ಮುಂಬೈ (ಮಾ. 2): 26/11 ಮುಂಬೈ ದಾಳಿಯನ್ನು ಯಾರೂ ಮರೆಯಲು ಸಾಧ್ಯವಿಲ್ಲ. ಈ ದಾಳಿಯಲ್ಲಿ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಹುತಾತ್ಮರಾಗಿದ್ದಾರೆ. ಇವರ ಕಥೆಯನ್ನಿಟ್ಟುಕೊಂಡು ಸಿನಿಮಾವೊಂದು ಬರಲಿದೆ.

ಸಿನಿಮಾ ಆಗಲಿದೆ ವೀರಪುತ್ರ ಅಭಿನಂದನ್ ಸಾಹಸಗಾಥೆ 

ತೆಲುಗು ಸೂಪರ್ ಸ್ಟಾರ್ ಮಹೇಶ್ ಬಾಬು ಪ್ರೊಡಕ್ಷನ್ ನಲ್ಲಿ ಈ ಚಿತ್ರ ಮೂಡಿ ಬರಲಿದೆ. ಚಿತ್ರಕ್ಕೆ ಮೇಜರ್ ಎಂದು ಹೆಸರಿಡಲಾಗಿದೆ. 

ಖ್ಯಾತ ನಟ ಅದಿವಿ ಸೇಶ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ತೆಲುಗು ಹಾಗೂ ಹಿಂದಿಯಲ್ಲಿ ಈ ಚಿತ್ರ ಮೂಡಿ ಬರಲಿದೆ. ಈಗಾಗಲೇ ಶೂಟಿಂಗ್ ಶುರುವಾಗಿದ್ದು 2020 ಕ್ಕೆ ತೆರೆಗೆ ಬರಲಿದೆ. 

ದೀಪಿಕಾ ಪಡುಕೋಣೆ ಪ್ರೆಗ್ನೆಂಟ್?

26/11 ಮುಂಬೈ ದಾಳಿಯಲ್ಲಿ ಸಂದೀಪ್ ಉನ್ನಿಕೃಷ್ಣನ್ 14 ಜನರನ್ನು ರಕ್ಷಿಸಿದ್ದರು. ಗಾಯಗೊಂಡ ಕಮಾಂಡರ್ ಒಬ್ಬರನ್ನು ರಕ್ಷಿಸುವ ವೇಳೆ ಬುಲೆಟ್ ಇವರಿಗೆ ತಾಗಿ ಹುತಾತ್ಮರಾದರು.