ಗಾಂಧಾರಿ ಖ್ಯಾತಿಯ ನಟ ಜಗನ್ನಾಥ್ ಚಂದ್ರಶೇಖರ್ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಜಗನ್ನಾಥ್ ಗೆ ಕಂಕಣ ಭಾಗ್ಯ ಕೂಡಿ ಬಂದಿದ್ದು ಬಾಲ್ಯದ ಗೆಳತಿ ರಕ್ಷಿತಾ ಮುನಿಯಪ್ಪ ಜೊತೆ ಹಸೆಮಣೆ ಏರಲಿದ್ದು ಮೇ 23 ರಂದು ವಿವಾಹ ನಡೆಯಲಿದೆ. 

ಬೆಂಗಳೂರಿನ ವೆಸ್ಟ್ ಆಫ್ ಕಾರ್ಡ್ ರೋಡ್ ನಲ್ಲಿರುವ ಕಾನ್ವೆಂಷನಲ್ ಹಾಲ್ ನಲ್ಲಿ ನಡೆಯಲಿದೆ. ಮದುವೆ ಹಿಂದಿನ ದಿನ ಅಂದರೆ ಮೇ 22 ರಂದು ಸಂಗೀತ ಕಾರ್ಯಕ್ರಮ ನಡೆಯಲಿದೆ. ಮದುವೆ ಆಗಿ ಮೇ 26 ರಂದು ಆರತಕ್ಷತೆ ನಡೆಯಲಿದೆ. ಮದುವೆಯಲ್ಲಿ ಸ್ನೇಹಿತರು, ಸಂಬಂಧಿಕರು, ಚಿತ್ರರಂಗದ ಗಣ್ಯರು ಭಾಗಿಯಾಗಲಿದ್ದಾರೆ. 

ಜಗನ್ನಾಥ್ ಹಾಗೂ ರಕ್ಷಿತಾ ಕಳೆದ ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದಾರೆ. ರಕ್ಷಿತಾ ದುಬೈನಲ್ಲಿ ದುಬೈನಲ್ಲಿ ಫ್ಯಾಷನ್ ಡಿಸೈನಿಂಗ್ ಕೋರ್ಸ್ ಮಾಡಿದ್ದಾರೆ. 

ಜಗನ್ ಈ ಹಿಂದೆ ಜೋಶ್ ಸಿನಿಮಾದಲ್ಲಿ ನಟಿಸಿದ್ದರು. ನಂತರ ಕಿರುತೆರೆ ಧಾರಾವಾಹಿಗಳಲ್ಲಿ ಬ್ಯಸಿಯಾದರು. ಗಾಂಧಾರಿ ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಅವರಿಗೆ ಖ್ಯಾತಿಯನ್ನೂ ತಂದು ಕೊಟ್ಟಿದೆ. 
ಬಿಗ್ ಬಾಸ್ 5 ನಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದರು.