ಮೊದಲು ಪ್ರಪೋಸ್ ಮಾಡಿದ್ದೇ ನಾನು; ಮಾಜಿ ಪತಿ ಅರ್ಬಾಜ್ ಜೊತೆಗಿನ ಪ್ರೀತಿ ವಿಚಾರ ಬಿಚ್ಚಿಟ್ಟ ಮಲೈಕಾ

ನಟಿ ಮಲೈಕಾ ಅರೋರಾ ಮೊದಲ ಬಾರಿಗೆ ಅರ್ಬಾಜ್ ಖಾನ್ ಜೊತೆಗಿನ ಪ್ರೀತಿ, ಮದುವೆ ಮತ್ತು ದೂರಾದ ಬಗ್ಗೆ ಮಾತನಾಡಿದ್ದಾರೆ. ಅರ್ಬಾಜ್‌ಗೆ ಮೊದಲು ಪ್ರಪೋಸ್ ಮಾಡಿದ್ದೇ ನಾನು ಎಂದು ಮಲೈಕಾ ಬಹಿರಂಗ ಪಡಿಸಿದರು. 

malaika arora reveals how she fell in love with Ex husband Arbaaz Khan sgk

ಬಾಲಿವುಡ್ ಹಾಟ್ ನಟಿ, ಡಾನ್ಸರ್ ಮಲೈಕಾ ಅರೋರಾ ಸದ್ಯ ಹೊಸ ರಿಯಾಲಿಟಿ ಶೋನಲ್ಲಿ ಬ್ಯುಸಿಯಾಗಿದ್ದಾರೆ. ಒಟಿಟಿಯಲ್ಲಿ ಪ್ರಸಾರವಾಗಲಿರುವ ಮಲೈಕಾ ಹೊಸ ರಿಯಾಲಿಟಿ ಶೋ 'ಮೂವಿಂಗ್ ಇನ್ ವಿತ್ ಮಲೈಕಾ' ಶೋ ನಡೆಸಿಕೊಡುತ್ತಿದ್ದಾರೆ. ಈ ಶೋನಲ್ಲಿ ಮಲೈಕಾ ಅನೇಕ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಅರ್ಬಾಜ್ ಖಾನ್ ಅವರಿಂದ ವಿಚ್ಛೇದನ ಪಡೆದ ಬಗ್ಗೆಯೂ ಮಲೈಕಾ ಬಹಿರಂಗ ಪಡಿಸಿದರು. ವಿಚ್ಛೇದನದ ಬಳಿಕವೂ ಅರ್ಬಾಜ್ ಜೊತೆ ಉತ್ತಮ ಬಾಂಧವ್ಯ ಇಟ್ಟುಕೊಂಡಿರುವುದಾಗಿ ಮಲೈಕಾ ಹೇಳಿದ್ದಾರೆ. ಅರ್ಬಾಜ್ ಖಾನ್ ಅವರನ್ನು ಮದುವೆಯಾಗಿದ್ದು ಯಾಕೆ ಎಂದು ಮಲೈಕಾ ಅರೋರಾ ಬಹಿರಂಗ ಪಡಿಸಿದರು.  

ತನ್ನ ಮನೆಯಿಂದ ಹೊರ ಬರುವ ಏಕೈಕ ಕಾರಣಕ್ಕೆ ತಾನು ಅರ್ಬಾಜ್ ಖಾನ್ ಅವರನ್ನು ಮದುವೆ ಆಗಿರುವುದಾಗಿ ಹೇಳಿದರು ಮಲೈಕಾ ಅರೋರಾ. ಬಾಲಿವುಡ್ ನಿರ್ದೇಶಕಿ, ಡಾನ್ಸರ್ ಫರ್ಹಾ ಖಾನ್ ಜೊತೆ ಮಾತನಾಡಿದ ಮಲೈಕಾ ತನ್ನ ಜೀವನದ ಅನೇಕ ಘಟನೆಗಳನ್ನು ಬಿಚ್ಚಿಟ್ಟರು. 'ಅರ್ಬಾಜ್‌ಗೆ ಪ್ರಪೋಸ್ ಮಾಡಿದ್ದು ನಾನೇ. ಆದರೆ ಇದು ಯಾರಿಗೂ ಗೊತ್ತಿಲ್ಲ. ಅರ್ಬಾಜ್ ನನಗೆ ಪ್ರಪೋಸ್ ಮಾಡಿದ್ದು ಅಲ್ಲ. ಇದು ಬೇರೆ ರೀತಿಯಲ್ಲಿತ್ತು. ಆದರೆ ನಾನು ನಿಮ್ಮನ್ನು ಮದುವೆಯಾಗ ಬೇಕೆಂದುಕೊಂಡಿದ್ದೀನಿ ಅಂತ ಹೇಳಿದೆ. ನೀವು ಸಿದ್ಧರಿದ್ದೀರಾ? ಅಂತ ಕೇಳಿದೆ. ತುಂಬಾ ಮುದ್ದಾಗಿ ಅವರು (ಅರ್ಬಾಜ್) ನನ್ನ ಕಡೆ ತಿರುಗಿ, ನೀವು ದಿನ ಮತ್ತು ಸ್ಥಳವನ್ನು ಆಯ್ಕೆ ಮಾಡಿ ಎಂದು ನನಗೆ ಹೇಳಿದರು' ಎಂದು ಮಲೈಕಾ ಮಾಜಿ ಪತಿ ಅರ್ಬಾಜ್ ಜೊತೆಗಿನ ಪ್ರೀತಿ ವಿಚಾರವನ್ನು ಬಹಿರಂಗ ಪಡಿಸಿದರು. 

ಮದುವೆ ಬಳಿಕ ಎಲ್ಲಿ ತಪ್ಪಾಯಿತು ಎನ್ನುವುದರ ಬಗ್ಗೆಯೂ ಮಲೈಕಾ ವಿವರಿಸಿದರು. 'ನಾನು ತುಂಬಾ ಚಿಕ್ಕವಳಾಗಿದ್ದೆ. ನಾನು ಕೂಡ ಬದಲಾದೆ. ನಾನು ಜೀವನದಲ್ಲಿ ವಿಭಿನ್ನತೆಯನ್ನು ಬಯಸುತ್ತೇನೆ. ಮತ್ತು ಇಂದು ನಾವು ಉತ್ತಮ ಜನರುನ್ನು ಹೊಂದಿದ್ದೇನೆ. ದಬಾಂಗ್ ಬಿಡುಗಡೆಯಾಗುವವರೆಗೂ ತಮ್ಮ ನಡುವೆ ಎಲ್ಲವೂ ಚೆನ್ನಾಗಿಯೇ ಇತ್ತು. ಆದರೆ ನಂತರ ಅವರು ತುಂಬಾ ಇರಿಟೇಟ್ ಮಾಡುವ ವ್ಯಕ್ತಿಯಾದರದು.  ನನ್ನಿಂದ ದೂರವಾಗಲು ಪ್ರಾರಂಭಿಸಿದರು' ಎಂದು ಹೇಳಿದರು. 

ಅರ್ಬಾಜ್ ಖಾನ್‌ ಜೊತೆ ವಿಚ್ಛೇದನದ ಬಗ್ಗೆ ಮಾತನಾಡಿ ಕಣ್ಣೀರಿಟ್ಟ ಹಾಟ್ ನಟಿ ಮಲೈಕಾ ಅರೋರಾ

ಅರ್ಬಾಜ್ ದೂರ ಆದ ಬಗ್ಗೆ ಮಾತನಾಡುತ್ತಾ ಅವರೊಬ್ಬರು ಅದ್ಭುತ ವ್ಯಕ್ತಿ ಎಂದು ಹೊಗಳಿದ್ದಾರೆ. ಅಪಘಾತವಾದಾಗ ತನ್ನನ್ನು ನೋಡಲು ಬಂದ ಮೊದಲ ವ್ಯಕ್ತಿಯಲ್ಲಿ ಅವರು ಒಬ್ಬರು ಎಂದು ಹೇಳಿದರು. 'ನಾನು ವಾಹನದ ಚಕ್ರದಿಂದ ಹೊರಬಂದಾಗ ನಾನು ನೋಡಿದ ಮೊದಲ ಮುಖಗಳಲ್ಲಿ ಅರ್ಬಾಜ್ ಕೂಡ ಒಬ್ಬರು. ಆ ಕ್ಷಣ ಅವನು ನನ್ನನ್ನು ಕೇಳುತ್ತಲೇ ಇದ್ದರು ನಿನಗೆ ನೋಡಲು ಆಗುತ್ತಾ? ಎಷ್ಟು ಸಂಖ್ಯೆಗಳು? ಎಷ್ಟು ಬೆರಳುಗಳು?' ಎಂದು. ನಾನು ಅವರು ಯಾಕೆ ಇದನ್ನೆಲ್ಲಾ ಕೇಳುತ್ತಿದ್ದಾರೆ? ಅಂತ ತುಂಬಾ ಅಚ್ಚರಿ ಪಟ್ಟಿದ್ದೆ. ಒಂದು ಸೆಕೆಂಡ್‌ಗೆ ನಾನು 'ನಾನು ಹಿಂದೆ ಹೋಗಿದ್ದೆ? ಏನೇ ಆದರು ಅವರು ಜೊತೆಯಲ್ಲೇ ಇರುತ್ತಾರೆ' ಎಂದು ಹೇಳಿದರು. 

ಚಲಿಸುವ ರೈಲಿನ ಮೇಲೆ ಹೆಜ್ಜೆ ಹಾಕಲು ಧೈರ್ಯ ಮಾಡಿದ ನಟಿ ಮಲೈಕಾ ಅರೋರಾ ಒಬ್ಬರೇ

1998ರಲ್ಲಿ ಅರ್ಬಾಜ್ ಜೊತೆ ಮಲೈಕಾ ಮದುವೆ

ಮಲೈಕಾ ಅರೋರಾ 1998ರಲ್ಲಿ ಸಲ್ಮಾನ್ ಖಾನ್ ಅವರ ಸಹೋದರ ಅರ್ಬಾಜ್ ಖಾನ್ ಅವರನ್ನು ವಿವಾಹವಾದರು. ನವೆಂಬರ್ 2002ರಲ್ಲಿ ಮಗ ಅರ್ಹಾನ್ ಖಾನ್ ಅವರನ್ನು ಸ್ವಾಗತಿಸಿದರು. ಇಬ್ಬರೂ  ಸುಮಾರು 18 ವರ್ಷಗಳ ಕಾಲ ಸಂಸಾರ ನಡೆಸಿದಿರು. ಆದರೆ 2017ರಲ್ಲಿ ಇಬ್ಬರೂ ಬೇರೆ ಬೇರೆ ಆಗುವ ಮೂಲಕ ಶಾಕ್ ನೀಡಿದರು. ಆದರೆ ತಮ್ಮ ಮಗನಿಗೆ ಸಹ-ಪೋಷಕತ್ವವನ್ನು ಮುಂದುವರೆಸಿದ್ದಾರೆ. ಮಲೈಕಾ ಈಗ ನಟ ಅರ್ಜುನ್ ಕಪೂರ್ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದರೆ. ಮತ್ತೊಂದೆಡೆ ಅರ್ಬಾಜ್ ಖಾನ್ ಮಾಡೆಲ್ ಜಾರ್ಜಿಯಾ ಆಂಡ್ರಿಯಾ ಜೊತೆ ಡೇಟಿಂಗ್‌ನಲ್ಲಿದ್ದಾರೆ. ಮಲೈಕಾ ಮತ್ತು ಅರ್ಜುನ್ ಕಪೂರ್ ಸದಾ ಸುದ್ದಿಯಲ್ಲಿರುತ್ತಾರೆ. ಇಬ್ಬರೂ ಸದ್ಯದಲ್ಲೇ ಮದುವೆಯಾಗಲಿದ್ದಾರೆ ಎನ್ನುವ ಮಾತು ಸಹ ಕೇಳಿಬರುತ್ತಿದೆ. ಆದರೆ ಈ ಬಗ್ಗೆ ಮಲೈಕಾ ಅಥವಾ ಅರ್ಬಾಜ್ ಆಗಲಿ ಅಧಿಕೃತವಾಗಿ ಎಲ್ಲಿಯೂ ಕೇಳಿಕೊಂಡಿಲ್ಲ. 


  

Latest Videos
Follow Us:
Download App:
  • android
  • ios