ಚಿಕ್ಕ ವಯಸ್ಸಿಗೆ ದೊಡ್ಡ ಪ್ರಾಜೆಕ್ಟ್ ಒಪ್ಪಿಕೊಂಡಿದ್ದಾರೆ ಮಹೇಶ್ ಬಾಬು ಪುತ್ರಿ. ಈ ಪ್ರಾಜೆಕ್ಟ್‌ಗೆ ಭರ್ಜರಿ ಸಂಭಾವನೆ ಪಡೆಯುತ್ತಿದ್ದಾರೆ ಸಿತಾರಾ. 

ಟಾಲಿವುಡ್ ಸ್ಟಾರ್ ಮಹೇಶ್ ಬಾಬು ಪುತ್ರಿ ಸಿತಾರಾ ಘಟ್ಟಮನೇನಿ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಸ್ಟಾರ್ ಆಗಿದ್ದಾರೆ. ಸಿಕ್ಕಾಪಟ್ಟೆ ಫಾಲೋವರ್ಸ್ ಹೊಂದಿರುವ ಸಿತಾರಾ ಸೆಲೆಬ್ರಿಟಗಳ ಸಂದರ್ಶನ, ಫೋಟೋಶೂಟ್ ಅಂತ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾರೆ. ಚಿಕ್ಕ ವಯಸ್ಸಿನಲ್ಲೇ ಯೂಟ್ಯೂಬ್ ಲೋಕಕ್ಕೆ ಎಂಟ್ರಿ ಕೊಟ್ಟಿದ್ದ ಸಿತಾರಾ ಸಂದರ್ಶನದ ಮೂಲಕ ಗಮನ ಸೆಳೆದಿದ್ದರು. ಮಲ್ಟಿ ಟ್ಯಾಲೆಂಟ್ ಸಿತಾರಾ ಖ್ಯಾತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದೀಗ ಪ್ರಿನ್ಸ್ ಪುತ್ರಿ ಹೊಸ ಪ್ರಾಜೆಕ್ಟ್‌ಗೆ ಸಹಿ ಮಾಡಿದ್ದು ಭರ್ಜರಿ ಸಂಭಾವನೆ ಪಡೆಯುತ್ತಿದ್ದಾರೆ. 

ಸಿತಾರಾ ಜಾಹೀರಾತಿನಲ್ಲಿ ನಟಿಸಲು ಒಪ್ಪಿಕೊಂಡು ಈಗಾಗಲೇ ಶೂಟ್ ಕೂಡ ಮುಗಿಸಿದ್ದಾರೆ. ಇದು ಸಿತಾರಾ ಅವರ ಮೊದಲ ದೊಡ್ಡ ಪ್ರಾಜೆಕ್ಟ್ ಆಗಿದೆ. ಜಾಹೀರಾತಿನಲ್ಲಿ ನಟಿಸಲು ದೊಡ್ಡ ಮೊತ್ತದ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ. ಭಾರತೀಯ ಚಿತ್ರರಂಗದಲ್ಲಿ ಬೇರೆ ಯಾವುದೇ ಸ್ಟಾರ್​ ಕಲಾವಿದರ ಮಕ್ಕಳು ಪಡೆಯದಂತಹ ಸಂಭಾವನೆಯನ್ನು ಸಿತಾರಾಗೆ ನೀಡಲಾಗುತ್ತಿದೆ ಎಂದು ಟಾಲಿವುಡ್​ನ ಮಾಧ್ಯಮಗಳು ವರದಿ ಮಾಡಿವೆ. ಅಂದಹಾಗೆ ಇದೊಂದು ಆಭರಣ ಕಂಪನಿಯ ಜಾಹೀರಾತು. ಸತತ ಮೂರು ದಿನಗಳ ಕಾಲ ಇದನ್ನು ಮುಂಬೈನಲ್ಲಿ ಚಿತ್ರೀಕರಿಸಲಾಗಿದೆ. 

ಸಿತಾರಾಳ ಜಾಹೀರಾತನ್ನು ತೀರ ರಹಸ್ಯವಾಗಿ ಅಜ್ಞಾತ ಸ್ಥಳದಲ್ಲಿ 3 ದಿನಗಳ ಕಾಲ ಅದ್ದೂರಿಯಾಗಿ ಚಿತ್ರೀಕರಿಸಲಾಗಿದೆಯಂತೆ. ಈ ಜಾಹೀರಾತು ಹೇಗಿರಲಿದೆ, ಸಿತಾರಾ ಹೇಗೆ ಮಿಂಚಿದ್ದಾರೆ ಎಂದು ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ. 

ನಾವು ತೆಗೆದುಕೊಂಡ ಅತ್ಯುತ್ತಮ ನಿರ್ಧಾರ; ರೊಮ್ಯಾಂಟಿಕ್ ಫೋಟೋ ಮೂಲಕ ಮಹೇಶ್ ಬಾಬು ದಂಪತಿಯ ವಾರ್ಷಿಕೋತ್ಸವ ವಿಶ್

ಅಂದಹಾಗೆ ಸಿತಾರಾ ಅವರನ್ನು ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್‌ಗೆ ಹೋಲಿಕೆ ಮಾಡುತ್ತಿದ್ದಾರೆ. ಸುಹಾನಾ ಕೂಡ ಇತ್ತೀಚೆಗಷ್ಟೆ ನ್ಯೂಯಾರ್ಕ್ ಮೂಲದ ಬ್ಯೂಟಿ ಬ್ರ್ಯಾಂಡ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಆ ಮೂಲಕ ದೊಡ್ಡ ಮೊತ್ತದ ಸಂಭಾವನೆ ಪಡೆದಿದ್ದಾರೆ. ಚಿಕ್ಕ ವಯಸ್ಸಿನಲ್ಲಿ ಇಷ್ಟು ಖ್ಯಾತಿ ಪಡೆಯುತ್ತಿರುವ ಮಕ್ಕಳನ್ನು ನೋಡಿ ಪೋಷಕರು ಸಂತಸ ಪಡುತ್ತಿದ್ದಾರೆ.

ಮಗ ಬದುಕಲ್ಲ ಎನ್ನುವ ಭಯವಿತ್ತು, ಮಗಳು ಅನ್‌ಪ್ಲ್ಯಾನ್ಡ್‌ ಬೇಬಿ; ಚಿತ್ರರಂಗ ಬಿಡಲು ಕಾರಣ ತಿಳಿಸಿದ ನಮ್ರತಾ

10 ವರ್ಷ ವಯಸ್ಸಿನ ಸಿತಾರಾ ಸೋಶಿಯಲ್​ ಮೀಡಿಯಾದಲ್ಲಿ ಸಖತ್​ ಆ್ಯಕ್ಟೀವ್ ಆಗಿದ್ದು ಇನ್​ಸ್ಟಾಗ್ರಾಂನಲ್ಲಿ 12 ಲಕ್ಷ ಜನರು ಫಾಲೋವರ್ಸ್ ಹೊಂದಿದ್ದಾರೆ. ಸಿತಾರಾ ಅದ್ಭುತ ಡಾನ್ಸರ್ ಹಾಗೂ ಸಿಂಗರ್ ಕೂಡ ಹೌದು. ಒಂದು ಸಿನಿಮಾದಲ್ಲಿ ಅಪ್ಪನ ಜೊತೆ ನಟಿಸಿದ್ದರು. ‘ಸರ್ಕಾರು ವಾರಿ ಪಾಟ’ ಚಿತ್ರದ ‘ಪೆನ್ನಿ..’ಹಾಡಿಗೆ ಸಿತಾರಾ ಡ್ಯಾನ್ಸ್ ಮಾಡಿದ್ದರು. ಇದೀಗ ಜಾಹೀರಾತು ಕ್ಷೇತ್ರಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ನಾಯಕಿಯಾಗಿ ಮಿಂಚುವುದ್ರಲ್ಲಿ ಯಾವುದೇ ಅನುಮಾನ ಇಲ್ಲ ಎನ್ನುವುದು ಗೊತ್ತಾಗುತ್ತಿದೆ.