Breakup Rumours: 40ರ ನಂತರದ ಲವ್ ಬಗ್ಗೆ ಮಲೈಕಾ ಮಾತು
- Breakup Rumours: ಬ್ರೇಕಪ್ ಸುದ್ದಿಯ ಬೆನ್ನಲ್ಲೇ ಲವ್ ಬಗ್ಗೆ ಮಲೈಕಾ ಮಾತು
- 40ರ ನಂತರದ ಪ್ರೀತಿಯ ಬಗ್ಗೆ ಮಾತನಾಡಿದ ಚೈಂಯಾ ಚೈಂಯಾ ಚೆಲುವೆ

ಕೆಲವು ದಿನಗಳ ಹಿಂದೆಯಷ್ಟೇ ಮಲೈಕಾ ಅರೋರಾ(Malaika Arora) ಹಾಗೂ ಅರ್ಜುನ್ ಕಪೂರ್ ಅವರ ಬ್ರೇಕಪ್(Breakup) ಸುದ್ದಿ ಕೇಳಿ ಬಂದಿತ್ತು. ಮಲೈಕಾ ಅವರು 6 ದಿನಗಳ ಕಾಲ ಮನೆಯಿಂದ ಹೊರಗೆ ಕಾಣಿಸಿಕೊಳ್ಳದೇ ಇದ್ದ ಕಾರಣ ಹಾಗೂ ಅರ್ಜುನ್ ಅವರೂ ಮಲೈಕಾ ಮನೆಗೆ ಭೇಟಿ ಕೊಡದ ಕಾರಣ ಇವರಿಬ್ಬರ ಬ್ರೇಕಪ್ ವಿಚಾರವಾಗಿ ಸುದ್ದಿಗಳು ಆರಂಭವಾದವು. ಆದರೆ ಈ ವಿಚಾರದ ಬಗ್ಗೆ ಶೀಘ್ರ ಪ್ರತಿಕ್ರಿಯಿಸಿದ ಅರ್ಜುನ್ ಕಪೂರ್ ತಮ್ಮ ಮಧ್ಯೆ ಎಲ್ಲವೂ ಸರಿ ಇದೆ ಎಂದು ಸ್ಪಷ್ಟನೆ ಕೊಟ್ಟಿದ್ದರು. ಆದರೆ ಒಂದು ಸಲಕ್ಕಂತೂ ಮಲೈಕಾ ಅಭಿಮಾನಿಗಳು ಶಾಕ್ ಆಗಿದ್ದು ಸುಳ್ಳಲ್ಲ.
ಮಲೈಕಾ ಅರೋರಾ ಮತ್ತು ಅರ್ಜುನ್ ಕಪೂರ್ 4 ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದಾರೆ. 12 ವರ್ಷಗಳ ವಯಸ್ಸಿನ ಅಂತರ ಇರುವ ಈ ಜೋಡಿ ಲವ್‌ನಲ್ಲಿ ಏಜ್ ಈಸ್ ಜಸ್ಟ್ ನಂಬರ್ ಎಂದು ಪ್ರೂವ್ ಮಾಡಿದ್ದಾರೆ. ಇತ್ತೀಚೆಗೆ, ಮಲೈಕಾ ಮತ್ತು ಅರ್ಜುನ್ ಅವರ ಬ್ರೇಕಪ್ ವದಂತಿಗಳು ಜೋರಾಗಿತ್ತು. ಬ್ರೇಕಪ್ ವದಂತಿಗಳನ್ನು ದೂರವಿಡಲು ಅರ್ಜುನ್ ತಮ್ಮದೇ ಆದ ಮಾರ್ಗವನ್ನು ಹೊಂದಿದ್ದರು. ಅವರು 'ನಿಮ್ಮ ಹುಡುಗಿಯ ಜೊತೆ ಫೋಟೋವನ್ನು ಪೋಸ್ಟ್ ಮಾಡಿ' ಮಾರ್ಗವನ್ನು ಆರಿಸಿಕೊಂಡರು.
ಜನವರಿ 12 ರಂದು, ಅವರು ಮಲೈಕಾ ಅವರೊಂದಿಗಿನ ಫೋಟೋವನ್ನು ಹಂಚಿಕೊಂಡರು. ಅದು ಅವರ ಲವ್‌ನಲ್ಲಿ ಎಲ್ಲವೂ ಚೆನ್ನಾಗಿದೆ ಎಂದು ಸಾಬೀತುಪಡಿಸಿತು. ಜನವರಿ 14, ಮಲೈಕಾ ತನ್ನ Instagram ಸ್ಟೋರಿಯಲ್ಲಿ 40 ರ ನಂತರ ಪ್ರೀತಿಯನ್ನು ಹೇಗೆ ಸಾಮಾನ್ಯಗೊಳಿಸಬಹುದು, ಅವರ 30 ಮತ್ತು 50 ರ ದಶಕದಲ್ಲಿ ಜೀವನವನ್ನು ಹೇಗೆ ಕಿಕ್‌ಸ್ಟಾರ್ಟ್ ಮಾಡಬಹುದು ಎಂಬುದರ ಕುರಿತು ಟಿಪ್ಪಣಿಯನ್ನು ಪೋಸ್ಟ್ ಮಾಡಿದ್ದಾರೆ.
ಅಷ್ಟು ಹಾರಾಡುತ್ತಿದ್ದ ಅರ್ಜುನ್ ಕಪೂರ್-ಮಲೈಕಾ ಬ್ರೇಕ್ ಅಪ್ ಆಗಿದ್ದೇಕೆ?
40 ವರ್ಷದಲ್ಲಿ ಪ್ರೀತಿ
ಮಲೈಕಾ ಅರೋರಾ ಮತ್ತು ಅರ್ಜುನ್ ಕಪೂರ್ ತಮ್ಮ ಸಂಬಂಧಕ್ಕೆ ಬಂದಾಗ ಸ್ಟೀರಿಯೊಟೈಪ್‌ಗಳನ್ನು ಪದೇ ಪದೇ ಒಡೆದು ಹಾಕಿದ್ದಾರೆ. ಇತ್ತೀಚೆಗೆ ಮಲೈಕಾ ಜೊತೆಗಿನ ಬ್ರೇಕಪ್ ವದಂತಿಗಳಿಗೆ ಅರ್ಜುನ್ ಅತ್ಯುತ್ತಮ ಉತ್ತರವನ್ನು ಹೊಂದಿದ್ದರು. ತಮ್ಮ ವಯಸ್ಸಿನ ಅಂತರವನ್ನು ಪ್ರಶ್ನಿಸುವವರಿಗೆ ಅರ್ಜುನ್ ಆಗಾಗ ಪ್ರತ್ಯುತ್ತರ ಕೊಡುತ್ತಾರೆ. ಮಲೈಕಾ ಒಬ್ಬ ವ್ಯಕ್ತಿ 40 ರ ವಯಸ್ಸಿನಲ್ಲಿ ಪ್ರೀತಿಯನ್ನು ಕಂಡುಕೊಳ್ಳುವುದು ಎಷ್ಟು ಸಾಮಾನ್ಯ ಎಂದು ಪೋಸ್ಟ್ ಮಾಡಿದ್ದಾರೆ.
ನಿಮ್ಮ 40 ರ ದಶಕದಲ್ಲಿ ಪ್ರೀತಿಯನ್ನು ಕಂಡುಕೊಳ್ಳುವುದನ್ನು ಸಾಮಾನ್ಯಗೊಳಿಸಿ. ನಿಮ್ಮ 30 ರ ದಶಕದಲ್ಲಿ ಹೊಸ ಕನಸುಗಳನ್ನು ಕಂಡುಕೊಳ್ಳುವುದನ್ನು ಮತ್ತು ಬೆನ್ನಟ್ಟುವುದನ್ನು ಸಾಮಾನ್ಯಗೊಳಿಸಿ. ನಿಮ್ಮ 50 ರ ದಶಕದಲ್ಲಿ ನಿಮ್ಮನ್ನು ಮತ್ತು ನಿಮ್ಮ ಉದ್ದೇಶವನ್ನು ಕಂಡುಕೊಳ್ಳುವುದನ್ನು ಸಾಮಾನ್ಯಗೊಳಿಸಿ. ಜೀವನವು 25 ಕ್ಕೆ ಕೊನೆಗೊಳ್ಳುವುದಿಲ್ಲ. ಅದರಂತೆ ವರ್ತಿಸುವುದನ್ನು ನಿಲ್ಲಿಸೋಣ. ಅರ್ಜುನ್ ಕೂಡ ಅದೇ ಫೋಟೋವನ್ನು ಹಂಚಿಕೊಂಡಿದ್ದಾರೆ. ಈ ಮೂಲಕ ಬ್ರೇಕಪ್ ಸುದ್ದಿಗೆ ಸುಪರ್ ಉತ್ತರ ಕೊಟ್ಟಿದ್ದಾರೆ ನಟಿ.
ಹೆಚ್ಚು ವಯಸ್ಸಿನ ಅಂತರವಿದ್ದರೂ ಮಾದರಿ ಜೋಡಿಯಾಗಿದ್ದ ಅರ್ಜುನ್ ಕಪೂರ್ ಹಾಗೂ ಮಲೈಕಾ ಅರೋರಾ ಅವರು ಬ್ರೇಕಪ್ ಮಾಡಿಕೊಂಡಿದ್ದಾರೆ ಎನ್ನಲಾಗಿತ್ತು. ಬಾಲಿವುಡ್‌ನ ಚೈಂಯಾ ಚೈಂಯಾ ಚೆಲುವೆ ಹಾಗೂ ನಿರ್ಮಾಪಕ ಬೋನಿ ಕಪೂರ್ ಅವರ ಪುತ್ರ ಅರ್ಜುನ್ ಕಪೂರ್ ಬೇರ್ಪಟ್ಟ ವಿಚಾರ ಅವರ ಅಭಿಮಾನಿಗಳಿಗೆ ಆಘಾತ ಉಂಟುಮಾಡಿದೆ. ಬಹುತೇಕ ಪ್ರತಿ ದಿನ ತನ್ನ ಮುದ್ದಿನ ಪೆಟ್ ಡಾಗ್ ಜೊತೆ ವಾಕಿಂಗ್‌ಗಾಗಿ ಹೊರಗೆ ಕಾಣಿಸಿಕೊಳ್ಳುವ ಮಲೈಕಾ ಪಾಪ್ಪರಾಜಿಗೆ ಸ್ಮೈಲ್ ಮಾಡದೆ ಹೋಗುವುದಿಲ್ಲ. ಯೋಗ ಕ್ಲಾಸ್‌ಗಳನ್ನಂತೂ ಮಿಸ್ ಮಾಡೋದೇ ಇಲ್ಲ. ಹೀಗಿದ್ದರೂ ಕಳೆದ 6 ದಿನಗಳಿಂದ ನಟಿ ಹೊರಗಡೆ ಕಾಣಿಸಿಕೊಳ್ಳದಿರುವುದು ಅವರ ಬ್ರೇಕಪ್ ಸುದ್ದಿಗೆ ಹೆಚ್ಚಿನ ಸಾಕ್ಷಿಯಂತಾಗಿತ್ತು.