Asianet Suvarna News Asianet Suvarna News

ತೀವ್ರ ಅನಾರೋಗ್ಯ; ಮಹೇಶ್ ಬಾಬು ತಂದೆ ಕೃಷ್ಣ ಆಸ್ಪತ್ರೆಗೆ ದಾಖಲು

ತೆಲುಗು ಸ್ಟಾರ್ ಮಹೇಶ್ ಬಾಬು ತಂದೆ ಕೃಷ್ಣ ಅವರನ್ನು ತೀವ್ರ ಅನಾರೋಗ್ಯದ ಹಿನ್ನಲ್ಲೆ ಆಸ್ಪತ್ರೆಗೆ ದಾಖಲಿಸಲಾಗಿದೆ.

telugu star Mahesh Babu father Krishna hospitalised in Hyderabad sgk
Author
First Published Nov 14, 2022, 2:00 PM IST

ಟಾಲಿವುಡ್ ಸ್ಟಾರ್ ನಟ ಮಹೇಶ್ ಬಾಬು ಇತ್ತೀಚಿಗಷ್ಟೆ ತಾಯಿಯನ್ನು ಕಳೆದುಕೊಂಡು ದುಃಖದಲ್ಲಿದ್ದರು. ಇದೀಗ ಮತ್ತೊಂದು ಆಘಾತ ಎದುರಾಗಿದೆ. ಮಹೇಶ್ ಬಾಬು ತಂದೆ ಕೃಷ್ಣ ಅವರನ್ನು ತೀವ್ರ ಅನಾರೋಗ್ಯದ ಹಿನ್ನಲ್ಲೆ ಆಸ್ಪತ್ರೆಗೆ ದಾಖಲಿಸಲಾಗಿದೆ. ನವೆಂಬರ್ 13ರಂದು 80 ವರ್ಷದ ನಟ ಕೃಷ್ಣ ಅವರನ್ನು ಹೈದರಾಬಾದ‌್‌ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎನ್ನುವ ಮಾಹಿತಿ ತಿಳಿದುಬಂದಿದೆ. ಕೃಷ್ಣ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನುವ ಮಾಹಿತಿ ಬಹಿರಂಗ ವಾಗುತ್ತಿದ್ದಂತೆ ಅಭಿಮಾನಿಗಳು ಸಾಮಾಜಿಕ ಜಾಲತಾಣದ ಮೂಲಕ ಬೇಗ ಗುಣಮುಖರಾಗಲಿ ಪ್ರಾರ್ಥಿಸುತ್ತಿದ್ದಾರೆ. ನೆಚ್ಚಿನ ಸ್ಟಾರ್ ಮಹೇಶ್ ಬಾಬು ಅವರಿಗೆ ಧೈರ್ಯ ತುಂಬುತ್ತಿದ್ದಾರೆ. ಸದ್ಯ ಬಂದಿರುವ ಮಾಹಿತಿ ಪ್ರಕಾರ ಕೃಷ್ಣ ಅವರ ಆರೋಗ್ಯ ಸ್ಥಿತಿ ಸುಧಾರಿಸಿದೆ ಎನ್ನಲಾಗಿದೆ. 

ಕೃಷ್ಣ ಅವರ ಪಿರ್ ಸುರೇಶ್ ಕೊಂಡಿ ಟ್ವೀಟ್ ಮಾಡಿ ಮಾಹಿತಿ ತಿಳಿಸಿದ್ದಾರೆ. ಕೃಷ್ಣ ಅವರ ಆರೋಗ್ಯ ಸ್ಥಿರವಾಗಿದೆ. ಜನರೆಲ್ ಚೆಕಪ್‌ಗೆ ಹೋಗಿದ್ದರು. ಆತಂಕ ಪಡಬೇಕಾಗಿಲ್ಲ' ಎಂದು ಹೇಳಿದ್ದಾರೆ. ಕೃಷ್ಣ ಅವರು ಪತ್ನಿ ಇಂದಿರಾ ದೇವಿ ಅವರನ್ನು ಕಳೆದುಕೊಂಡ ನಂತರ ಆಸ್ಪತ್ರೆಗೆ ದಾಖಲಾಗಿದ್ದು ಎನ್ನುವ ಸುದ್ದಿ ವೈರಲ್ ಆಗಿತ್ತು. ಅಲ್ಲದೇ ಹಿರಿಯ ನಟ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದಾರೆ, ಹೃದಯಾಘಾತವಾಗಿದೆ ಎನ್ನುವ ಸುದ್ದಿ ವೈರಲ್ ಆಗಿತ್ತು. ಆದರೆ ಪಿಅರ್ ಸುರೇಶ್ ಅವರು ಈ ಎಲ್ಲಾ ವದಂತಿಗಳನ್ನು ತಳ್ಳಿ ಹಾಕಿದ್ದಾರೆ. ಜೊತೆಗೆ ಆತಂಕ ಪಡುವ ಅಗತ್ಯವಿಲ್ಲ ಎಂದು ಅಭಿಮಾನಿಗಳಿಗೆ ಸುರೇಶ್ ತಿಳಿಸಿದ್ದಾರೆ.

ಟಾಲಿವುಡ್ ನಟ ಮಹೇಶ್ ಬಾಬು ತಾಯಿ ಇಂದಿರಾ ದೇವಿ ನಿಧನ

ಈ ವರ್ಷ ಮಹೇಶ್ ಬಾಬು ಕುಟುಂಬಕ್ಕೆ ತುಂಬಾ ಕಷ್ಟದ ಸಮಯವಾಗಿತ್ತು. ಈ ವರ್ಷದ ಆರಂಭದಲ್ಲಿ ಕೃಷ್ಣ ಅವರು ಮಗ ರಮೇಶ್ ಬಾಬು ಅವರನ್ನು ಕಳೆದುಕೊಂಡರು. ಸೆಪ್ಟಂಬರ್‌ನಲ್ಲಿ ಪತ್ನಿ ಇಂದಿರಾ ದೇವಿಯನ್ನು ಕಳೆದುಕೊಂಡರು. ಇದೀಗ ಕೃಷ್ಣ ಅವರ ಅನಾರೋಗ್ಯ. ಮಹೇಶ್ ಬಾಬು ಕುಟುಂಬಕ್ಕೆ ತೀರ ಕಷ್ಟದ ಸಮಯವಾಗಿದೆ. 

Mahesh Babu Mother Death; ಅಜ್ಜಿ ಮೃತದೇಹದ ಮುಂದೆ ಬಿಕ್ಕಿ ಬಿಕ್ಕಿ ಅತ್ತ ಸಿತಾರಾ; ಮಗಳನ್ನು ಸಂತೈಸಿ ಕಣ್ಣೀರಿಟ್ಟ ನಟ

ಕೃಷ್ಣ ಅವರು ಆರು ದಶಕಗಳಿಂದ ತೆಲುಗು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಅವರು 'ಕುಲ ಗೋತ್ರಲು' , 'ಪರವು ಪ್ರತಿಷ್ಠಾ' ಮತ್ತು 'ಪದಂಡಿ ಮುಂದುಕು' ಚಿತ್ರಗಳಲ್ಲಿ ಸಣ್ಣ ಪಾತ್ರಗಳನ್ನು ಮಾಡುವ ಮೂಲಕ  ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಘಟ್ಟಮನೇನಿ ಶಿವರಾಮ ಕೃಷ್ಣ ಮೂರ್ತಿಯಾಗಿ ಜನಿಸಿದ ಕೃಷ್ಣ ಅವರಿಗೆ 2009 ರಲ್ಲಿ ಪದ್ಮಭೂಷಣ ಪ್ರಶಸ್ತಿಯನ್ನು ನೀಡಲಾಯಿತು. ಅವರು 350 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.


 

Follow Us:
Download App:
  • android
  • ios