ಟಾಲಿವುಡ್ ಸ್ಟಾರ್ ನಟ ಮಹೇಶ್ ಬಾಬು ಅವರ ತಂದೆ ಸೂಪರ್ ಸ್ಟಾರ್ ಕೃಷ್ಣ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎನ್ನುವ ಮಾಹಿತಿ ತಿಳಿದುಬಂದಿದೆ. ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎನ್ನುವ ಮಾಹಿತಿ ಬಹಿರಂಗವಾಗಿದೆ.
ಟಾಲಿವುಡ್ ಸ್ಟಾರ್ ನಟ ಮಹೇಶ್ ಬಾಬು ಅವರ ತಂದೆ ಸೂಪರ್ ಸ್ಟಾರ್ ಕೃಷ್ಣ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎನ್ನುವ ಮಾಹಿತಿ ತಿಳಿದುಬಂದಿದೆ. ಮಹೇಶ್ ಬಾಬು ಅವರ ತಂದೆ ಕೃಷ್ಣ ಅವರನ್ನು ತೀವ್ರ ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಿಸಲಾಗಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಮೊದಲು ಆರೋಗ್ಯ ಸ್ಥಿತಿ ಸ್ತಿರವಾಗಿದೆ ಆತಂಕ ಪಡಬೇಕಾಗಿಲ್ಲ ಎನ್ನುವ ಮಾಹಿತಿ ತಿಳಿದುಬಂದಿತ್ತು. ಆದರೀಗ ಆಸ್ಪತ್ರೆಯಿಂದ ಬುಲೆಟಿನ್ ಬಿಡುಗಡೆಯಾಗಿದ್ದು ಕೃಷ್ಣ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು ಐಸಿಯುಗೆ ಶಿಫ್ಟ್ ಮಾಡಲಾಗಿದೆ ಎನ್ನುವ ಮಾಹಿತಿ ಬಹಿರಂಗವಾಗಿದೆ. ಕ್ಷಣ ಕ್ಷಣಕ್ಕೂ ಕ್ಷೀಣಿಸುತ್ತಿರುವ ಕೃಷ್ಣ ಅವರ ಆರೋಗ್ಯ ಸ್ಥಿತಿ ಮಹೇಶ್ ಬಾಬು ಕುಟುಂಬಕ್ಕೆ ಆತಂಕ ಮೂಡಿಸಿದೆ.
ಇತ್ತೀಚಿಗಷ್ಟೆ ತಾಯಿಯನ್ನು ಕಳೆದುಕೊಂಡು ದುಃಖದಲ್ಲಿದ್ದ ಮಹೇಶ್ ಬಾಬುಗೆ ತಂದೆಯ ಅನಾರೋಗ್ಯ ಮತ್ತಷ್ಟು ನೋವು ತಂದಿದೆ. ಅಭಿಮಾನಿಗಳು ಕೃಷ್ಣ ಅವರು ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತಿದ್ದಾರೆ. ಮಹೇಶ್ ಬಾಬು ಅವರಿಗೆ ಧೈರ್ಯ ತುಂಬುತ್ತಿದ್ದಾರೆ.
80 ವರ್ಷದ ನಟ ಕೃಷ್ಣ ಅವರನ್ನು ನವೆಂಬರ್ 13ರಂದು ಹೈದರಾಬಾದ‌್‌ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ತೀವ್ರ ನಿಗಾಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಬಂದಿರುವ ಮಾಹಿತಿ ಪ್ರಕಾರ ಕೃಷ್ಣ ಅವರು ವೆಂಟಿಲೇಟರ್ ಮೂಲಕ ಉಸಿರಾಡುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಮಹೇಶ್ ಬಾಬು ತಂದೆ ಕೃಷ್ಣ ಹೃದಯಘಾತಕ್ಕೆ ಒಳಗಾದ ಬಳಿಕ ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದರು ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು ಎನ್ನುವ ಮಾಹಿತಿ ಬಹಿರಂಗವಾಗಿದೆ. ಸದ್ಯ 24 ಗಂಟೆ ಅಬ್ಸರ್ವೇಷನ್ ನಲ್ಲಿ ಇಡಲಾಗಿದ್ದು ಏನು ಹೇಳಲು ಸಾದ್ಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.
ತೀವ್ರ ಅನಾರೋಗ್ಯ; ಮಹೇಶ್ ಬಾಬು ತಂದೆ ಕೃಷ್ಣ ಆಸ್ಪತ್ರೆಗೆ ದಾಖಲು
ಈ ವರ್ಷ ಮಹೇಶ್ ಬಾಬು ಕುಟುಂಬಕ್ಕೆ ತುಂಬಾ ಕಷ್ಟದ ಸಮಯವಾಗಿದೆ. ಈ ವರ್ಷದ ಆರಂಭದಲ್ಲಿ ಕೃಷ್ಣ ಅವರು ಮೊದಲ ಮಗ ರಮೇಶ್ ಬಾಬು ಅವರನ್ನು ಕಳೆದುಕೊಂಡರು. ಸೆಪ್ಟಂಬರ್‌ನಲ್ಲಿ ಪತ್ನಿ ಇಂದಿರಾ ದೇವಿಯನ್ನು ಕಳೆದುಕೊಂಡರು. ಇದೀಗ ಕೃಷ್ಣ ಅವರ ಅನಾರೋಗ್ಯ. ಮಹೇಶ್ ಬಾಬು ಕುಟುಂಬಕ್ಕೆ ತೀರ ಕಷ್ಟದ ಸಮಯವಾಗಿದೆ. ತಂದೆಯ ಸ್ಥಿತಿಯಿಂದ ಮನೆಯಲ್ಲಿ ಆತಂಕ ಮನೆ ಮಾಡಿದೆ. ಈಗಾಗಲೇ ಇಡೀ ಕುಟುಂಬ ಆಸ್ಪತ್ರೆಯಲ್ಲಿ ಬೀಡು ಬಿಟ್ಟಿದ್ದಾರೆ.
Mahesh Babu Mother Death; ಅಜ್ಜಿ ಮೃತದೇಹದ ಮುಂದೆ ಬಿಕ್ಕಿ ಬಿಕ್ಕಿ ಅತ್ತ ಸಿತಾರಾ; ಮಗಳನ್ನು ಸಂತೈಸಿ ಕಣ್ಣೀರಿಟ್ಟ ನಟ
ಕೃಷ್ಣ ಅವರು ಆರು ದಶಕಗಳಿಂದ ತೆಲುಗು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಅವರು 'ಕುಲ ಗೋತ್ರಲು' , 'ಪರವು ಪ್ರತಿಷ್ಠಾ' ಮತ್ತು 'ಪದಂಡಿ ಮುಂದುಕು' ಚಿತ್ರಗಳಲ್ಲಿ ಸಣ್ಣ ಪಾತ್ರಗಳನ್ನು ಮಾಡುವ ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಘಟ್ಟಮನೇನಿ ಶಿವರಾಮ ಕೃಷ್ಣ ಮೂರ್ತಿಯಾಗಿ ಜನಿಸಿದ ಕೃಷ್ಣ ಅವರಿಗೆ 2009 ರಲ್ಲಿ ಪದ್ಮಭೂಷಣ ಪ್ರಶಸ್ತಿಯನ್ನು ನೀಡಲಾಯಿತು. ಅವರು 350 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.
