ಬಾಲಿವುಡ್ ನಟ ಅರ್ಬಾಜ್ ಖಾನ್ ಹಾಗೂ ಮಲೈಕಾ ಅರೋರಾ ಡಿವೋರ್ಸ್ ಪಡೆದು ಮೂರು ವರ್ಷಗಳೇ ಕಳೆದಿವೆ. 17 ವರ್ಷ ಒಟ್ಟಿಗೆ ಸಂಸಾರ ಮಾಡಿ ಇದ್ದಕ್ಕಿದ್ದಂತೆ ಭಿನ್ನಾಭಿಪ್ರಾಯ ಬಂದು ಬೇರೆ ಬೇರೆಯಾಗಿದ್ದು ಬಾಲಿವುಡ್ ಮಂದಿಗೆ ಶಾಕ್ ಆಗಿತ್ತು. 

ಮಲೈಕಾ ಹಾಗೂ ಅರ್ಬಜ್ ಖಾನ್ ತಮ್ಮ ಮದುವೆ ಬಗ್ಗೆ ಎಲ್ಲಿಯೂ ಮಾತನಾಡಿರಲಿಲ್ಲ. ಬಹಳ ಸಮಯದ ಬಳಿಕ ಅರ್ಬಜ್ ಖಾನ್ ಮಲೈಕಾ ಜೊತೆಗಿನ ದಾಂಪತ್ಯ ಜೀವನದ ಬಗ್ಗೆ ಮಾತನಾಡಿದ್ದಾರೆ. 

ಹೊರಗಡೆಯಿಂದ ನೋಡಲು ಎಲ್ಲವೂ ಚೆನ್ನಾಗಿತ್ತು. ಆದರೆ ಒಳಗೊಳಗೆ ಭಿನ್ನಾಭಿಪ್ರಾಯವಿತ್ತು. ಮುರಿದು ಬಿತ್ತು. ಗಂಡ-ಹೆಂಡತಿ ಇಬ್ಬರೂ ತಮ್ಮ ತಮ್ಮ ಕೆಲಸಗಳಲ್ಲಿ ಬ್ಯುಸಿಯಾಗಿ ಅವರಿಗೆ ಬೇಕಾದ ಹಾಗೆ ಜೀವನ ನಡೆಸಲು ಶುರು ಮಾಡಿದರೆ ದಾಂಪತ್ಯದಲ್ಲಿ ಬಿರುಕು ಶುರುವಾಗುತ್ತದೆ. ಮದುವೆ ಎನ್ನುವ ಪದಕ್ಕೆ ಅರ್ಥವೇ ಇರುವುದಿಲ್ಲ. ನಮ್ಮಿಬ್ಬರ ಜೀವನದಲ್ಲೂ ಆಗಿದ್ದು ಇದೇ ಎಂದು ಹೇಳಿದ್ದಾರೆ. 

ಮಲೈಕಾ ಹೆಸರು ಸಿದ್ಧಾರ್ಥ್ ಮಲ್ಹೋತ್ರಾ ಜೊತೆ ಕೇಳಿ ಬಂದರೆ ಅರ್ಬಜ್ ಹೆಸರು ಜಾರ್ಜಿಯಾ ಜೊತೆ ಕೇಳಿ ಬರುತ್ತಿದೆ. ಮರು ಮದುವೆಯ ಬಗ್ಗೆ ಮಾತನಾಡುತ್ತಾ, ಮತ್ತೊಮ್ಮೆ ಮದುವೆಯಾಗುವ ಅವಕಾಶ ಬಂದರೆ ಖಂಡಿತ ಮದುವೆ ಆಗುತ್ತೇನೆ ಎಂದಿದ್ದಾರೆ.