ಮಾಡಿದ ಆರೋಪದ ಹಿನ್ನಲೇ ಮಲಯಾಳಂ ನಟ ಶ್ರೀಜಿತ್ ರವಿ (Malayalam actor Sreejith Ravi) ಅವರನ್ನು ಪೊಲೀಸರು ಬಂಧಿಸಿದ್ದಾರೆ (Arrest). ಈ ಘಟನೆ ಜುಲೈ 4ರಂದು ತ್ರಿಶೂಲ್ ಜಿಲ್ಲೆಯ ಎಸ್ ಎನ್ ಪಾರ್ಕ್ ಬಳಿ ನಡೆದಿದೆ.

ಸಾರ್ವಜನಿಕವಾಗಿ ಬಾಲಕಿಯರಿಗೆ ಗುಪ್ತಾಂಗ ಪ್ರದರ್ಶನ (Flashing) ಮಾಡಿದ ಆರೋಪದ ಹಿನ್ನಲೇ ಮಲಯಾಳಂ ನಟ ಶ್ರೀಜಿತ್ ರವಿ (Malayalam actor Sreejith Ravi) ಅವರನ್ನು ಪೊಲೀಸರು ಬಂಧಿಸಿದ್ದಾರೆ (Arrest). ಈ ಘಟನೆ ಜುಲೈ 4ರಂದು ತ್ರಿಶೂಲ್ ಜಿಲ್ಲೆಯ ಎಸ್ ಎನ್ ಪಾರ್ಕ್ ಬಳಿ ನಡೆದಿದೆ. ಸದ್ಯ ಶ್ರೀಜಿತ್ ವಿರುದ್ಧ ಪೋಕ್ಸೋ (POCSO) ಪ್ರಕರಣ ದಾಖಲಿಸಿಕೊಂಡು ಬಂಧಿಸಲಾಗಿದೆ ಎಂದು ತ್ರಿಸೂಲ್ ಪಶ್ಚಿಮ ವಿಭಾಗದ ಪೊಲೀಸರು ತಿಳಿಸಿದ್ದಾರೆ. ನಟ ಶ್ರೀಜಿತ್ ರವಿ ಮಲಯಾಳಂನ ಹಿರಿಯ ನಟ ಟಿಜಿ ರವಿ ಅವರ ಪುತ್ರ. 

ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿದ ಬಳಿಕ ರವಿ ಅವರನ್ನು ಬಂಧಿಸಲಾಗಿದೆ. ಅಂದಹಾಗೆ ಶ್ರೀಜಿತ್ ಇಂಥ ಪ್ರಕರಣದಲ್ಲಿ ಬಂಧನಕ್ಕೊಳಗಾಗುವುದು ಇದೇ ಮೊದಲಲ್ಲ. ಈ ಮೊದಲು 2016ರಲ್ಲೂ ಸಹ ಇಂತಹದ್ದೆ ಪ್ರಕರಣದಲ್ಲಿ ಪಾಲಕ್ಕಾಡ್ ಪೊಲೀಸರು ಬಂಧಿಸಿದ್ದರು. 16 ಹುಡುಗಿಯರಿದ್ದ ಗುಂಪಿನಲ್ಲಿ ಗುಪ್ತಾಂಗ ಪ್ರದರ್ಶನ ಮಾಡಿದ ಆರೋಪ ಕೇಳಿಬಂದಿತ್ತು. ಬಳಿಕ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಬಳಿಕ ಬಾಲಕಿಯರ ಪೋಷಕರು ಪೊಲೀಸರ ವಿರುದ್ಧ ಆಕ್ರೋಶ ಹೊರಹಾಕಿದ್ದರು. 

ಲೈಂಗಿಕ ಅಪರಾಧ ಮಕ್ಕಳ ರಕ್ಷಣೆ ಕಾಯ್ದೆ ಸೆಕ್ಷನ್ 11ರ ಅಡಿಯಲ್ಲಿ ರವಿ ಅವರನ್ನು ಬಂಧಿಸಲಾಗಿದೆ. ಪೊಲೀಸ್ ವರದಿಯ ಪ್ರಕಾರ, ಶ್ರೀಜಿತ್ ರವಿ ಕಾರಿನಲ್ಲಿ ಕುಳಿತ್ತಿದ್ದರು. ಇಬ್ಬರು ಅಪ್ರಾಪ್ತ ಬಾಲಕಿಯರು ನಡೆದುಕೊಂಡು ಹೋಗುತ್ತಿದ್ದನ್ನು ನೋಡಿ ಕಾರಿನಿಂದ ಕೆಳಗಿಳಿದು ತನ್ನ ಗುಪ್ತಾಂಗವನ್ನು ಪ್ರದರ್ಶನ ಮಾಡಿದರು ಎಂದು ಹೇಳಿದ್ದಾರೆ. ಬಳಿಕ ಬಾಲಕಿಯರು ತಮ್ಮ ಪೋಷಕರ ಬಳಿ ಹೇಳಿದ್ದಾರೆ. 

ಲೈಂಗಿಕ ದೌರ್ಜನ್ಯ: ಮಲಯಾಳಂ ನಟ ವಿಜಯ್ ಬಾಬು ಬಂಧನ

ಪೋಷಕರು ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದರು. ತನಿಖೆ ನಡೆಸಿದ ಪೊಲೀಸರಿಗೆ ಶ್ರೀಜಿತ್ ಸಿಕ್ಕಿಬಿದ್ದಿದ್ದಾರೆ. ಸಿಸಿಕ್ಯಾಮರಾದಲ್ಲಿ ಈ ದೃಶ್ಯ ಸೆರೆಯಾಗಿದ್ದನ್ನು ಆಧರಿಸಿ ಶ್ರೀಜಿತ್ ನನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸ್ ವಿಚಾರಣೆ ವೇಳೆ ಶ್ರೀಜಿತ್ ತಪ್ಪನ್ನು ಒಪ್ಪಿಕೊಂಡಿದ್ದು ಈ ಕೆಟ್ಟ ಸಮಸ್ಯೆಗೆ ಚಿಕಿತ್ಸೆ ಪಡೆಯುತ್ತಿರುವುದಾಗಿ ಹೇಳಿದ್ದಾರೆ.

ಶ್ರೀಜಿತ್ ಅವರು ಸಜಿತಾ ಶ್ರೀಜಿತ್ ಅವರನ್ನುಮದುವೆಯಾಗಿದ್ದು ಇಬ್ಬರು ಮಕ್ಕಳಿದ್ದಾರೆ. ರಿಜ್ರಾಶ್ವ ಶ್ರೀಜಿತ್ ಮತ್ತು ರಿತುಂಜಯ್ ಶ್ರೀಜಿತ್ ಎನ್ನುವ ಇಬ್ಬರು ಗಂಡುಮಕ್ಕಳಿದ್ದಾರೆ. 

ಸಿನಿಮಾದಲ್ಲಿ ಅವಕಾಶ ಕೊಡಿಸುವ ನೆಪದಲ್ಲಿ ಅತ್ಯಾಚಾರ, ಖ್ಯಾತ ನಟ ವಿಜಯ್ ಬಾಬು ವಿರುದ್ಧ ರೇಪ್ ಕೆಸ್!

    ಶ್ರೀಜಿತ್ ತಮ್ಮ ನಟನಾ ವೃತ್ತಿ ಜೀವನದ ಬಗ್ಗೆ ಹೇಳುವುದಾದರೆ 2005 ರಲ್ಲಿ ಮಯೂಖಂ ಚಿತ್ರದ ಮೂಲಕ ವೃತ್ತಿ ಜೀವನ ಪ್ರಾರಂಭಿಸಿದರು. ಅದೇ ವರ್ಷದಲ್ಲಿ ಅವರು ಚಂತುಪೊಟ್ಟು ಚಿತ್ರದ ಮೂಲಕ ದೊಡ್ಡ ಬ್ರೇಕ್ ಪಡೆದರು. ಪುಣ್ಯಲನ್ ಅಗರಬತ್ತೀಸ್ ಚಿತ್ರದಲ್ಲಿನ ಅವರ ಅಭಿನಯಕ್ಕಾಗಿ 2013 ರಲ್ಲಿ ಅತ್ಯುತ್ತಮ ಹಾಸ್ಯನಟ SIIMA ಪ್ರಶಸ್ತಿಯನ್ನು ಗೆದ್ದರು. ಕುಮ್ಕಿ, ಮದಾ ಯಾನೈ ಕೂಟಂ, ಮತ್ತು ಕಥಕ್ಕಳಿ ಮುಂತಾದ ತಮಿಳು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಜನಪ್ರಿಯ ತಮಿಳು ನಟರಾದ ವಿಶಾಲ್ ಮತ್ತು ಅಸುರವಧಂ ಎದುರು ಕೇಂದ್ರ ಖಳನಾಯಕನ ಪಾತ್ರವನ್ನು ನಿರ್ವಹಿಸಿದ್ದಾರೆ.