Asianet Suvarna News Asianet Suvarna News

ಅಭಿಮಾನಿಯ ಇಡೀ ಕುಟುಂಬ ದತ್ತು ಪಡೆದ ಮಹೇಶ್ ಬಾಬು! ನಿಜವಾದ ಹೀರೋ ಅಂದ್ರೆ ಇವ್ರೇ ಅಲ್ಲವೆ?

ಅಭಿಮಾನಿಯ ಇಡೀ ಕುಟುಂಬ ದತ್ತು ಪಡೆದಿದ್ದಾರೆ ತೆಲುಗು ಸೂಪರ್‌ಸ್ಟಾರ್  ಮಹೇಶ್ ಬಾಬು! ನಿಜವಾದ ಹೀರೋ ಅಂದ್ರೆ ಇವ್ರೇ ಅಲ್ಲವೆ? 
 

Mahesh Babu adopts fan Rajesh family with three children promises lifelong support suc
Author
First Published Jun 21, 2024, 8:05 PM IST

ಕೆಲವು ಚಿತ್ರತಾರೆಯರು ನಟನೆ ಮಾತ್ರವಲ್ಲದೇ ಸಮಾಜಮುಖಿ ಕಾರ್ಯಗಳ ಮೂಲಕವೂ ಮಾದರಿಯಾಗುತ್ತಿದ್ದಾರೆ. ಅಂಥವರಲ್ಲಿ ಒಬ್ಬರು  ತೆಲುಗು ಸೂಪರ್‌ಸ್ಟಾರ್ ಮಹೇಶ್ ಬಾಬು. ಇದೀಗ ನಟ, ತಮ್ಮ ಅಭಿಮಾನಿಯೊಬ್ಬರ ಇಡೀ ಕುಟುಂಬವನ್ನು ದತ್ತು ಪಡೆಯುವ ಮೂಲಕ ಅವರ ಕಷ್ಟದ ಕಾಲದಲ್ಲಿ ನೆರವಾಗಿದ್ದಾರೆ. ಈ ಹಿಂದೆಯೂ ಸಹಾಯ ಮಾಡುವ ಮೂಲಕ ಹೆಸರುವಾಸಿಯಾಗಿರುವ ಮಹೇಶ್‌ ಬಾಬು ಅವರು ಇದೀಗ  ರಾಜೇಶ್‌ ಎನ್ನುವ ಅಭಿಮಾನಿಯ ಮೂವರು ಚಿಕ್ಕ ಮಕ್ಕಳ ಸಹಿತ ಕುಟುಂಬವನ್ನು ದತ್ತು ಪಡೆದುಕೊಂಡಿದ್ದಾರೆ.

ರಾಜೇಶ್‌ ಕುಟುಂಬವು ಮಹೇಶ್‌ಬಾಬು ಅವರ  ಮೇಲಿನ ಅಭಿಮಾನದಿಂದ  ಮಕ್ಕಳಿಗೆ ಅರ್ಜುನ್, ಅತಿಥಿ, ಆಗಡು ಎಂದು ಮಹೇಶ್ ಸಿನಿಮಾಗಳ ಹೆಸರಿಟ್ಟಿದ್ದಾರೆ. ಇದೀಗ ಅವರು  ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದಾರೆ. ನಟ ಮಹೇಶ್​​ ಬಾಬು ಅವರು  ಅಭಿಮಾನಿಯ ಕುಟುಂಬವನ್ನು ದತ್ತು ಪಡೆದು ಬೀದಿಗೆ ಬಿದ್ದಿದ್ದ ಕುಟುಂಬಕ್ಕೆ ಆರ್ಥಿಕವಾಗಿ ಆಧಾರವಾಗಿದ್ದಾರೆ.

ಐಶ್ವರ್ಯಳನ್ನು ಕಂಡ್ರೆ ಅಮಿತಾಭ್​ಗೆ ಆಗೋದಿಲ್ಲ ಅನ್ನೋದು ನಿಜವಾಗೋಯ್ತಾ? ಸತ್ಯ ಒಪ್ಪಿಕೊಂಡ್ರಾ ಬಿಗ್​-ಬಿ?

ಅಂದಹಾಗೆ ಈ ಘಟನೆ ನಡೆದಿರುವುದು ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯಲ್ಲಿ.   ಕೆಲ ದಿನಗಳಿಂದ ರಾಜೇಶ್​​ ತೀವ್ರ ಆರೋಗ್ಯ ಸಮಸ್ಯೆಯಿಂದ ಬಳಲಿ ಹಾಸಿಗೆ ಹಿಡಿದಿದ್ದು, ಇಡೀ ಕುಟುಂಬಕ್ಕೆ ತೊಂದರೆಯಾಗಿದೆ. ರಾಜೇಶ್‌ ಕಿಡ್ನಿ ವೈಫಲ್ಯಕ್ಕೆ ತುತ್ತಾಗಿದ್ದಾರೆ.  ತಂದೆ ಆಸ್ಪತ್ರೆ ಸೇರಿದ್ದರಿಂದ ಮಕ್ಕಳು ಓದು ನಿಲ್ಲಿಸಿದರು. ಜೊತೆಗೆ ಹಿರಿಯ ಮಗ ಕೆಲಸಕ್ಕೆ ಸೇರಿಕೊಂಡ, ಚಪ್ಪಲಿ ಅಂಗಡಿಯಲ್ಲಿ ದುಡಿದು ಮನೆ ನೋಡಿಕೊಳ್ಳುತ್ತಿದ್ದಾನೆ. ಈ ಪರಿಸ್ಥಿತಿ ನಟ ಮಹೇಶ್ ಬಾಬುಗೆ ತಿಳಿದುಬಂದಿದೆ. ತಕ್ಷಣ ಅವರು ಈ ಕಷ್ಟಕ್ಕೆ ಸ್ಪಂದಿಸುವ ಕೆಲಸ ಮಾಡಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಈ ಬಗ್ಗೆ ಕೆಲವರು ಮಾಹಿತಿ ನೀಡಿದ್ದರು. ಇದನ್ನು ಗಮನಿಸಿರುವ ನಟ, ಫ್ಯಾನ್‌  ಕುಟುಂಬಕ್ಕೆ ಆಧಾರವಾಗಿದ್ದಾರೆ.   ಮೂವರು ಮಕ್ಕಳನ್ನು ದತ್ತು ಪಡೆದು ಅವರ ಶಿಕ್ಷಣದ ಸಂಪೂರ್ಣ ಜವಾಬ್ದಾರಿ ತೆಗೆದುಕೊಂಡಿದ್ದಾರೆ. ಸದ್ಯ ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. 

ಇವರ ಈ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.  ಖ್ಯಾತ ಸಂಗೀತ ನಿರ್ದೇಶಕ ಥಮನ್ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.  ಅಂದಹಾಗೆ ನಟ, ತೆರೆ ಮೇಲೆ ಮಾತ್ರವಲ್ಲ, ನಿಜ ಜೀವನದಲ್ಲೂ ಮಹೇಶ್ ಬಾಬು ರಿಯಲ್ ಸೂಪರ್ ಸ್ಟಾರ್ ಎಂದೇ ಗುರುತಿಸಿಕೊಂಡಿದ್ದಾರೆ. ಇವರ ಹೆಸರಿನಲ್ಲಿ ಮಹೇಶ್ ಬಾಬು ಫೌಂಡೇಶನ್ ಎಂಬ ದತ್ತಿ ಸಂಸ್ಥೆಯನ್ನು ಸ್ಥಾಪಿಸಿ ಹಲವು ಸೇವಾ ಕಾರ್ಯಗಳನ್ನು ಮಾಡುತ್ತಿದ್ದಾರೆ. ಸಂಕಷ್ಟದಲ್ಲಿರುವ ಅಭಿಮಾನಿಗಳಿಗೂ ಬೆಂಬಲ ನೀಡುತ್ತಿದ್ದಾರೆ. ಇತ್ತೀಚೆಗೆ, ಮಹೇಶ್ ಬಾಬು ತಮ್ಮ ನಾಯಕನಿಗೆ ಜೀವನದಲ್ಲಿ ಮರೆಯಲಾಗದ ಸಹಾಯ ಹಸ್ತ ನೀಡಿದ ಕೆಲಸ ಮಾಡಿದ್ದಾರೆ.
 

'ಹಾಳಾಗೋದೆ’ ಕೇಳಿ ಚಂದನ್‌ ಶೆಟ್ಟಿಗೆ ಪುನೀತ್‌ ರಾಜ್‌ಕುಮಾರ್‌ ಹೇಳಿದ್ದೇನು? ಆ ದಿನಗಳ ನೆನೆದ ಗಾಯಕ

 

Latest Videos
Follow Us:
Download App:
  • android
  • ios