ಬಾಯ್‌ಫ್ರೆಂಡ್‌ಗಾಗಿ ಸ್ಪೆಷಲ್ ಇಟಾಲಿಯನ್ ಅಡುಗೆ ಮಾಡಿದ ಮಲೈಕಾ
- ಬಾಯ್‌ಫ್ರೆಂಡ್‌ಗಾಗಿ ಲ್ಯಾವಿಶ್ ಇಟಾಲಿಯನ್ ಲಂಚ್ ಡೇಟ್
- ಅರ್ಜುನ್ ಕಪೂರ್ ಜೊತೆ ಮಲೈಕಾ ಸಂಡೇ ಲಂಚ್
ಬಾಲಿವುಡ್ ಬ್ಯೂಟಿ ಮಲೈಕಾ ಅರೋರಾ ಗ್ರ್ಯಾಂಡ್ ಲಂಚ್ ಡೇಟ್ ಮಾಡಿದ್ದಾರೆ. ಬಾಯ್‌ಫ್ರೆಂಡ್ ಅರ್ಜುನ್ ಕಪೂರ್ ಜೊತೆ ಸ್ಪೆಷಲ್ ಸಂಡೇ ಲಂಚ್ ಮಾಡಿದ್ದು, ಫೋಟೋಗಳನ್ನು ಶೇರ್ ಮಾಡಿದ್ದಾರೆ. ಚಂಯಾ ಚಂಯಾ ಬೆಡಗಿ ಇಟಾಲಿಯನ್ ಡಿಶ್ ಹಾಗೂ ಬಾಯ್‌ಫ್ರೆಂಡ್ ಫೋಟೋ ಕೂಡಾ ಶೇರ್ ಮಾಡಿದ್ದಾರೆ. ಬಾಲಿವುಡ್ ನಟ ಅರ್ಜುನ್ ಕಪೂರ್ ಹಾಗೂ ಮಲೈಕಾ ಜೋಡಿ ಬಹಿರಂಗವಾಗಿ ಗೊತ್ತಿದ್ದರೂ ಈ ಜೋಡಿ ಮದುವೆ ಬಗ್ಗೆ ಏನೂ ಮಾತನಾಡಿಲ್ಲ.
ಬಿ-ಟೌನ್ ಜೋಡಿ ಅರ್ಜುನ್ ಕಪೂರ್ ಮತ್ತು ಮಲೈಕಾ ಅರೋರಾ ಕೂಡ ಪರಸ್ಪರ ಪ್ರೀತಿಯನ್ನು ವ್ಯಕ್ತಪಡಿಸುವ ರೀತಿ ತುಂಬಾ ಸ್ಪೆಷಲ್ ಆಗಿರುತ್ತದೆ. ಇವರಿಬ್ಬರು ತಮ್ಮ ಸಂಬಂಧವನ್ನು ಅತ್ಯಂತ ಸುಂದರವಾಗಿ ಇಟ್ಟುಕೊಂಡಿದ್ದು ಅವರು ತಮ್ಮ ಸೋಷಿಯಲ್ ಮೀಡಿಯಾ ಹ್ಯಾಂಡಲ್‌ಗಳ ಮೂಲಕ ಒಬ್ಬರನ್ನೊಬ್ಬರು ಹೊಗಳುತ್ತಾರೆ. ಮಲೈಕಾ ಅರೋರಾ ಇತ್ತೀಚೆಗೆ ತನ್ನ ಅಭಿಮಾನಿಗಳಿಗೆ ನಟ ಅರ್ಜುನ್ ಕಪೂರ್ ಜೊತೆ ಇಟಾಲಿಯನ್ ಲಂಚ್ ಡೇಟ್‌ನ ಒಂದು ನೋಟವನ್ನು ತೋರಿಸಿದ್ದಾರೆ.
ಸಿಕ್ಸ್ ಪ್ಯಾಕ್ ಫೋಟೋ ಹಂಚಿಕೊಂಡ ನಟಿ ಮಲೈಕಾ ಅರೋರಾ!
ಅರ್ಜುನ್ ಕಪೂರ್‌ಗಾಗಿ ಇಟಾಲಿಯನ್ ಖಾದ್ಯವನ್ನು ತಾಯಾರಿಸಿದ್ದಾರೆ ನಟಿ. ಭಾನುವಾರ ತಮ್ಮ ಕೈಯಾರೆ ಬಾಯ್‌ಫ್ರೆಂಡ್‌ಗೆ ಇಟಾಲಿಯನ್ ತಿನಿಸು ತಿನ್ನಿಸುವ ನಿರ್ಧಾರ ಮಾಡಿದ್ದಾರೆ ಮಲೈಕಾ. ಅವರು ತಮ್ಮ ಅಭಿಮಾನಿಗಳಿಗೆ ಭಾನುವಾರಗಳ ಲಂಚ್ ಡೇಟ್ ಅಪ್‌ಡೇಟ್‌ಗಳನ್ನು ನೀಡುತ್ತಿರುತ್ತಾರೆ. 47 ವರ್ಷದ ನಟಿ ಮಲೈಕಾ ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೋಗಳನ್ನು ಫೀಡ್ ಮಾಡಿದ್ದು, ಸ್ಟೋರಿಯೂ ಶೇರ್ ಮಾಡಿದ್ದಾರೆ. ಇನ್‌ಸ್ಟಾಗ್ರಾಮ್ ಕಥೆಗಳಲ್ಲಿ ಒಂದರ ಹಿಂದೊಂದರಂತೆ ಪೋಸ್ಟ್ ಮಾಡಿದ್ದಾರೆ. ಫೋಟೋದಲ್ಲಿ ನಟಿ ಅರ್ಜುನ್ ತನ್ನ ಅತ್ಯುತ್ತಮ ಭಾನುವಾರದ ಲುಕ್ ಎಂದು ಕರೆದಿದ್ದಾರೆ. ಇದರಲ್ಲಿ ನಟಿಯ ಬಾಯ್‌ಫ್ರೆಂಡ್ ಅರ್ಜುನ್ ಸೋಫಾದಲ್ಲಿ ವಿಶ್ರಾಂತಿ ಪಡೆಯುತ್ತಿರುವುದನ್ನು ಕಾಣಬಹುದು.
ಸೂಪರ್ ಇಟಾಲಿಯನ್ ಊಟಕ್ಕಾಗಿ ಅರ್ಜುನ್ ತನ್ನ ಗೆಳತಿ ಮಲೈಕಾ ಅವರಿಗೆ ಧನ್ಯವಾದ ಹೇಳಲು ಇನ್‌ಸ್ಟಾಗ್ರಾಮ್ ಸ್ಟೋರಿ ಅಪ್‌ಲೋಡ್ ಮಾಡಿದ್ದಾರೆ. ಮಲೈಕಾ ಲಂಚ್ ಟೈಂನ ಒಂದು ಸುಂದರ ಫೋಟೋವನ್ನು ಹಂಚಿಕೊಂಡ ಅವರು, 'ಪಾಸ್ತಾ ಮತ್ತು ಮೇಕರ್' ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ. ಮಲೈಕಾ ಸುಂದರವಾದ ಹೂವಿನ ಪ್ರಿಂಟ್ ಇರೋ ಕಫ್ತಾನ್ ಧರಿಸಿ ಕೂದಲು ಬನ್ ಮಾಡಿರೋದನ್ನು ಕಾಣಬಹುದು.
ಇವರಿಬ್ಬರು ಬಾಲಿವುಡ್‌ನಲ್ಲಿ ಹೆಚ್ಚಾಗಿ ಸುದ್ದಿಯಲ್ಲಿರುತ್ತಾರೆ. ಆದರೆ ಅವರ ಡೇಟಿಂಗ್ ಸುದ್ದಿಗಳು ಆನ್‌ಲೈನ್‌ನಲ್ಲಿ ಕಾಣಿಸಿಕೊಳ್ಳಲಾರಂಭಿಸಿದಾಗ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದರು. ಈ ಜೋಡಿಗೆ 11 ವರ್ಷಗಳ ವಯಸ್ಸಿನ ಅಂತರವಿದೆ. ಆದರೆ ಅವರು ಎಂದಿಗೂ ಪರಸ್ಪರರ ಪ್ರೀತಿಗೆ ವಯಸ್ಸು ಸಂಖ್ಯೆ ಮಾತ್ರ ಎನ್ನುತ್ತಾರೆ.
"