ಬಾಲಿವುಡ್ ನಟ ಅರ್ಬಜ್ ಖಾನ್ ಹಾಗೂ ಮಲೈಕಾ ಅರೋರಾ ಪುತ್ರ ಅರ್ಹಾನ್ ಖಾನ್ ಬಾಲಿವುಡ್ ಪ್ರವೇಶಿಸಲು ಸಿದ್ಧರಾಗಿದ್ದಾರೆ. ತಂದೆ, ತಾಯಿ ಹಾಗೂ ಕುಟುಂಬದವರೆಲ್ಲರೂ ಚಿತ್ರರಂಗದಲ್ಲಿರುವುದರಿಂದ ನಟನಾ ಸಾಮರ್ಥ್ಯ ಎನ್ನುವುದು ರಕ್ತದಲ್ಲಿಯೇ ಇದೆ. 

ಮಲೈಕಾ-ಅರ್ಬಜ್ ಖಾನ್ ಮದುವೆ ಮುರಿದು ಬಿದ್ದಿದ್ಯಾಕೆ?

ಮಗ ಬಾಲಿವುಡ್ ಪ್ರವೇಶಿಸುವ ಬಗ್ಗೆ ತಂದೆ ಅರ್ಬಜ್ ಖಾನ್ ಮಾತನಾಡಿ, ಅರ್ಹಾನ್ ಬಾಲಿವುಡ್ ಗೆ ಬರುವುದು ಇನ್ನೂ ಖಚಿತವಾಗಿಲ್ಲ. ಆದರೆ ಅವನಿಗೆ ಆಸಕ್ತಿ ಇದೆ ಎಂದು ಹೇಳಿದ್ದಾರೆ.  ಈ ಬಗ್ಗೆ ಅರ್ಹಾನ್ ಖಾನ್ ಯಾವುದೇ ಪ್ರತಿಕ್ರಿಯೆ ಕೊಟ್ಟಿಲ್ಲ. 

’ಸೀತಾವಲ್ಲಭ’ ನಿಗೆ ರಿಯಲ್ ಲೈಫ್‌ನಲ್ಲಿ ಸಿಕ್ಕಳು ಸೀತೆ!

ಅರ್ಹನ್ ಗೆ ಈಗ ತಾನೆ 18 ವರ್ಷ ತುಂಬುತ್ತಿದ್ದು ಇನ್ನೂ ಓದುವುದು ಇದೆ. ಈಗಲೇ ಬಾಲಿವುಡ್ ಗೆ ಬಂದರೆ ಓದು ಅರ್ಧಕ್ಕೆ ನಿಂತು ಹೋಗಬಹುದು. ಓದು ಮುಗಿಸಿ ಆಮೇಲೆ ಬರಬಹುದು ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. 

ಒಟ್ಟಿನಲ್ಲಿ ಅರ್ಹನ್ ಗೆ ನಟಿಸಲು ಆಸಕ್ತಿಯಿದ್ದು ಯಾವಾಗ ಬಾಲಿವುಡ್ ಗೆ ಪ್ರವೇಶಿಸುತ್ತಾರೆ ಎಂಬುದು ಮಾತ್ರ ಖಚಿತವಾಗಿಲ್ಲ.