ಪ್ರೀತಿಗಾಗಿ ಸಾಯುವತನಕವೂ ಹೋರಾಡ್ತಾರಂತೆ ಮಲೈಕಾ! 1,2,3... ಯಾರ ಜೊತೆ ಕೇಳ್ತಿದ್ದಾರೆ ನೆಟ್ಟಿಗರು!

ಪ್ರೀತಿಗಾಗಿ ಸಾಯುವತನಕವೂ ಹೋರಾಡ್ತಾರಂತೆ ಮಲೈಕಾ ಅರೋರಾ! ಹೀಗೆಂದು ಬರೆದುಕೊಂಡಿದ್ದು, ಇದಕ್ಕೆ ಪ್ರಶ್ನೆಗಳ ಸುರಿಮಳೆಯಾಗ್ತಿದೆ. 
 

Malaika Arora Says I will Fight For Love Till End Amid Breakup Rumours With Arjun Kapoor suc

ವಯಸ್ಸು 50 ಆದ್ರೂ ಇನ್ನೂ ಮಾದಕ ನೋಟ, ಬಟ್ಟೆಗಳಿಂದ ಅಭಿಮಾನಿಗಳ ಹೃದಯ ಕದಿಯುತ್ತಿದ್ದದಾರೆ ಬಾಲಿವುಡ್​ ನಟಿ ಮಲೈಕಾ ಅರೋರಾ. ಈ ಮೂಲಕ ಹಸಿಬಿಸಿ ಲೇಡಿ ಎಂದೇ ಫೇಮಸ್​ ಆಗಿದ್ದಾರೆ. ಇವರ ಮತ್ತು ಇವರಿಗಿಂತಲೂ 11 ವರ್ಷ ಚಿಕ್ಕವರಾಗಿರುವ ಅರ್ಜುನ್​ ಕಪೂರ್​ ಡೇಟಿಂಗ್, ಬ್ರೇಕಪ್​ ವಿಷಯ ಸದಾ ಹಾಟ್​ ಟಾಪಿಕ್​ ಆಗಿಯೇ ಇರುತ್ತದೆ. ​ಕೆಲ ದಿನಗಳಿಂದಲೂ ಇವರು ಬ್ರೇಕಪ್​ ಆಗಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ಈ ಹಿಂದೆಯೂ ಈ ವಿಷಯ ಸಾಕಷ್ಟು ಸದ್ದು ಮಾಡಿತ್ತು. ನಂತರ ಇಬ್ಬರೂ ಒಟ್ಟಾಗಿ ಓಡಾಡಿದ್ದರು. ಇದೀಗ ಬ್ರೇಕಪ್​ ಸುದ್ದಿ ನಿಜವೋ, ಸುಳ್ಳೋ ಗೊತ್ತಿಲ್ಲ. ನಾನು ನನ್ನ ಬಗ್ಗೆ ಸ್ಪಷ್ಟನೆ ಕೊಡುವ ಅಗತ್ಯವಿಲ್ಲ ಎಂದು ಮಲೈಕಾ ಸುದ್ದಿ ಹರಡುವವರ ವಿರುದ್ಧ ಗರಂ ಆಗಿಯೇ ಉತ್ತರಿಸಿದ್ದಾರೆ. ಅದೇನೇ ಇದ್ದರೂ, 50 ವರ್ಷದ ಮಲೈಕಾ ಮತ್ತು ಅರ್ಜುನ್​ ಕಪೂರ್​ ಸುದ್ದಿ ಸಿನಿ ಪ್ರಿಯರ ಬಾಯಲ್ಲಿ ಎಂದಿಗೂ ಹಾಟ್​ ಟಾಪಿಕ್ಕೇ. ವಯಸ್ಸು 50 ಆದರೂ  ಇಂದಿಗೂ ಮಲೈಕಾ ಫಿಟ್​ ಆ್ಯಂಡ್​ ಫೈನ್​ ಆಗಿದ್ದಾರೆ. ತಮ್ಮ ದೇಹಸಿರಿಯನ್ನು ಧಾರಾಳವಾಗಿ ಪ್ರದರ್ಶಿಸುವ ಮೂಲಕವೇ ಖ್ಯಾತಿ ಗಳಿಸಿದವರು ಇವರು. ವಯಸ್ಸು 50 ಆದರೂ ಇಂದಿಗೂ, ಅದನ್ನೇ ಮುಂದುವರೆಸಿಕೊಂಡು ಬಂದಿದ್ದಾರೆ. ಅಪರೂಪಕ್ಕೆ ಸಂಪೂರ್ಣ ದೇಹವನ್ನು ಮುಚ್ಚಿಕೊಂಡು ಟ್ರೋಲ್​ ಆಗುವುದೂ ಇದೆ, ಅಷ್ಟರಮಟ್ಟಿಗೆ ಇವರ ಡ್ರೆಸ್​ ಸೆನ್ಸ್​ಗೆ ಅಭಿಮಾನಿಗಳು ಒಗ್ಗಿ ಹೋಗಿದ್ದಾರೆ.  

ಇದೀಗ ನಟಿ, ತಾನು ಸಾಯುವವರೆಗೂ ಪ್ರೀತಿಗಾಗಿ ಹೋರಾಟ ಮಾಡುತ್ತೇನೆ ಎಂದು ಹೇಳಿದ್ದಾರೆ. ಇವರು ಹೀಗೆ ಯಾಕೆ ಹೇಳುತ್ತಿದ್ದಾರೆ ಎಂದು ಅಭಿಮಾನಿಗಳು ತಲೆ ಕೆಡಿಸಿಕೊಂಡಿದ್ದಾರೆ. ಅಂದ್ರೆ ಬ್ರೇಕಪ್​ ಆಯ್ತಾ ಅಥ್ವಾ ಅರ್ಜುನ್​ ಕಪೂರ್​ನನ್ನು ಇನ್ನೂ ಪ್ರೀತಿಸ್ತಾ ಇದ್ದಾರೋ ಅಥ್ವಾ ಬೇರೊಬ್ಬನ ಎಂಟ್ರಿ ಆಯ್ತಾ ಎಂಬೆಲ್ಲಾ ಗೊಂದಲ ಅಭಿಮಾನಿಗಳನ್ನು ಕಾಡುತ್ತಿದೆ. ಮೊನ್ನೆಯಷ್ಟೇ, ತಮ್ಮ ಬಾಯ್​ಫ್ರೆಂಡ್​ ಅರ್ಜುನ್​ ಕಪೂರ್​ ಅವರ ಹುಟ್ಟುಹಬ್ಬವನ್ನೇ ಮರೆತು ನಂತರ ತೇಪೆ ಹಚ್ಚುವ ಕೆಲಸ ಮಾಡಿ ಮಲೈಕಾ ಟ್ರೋಲ್​ಗೆ ಒಳಗಾಗಿದ್ದರು. ಬ್ರೇಕಪ್​ ಸುದ್ದಿ ಸದ್ದು ಮಾಡುತ್ತಿರುವ ಹೊತ್ತಿನಲ್ಲಿ ಬಾಯ್​ಫ್ರೆಂಡ್​ ಹುಟ್ಟುಹಬ್ಬ ಮಿಸ್​ ಮಾಡಿಕೊಳ್ಳಲು ಸಾಧ್ಯವೇ ಇಲ್ಲ. ಆದರೆ ಮೊನ್ನೆ ಅಂದರೆ ಜೂನ್​ 26ರಂದು ಅರ್ಜುನ್​ ಕಪೂರ್​ 39ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. 50 ವರ್ಷದ ಮಲೈಕಾ ಅದನ್ನು ಮರೆತಿದ್ದರು.

ಬಾಯ್​ಫ್ರೆಂಡ್​ನ ಹುಟ್ಟುಹಬ್ಬ ಮರೆತು ತೇಪೆಹಚ್ಚುವ ಕೆಲ್ಸ ಮಾಡಿದ ಮಲೈಕಾ ಅರೋರಾ ಸಕತ್​ ಟ್ರೋಲ್​

ಕೊನೆಗೆ ಸೋಷಿಯಲ್​ ಮೀಡಿಯಾದಲ್ಲಿ  "ನನ್ನ ಕಣ್ಣು ಮುಚ್ಚಿ ನನ್ನ ಬೆನ್ನು ತಿರುಗಿಸಿ ನಂಬುವ ಜನರನ್ನು ನಾನು ಇಷ್ಟಪಡುತ್ತೇನೆ" ಎಂದು ಬರೆದುಕೊಂಡಿದ್ದರು.  ಇದಕ್ಕಾಗಿ ಸಕತ್​ ಟ್ರೋಲ್​ಗೆ ಒಳಗಾಗಿದ್ದರು. ಈ ಹಿಂದೆ ಅರ್ಬಾಜ್​ ಖಾನ್​ ಕೂಡ ನಿನ್ನನ್ನು ಕಣ್ಣು ಮುಚ್ಚಿಯೇ  ನಂಬಿದ್ದ. ಅವನಿಗೆ ಕೈಕೊಟ್ಟು ಚಿಕ್ಕವನ ಜೊತೆ ಓಡಿ ಬರ್ಲಿಲ್ವಾ? ಮದ್ವೆಯಾಗದೇ ದಶಕದಿಂದ ಒಟ್ಟಿಗೇ ಇಲ್ವಾ? ಈಗೆಲ್ಲಾ ಈ ನಖರಾ ಏಕೆ ಎಂದು ಪ್ರಶ್ನಿಸುತ್ತಿದ್ದಾರೆ. 

ಅಷ್ಟಕ್ಕೂ ಮಲೈಕಾ ಅರೋರಾ (Malaika Arora) ಮತ್ತು ಅರ್ಬಾಜ್ ಖಾನ್ ಅವರನ್ನು ಹಿಂದಿನ ದಿನದ ಹಾಟೆಸ್ಟ್ ಜೋಡಿಗಳಲ್ಲಿ ಒಂದು ಎಂದೇ ಕರೆಯಲಾಗುತ್ತಿತ್ತು. ಆದರೆ ಅವರು ಬೇರ್ಪಟ್ಟು ಹಲವು ವರ್ಷಗಳೇ ಕಳೆದಿವೆ. 2017ರಲ್ಲಿ ಈ ಜೋಡಿ ಬೇರ್ಪಟ್ಟಿದೆ. ಮಲೈಕಾ ಅರೋರಾಗೆ ಈಗ 49 ವರ್ಷ ವಯಸ್ಸು. ಅರ್ಬಾಜ್​ ಖಾನ್​ ಜೊತೆ ಬೇರ್ಪಟ್ಟ ಬಳಿಕ 12 ವರ್ಷ ಚಿಕ್ಕವಾಗಿರುವ ನಟ ಅರ್ಜುನ್ ಕಪೂರ್ (Arjun Kapoor) ಜೊತೆ ಕೆಲ ವರ್ಷಗಳಿಂದ ಡೇಟಿಂಗ್​ ಮಾಡುತ್ತಿದ್ದಾರೆ ಮಲೈಕಾ.  ಮಲೈಕಾ ಅರ್ಜುನ್​ ಕಪೂರ್​ ಜೊತೆ ಡೇಟಿಂಗ್​ನಲ್ಲಿದ್ದರೂ ಮಗನಿಗಾಗಿ ಆಗಾಗ್ಗೆ ಅರ್ಬಾಜ್​ ಖಾನ್​ರನ್ನು ಭೇಟಿಯಾಗುವುದು, ತಬ್ಬಿಕೊಳ್ಳುವುದು ನಡೆದಿದ್ದು, ಇವುಗಳ ವಿಡಿಯೋಗಳೂ ವೈರಲ್​ ಆಗುತ್ತಲೇ ಇರುತ್ತವೆ. ಮಲೈಕಾ ಏನೋ ಅರ್ಜುನ್​ ಕಪೂರ್​ ಜೊತೆ ಹಲವು ವರ್ಷಗಳಿಂದ ಸಂಬಂಧದಲ್ಲಿದ್ದಾರೆ. ಆದರೆ ಅದೇ ಇನ್ನೊಂದೆಡೆ ಅರ್ಬಾಜ್​ ಖಾನ್ ಕೆಲ ತಿಂಗಳ ಹಿಂದೆ ತಮ್ಮ ಅರ್ಧ ವಯಸ್ಸಿನ ಯುವತಿ ಶುರಾ ಜೊತೆ ಮದುವೆಯಾಗಿ ಸಂಸಾರ ನಡೆಸುತ್ತಿದ್ದಾರೆ.
ಅರ್ಜುನ್ ಕಪೂರ್​ ಜೀವನ ನಾನು ಹಾಳು ಮಾಡಿದ್ನಾ? ರಸ್ತೆಯಲ್ಲಿ ಹೋಗ್ತಿರೋನನ್ನು ಎಳ್ಕೊಂಡು ಬಂದು ಇಟ್ಕೊಂಡ್ನಾ ಅಥ್ವಾ...

Latest Videos
Follow Us:
Download App:
  • android
  • ios