ಶೂಟಿಂಗ್ ವೇಳೆ ಅವಘಡ: ಮಲಯಾಳಂ ನಟ ಪೃಥ್ವಿರಾಜ್ ಆಸ್ಪತ್ರೆಗೆ ದಾಖಲು, ಇಂದು ಸರ್ಜರಿ
ಶೂಟಿಂಗ್ ವೇಳೆ ಅವಘಡ: ಮಲಯಾಳಂ ನಟ ಪೃಥ್ವಿರಾಜ್ ಕಾಲಿಗೆ ಏಟು ಬಿದ್ದಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಇಂದು ಸರ್ಜರಿಗೆ ಒಳಗಾಗಿದ್ದಾರೆ.
ಮಲಯಾಳಂನ ಖ್ಯಾತ ನಟ ಪೃಥ್ವಿರಾಜ್ ಸುಕುಮಾರನ್ ಶೂಟಿಂಗ್ ವೇಳೆ ಗಾಯಗೊಂಡಿದ್ದಾರೆ. ಪೃಥ್ವಿರಾಜ್ ಬಹುನಿರೀಕ್ಷೆಯ ವಿಲಾಯತ್ ಬುದ್ಧ ಎನ್ನುವ ಮಲಯಾಳಂ ಸಿನಿಮಾದ ಚಿತ್ರೀಕರಣದಲ್ಲಿದ್ದ ನಿರತಾಗಿದ್ದರು. ಆಕ್ಷನ್ ದೃಶ್ಯ ಚಿತ್ರೀಕರಣ ವೇಳೆ ಕಾಲಿಗೆ ಬಲವಾದ ಏಟು ಬಿದ್ದು ಗಾಯಗೊಂಡಿದ್ದಾರೆ. ತಕ್ಷಣ ಅವರನ್ನು ಸಮೀಪದಲ್ಲಿದ್ದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ನಿನ್ನೆ (ಜೂನ್ 25) ಭಾನುವಾರ ಅವಘಡ ಸಂಭವಿಸಿದೆ. ಇಂದು (ಜೂನ್ 26) ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ ಎಂದು ವರದಿಗಳು ಸೂಚಿಸಿವೆ. ಶಸ್ತ್ರಿ ಚಿಕಿತ್ಸೆಯ ನಂತರ ಕೆಲವು ವಾರುಗಳು ಪೃಥ್ವಿರಾಜ್ ಸಂಪೂರ್ಣ ವಿಶ್ರಾಂತಿ ಪಡೆಯಲಿದ್ದು ಚಿತ್ರೀಕರಣಕ್ಕೆ ಬ್ರೇಕ್ ಬೀಳಲಿದೆ.
ಪೃಥ್ವಿರಾಜ್ ಸುಕುಮಾರನ್ ಕೊನೆಯದಾಗಿ ಕಾಪ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ರು. ಶಾಜಿ ಕೈಲಾಸ್ ನಿರ್ದೇಶನದಲ್ಲಿ ಆ ಸಿನಿಮಾ ಮೂಡಿ ಬಂದಿತ್ತು. ವಿಭಿನ್ನ ಪಾತ್ರಗಳ ಮೂಲಕ ಅಭಿಮಾನಿಗಳ ಮುಂದೆ ಬರ್ತಿರುವ ನಟ ಪೃಥ್ವಿರಾಜ್ ಕೈಯಲ್ಲಿ ಅನೇಕ ಸಿನಿಮಾಗಳಿವೆ. ಸದ್ಯ ವಿಲಾಯತ್ ಬುದ್ಧ ಸಿನಿಮಾದ ಚಿತ್ರೀಕರಣದಲ್ಲಿ ನಿರತರಾಗಿದ್ದರು. ಕೊಚ್ಚಿಯ ಮರಯೂರಿನಲ್ಲಿ ಚಿತ್ರೀಕರಣ ನಡೆಯುತ್ತಿತ್ತು. ಹೈ ವೋಲ್ಟೇಜ್ ಆಕ್ಷನ್ ದೃಶ್ಯದ ಚಿತ್ರೀಕರಣ ನಡೆಯುತ್ತಿತ್ತು. ಆಗ ಈ ಅಪಘಾತ ಸಂಭವಿಸಿದೆ. ಸದ್ಯ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದು ಬಳಿಕ ಸಂಪೂರ್ಣ ಗುಣಮುಖರಾದ ಬಳಿಕ ಮತ್ತೆ ಶೂಟಿಂಗ್‌ಗೆ ಮರಳಿದ್ದಾರೆ.
ನಟ ಪೃಥ್ವಿರಾಜ್ ಜೊತೆ ಲಿಪ್‌ಲಾಕ್ ದೃಶ್ಯ ವೈರಲ್; ಮೌನ ಮುರಿದ 'ಹೆಬ್ಬುಲಿ' ನಟಿ ಅಮಲಾ ಪೌಲ್
ಪೃಥ್ವಿರಾಜ್ ಕನ್ನಡ ನಿರ್ದೇಶಕ, ಕೆಜಿಎಫ್ ಡೈರೆಕ್ಟರ್ ಪ್ರಶಾಂತ್ ನೀಲ್ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಸಲಾರ್ ಸಿನಿಮಾದಲ್ಲಿ ನಟಿಸಿದ್ದಾರೆ. ಈಗಾಗಲೇ ಪೃಥ್ವಿರಾಜ್ ಫಸ್ಟ್ ಲುಕ್ ಕೂಡ ರಿಲೀಸ್ ಆಗಿದೆ. ಪ್ರಭಾಸ್ ನಾಯಕನಾಗಿ ನಟಿಸುತ್ತಿರುವ ಈ ಸಿನಿಮಾದಲ್ಲಿ ಪೃಥ್ವಿರಾಜ್ ಪಾತ್ರ ಕೂಡ ಗಮನಾರ್ಹವಾಗಿದೆ. ಇಡೀ ದೇಶವೇ ಸಲಾರ್ ಸಿನಿಮಾಗಾಗಿ ಎದುರು ನೋಡುತ್ತಿದೆ. ಬಹಿನೀರಕ್ಷೆಯ ಸಿನಿಮಾ ಸೆಪ್ಟಂಬರ್ 28ಕ್ಕೆ ವಿಶ್ವದಾದ್ಯಂತ ತೆರೆಗೆ ಬರುತ್ತಿದೆ. ಇದಲ್ಲದೆ ಇನ್ನು ಅನೇಕ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ವಿಲಾಯತ್ ಬುದ್ಧ ಚಿತ್ರವನ್ನು ಜಯನ್ ನಂಬಿಯಾರ್ ನಿರ್ದೇಶಿಸುತ್ತಿದ್ದಾರೆ.