ಬಾಲಿವುಡ್‌ ಆಂಟಿ ಈಗ ಫುಲ್ ಬ್ಯೂಟಿಫುಲ್, ಅದುವೇ ಮಲೈಕಾ ಅರೋರಾ. ಫಿಟ್ನೆಸ್ ಫ್ರೀಕ್ ಆಗಿರುವ ಮಲೈಕಾ ಮನೆಯಿಂದ ಹೊರ ಬರುವ ಮುನ್ನ ತಮ್ಮ ಔಟ್‌ಫಿಟ್‌ ಬಗ್ಗೆ ತುಂಬಾನೇ ಕಾಳಜಿ ವಹಿಸುತ್ತಾರೆ. ಅದರಲ್ಲೂ ಜಿಮ್‌ಗೆ ಧರಿಸುವ ಉಡುಪುಗಳಿಗೆ ಸಾವಿರಾರು ರೂಪಾಯಿ ಸುರಿಯುತ್ತಾರೆ. 

ಸ್ಪೋಟ್ರ್ಸ್ ಬ್ರಾ, ಕಾಸ್ಟ್ಲಿಸ್ಲಿಪರ್ಸ್..! ಯೋಗ ಕ್ಲಾಸ್‌ಗೆ ಇಷ್ಟೊಂದ್ ಸ್ಟೈಲಾಗಿ ಹೋಗ್ತಾರೆ ಮಲೈಕಾ 

ಇತ್ತೀಚಿಗೆ ಮಲೈಕಾ ಜಿಮ್‌ಗೆ ತೆರಳುವಾಗ ಗ್ರೀನ್ ಕ್ರಾಪ್ ಟಾಪ್ ಹಾಗೂ ಕ್ಯಾಮೋ ಪ್ಯಾಂಟ್ ಧಿರಿಸಿ ಕೈಯಲ್ಲಿ ನೀರಿನ ಬಾಟಲ್ ಹಿಡಿದು ಕಾರು ಹತ್ತಲು ವಾಕ್ ಮಾಡುತ್ತಿದ್ದರು. ಆದರೆ ಈ ಬಾರಿ ಮಲೈಕಾ ಔಟ್‌ಫಿಟ್‌ಗಿಂತ ಆಕೆಯ ಚಪ್ಪಲಿಯೇ ಎಲ್ಲರ ಗಮನ ಸೆಳೆದಿದೆ. ವೈಟ್ ಚಪ್ಪಲಿ ಎನ್ನುವ ಕಾರಣಕ್ಕಲ್ಲ. ಬದಲಾಗಿ ಅದಕ್ಕೆ ಅವರು ತೆತ್ತೆ ಬೆಲೆಯ ಕಾರಣದಿಂದ!  

ಹೌದು! ಮಲೈಕಾ ಧರಿಸಿದ ರಿಬಾಕ್‌ ಚಪ್ಪಲಿ ಬೆಲೆ ಸುಮಾರು 3 ಸಾವಿರ. ನೋಡಲು ಸಿಂಪಲ್ ಆಗಿದ್ದು, ಸ್ವಲ್ಪ ಗಂಡಸರ ಚಪ್ಪಲಿ ಲುಕ್ ನೀಡುತ್ತದೆ. ಈ ಚಪ್ಪಲಿ ಬಗ್ಗೆ ನೆಟ್ಟಿಗರು ಕಾಮೆಂಟ್ ಮಾಡಲು ಪ್ರಾರಂಭಿಸಿದ್ದಾರೆ. 'ನಿಜ ಹೇಳಿ ನೀವು ಅರ್ಜುನ್ ಕಪೂರ್ ಚಪ್ಪಲಿ ಹಾಕಿಕೊಂಡು ಬಂದಿದ್ದೀರಾ?' ಎಂದು ಕೆಲವರು ಕಾಲು ಎಳೆದರೆಸ ಇನ್ನು ಕೆಲವರು, ಇದೇ ಚಪ್ಪಲಿ ದುಡ್ಡಿಂದ ನಾವು ಎರಡು ವಾರ ನೆಮ್ಮದಿಯಾಗಿ ಊಟ ಮಾಡಬಹುದು ಎಂದು ದುಃಖ ತೋಡಿಕೊಂಡಿದ್ದಾರೆ.

Happy Birthday ಮಲೈಕಾ: ಚೈಂಯಾ ಚೈಂಯಾ ನಟಿಗೆ 47

ಮಲೈಕಾ ಫ್ಯಾಷನ್ ಬಗ್ಗೆ ತುಂಬಾನೇ ಕಾಳಜಿ ವಹಿಸುತ್ತಾರೆ. ಪ್ರತೀ ಔಟ್‌ಫಿಟ್‌ಗೂ ವಿಭಿನ್ನವಾಗಿರುವ ಚಪ್ಪಲಿ ಹಾಗೂ ಹ್ಯಾಂಡ್‌ಬ್ಯಾಂಗ್ ಹಿಡಿದು ಕೊಳ್ಳುತ್ತಾರೆ. ಆದರೆ ಜಿಮ್‌ಗೆ ತೆರಳುವ ವೇಳೆ ಕಲರ್‌ ಕಲರ್‌ ಬಾಟಲ್ ಹಿಡಿದುಕೊಂಡಿರುವುದು ಇವರ ಮತ್ತೊಂದು ಸ್ಪೆಷಾಲಿಟಿ.