ಶಾರುಖ್ ಖಾನ್ 'ಮನ್ನತ್' ಬಂಗಲೆಯ ಗುತ್ತಿಗೆ ಪರಿವರ್ತನೆಗೆ ಸರ್ಕಾರಕ್ಕೆ ಹೆಚ್ಚುವರಿ ₹9 ಕೋಟಿ ಪಾವತಿಸಿದ್ದರು. ಲೆಕ್ಕ ದೋಷದಿಂದಾಗಿ ಹೆಚ್ಚುವರಿ ಹಣ ಪಾವತಿಸಿದ್ದಾಗಿ ತಿಳಿದ ನಂತರ ಮರುಪಾವತಿಗೆ ಅರ್ಜಿ ಸಲ್ಲಿಸಿದ್ದರು. ಮಹಾರಾಷ್ಟ್ರ ಸರ್ಕಾರ ಈಗ ₹9 ಕೋಟಿ ಹಣವನ್ನು ಶಾರುಖ್ ದಂಪತಿಗೆ ಮರಳಿಸಲಿದೆ.
ಬಾಲಿವುಡ್ ಕಿಂಗ್ ಖಾನ್ ಶಾರುಖ್ ನಟಿಸಿದ ಡಂಕಿ, ಜವಾನ್ ಸಿನಿಮಾಗಳು ಬಿಡುಗಡೆಯಾಗಿವೆ. ₹350 ಕೋಟಿ ಬಜೆಟ್‌ನ ಜವಾನ್ ₹1100 ಕೋಟಿಗೂ ಹೆಚ್ಚು ಗಳಿಸಿದೆ. ಶಾರುಖ್ ಯಾವುದೇ ಸಿನಿಮಾಗೆ ಸೈನ್ ಮಾಡಿಲ್ಲ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸರ್ಕಾರ ಶಾರುಖ್‌ಗೆ ₹9 ಕೋಟಿ ನೀಡುತ್ತಿದೆ ಎನ್ನಲಾಗಿದೆ.
ಶಾರುಖ್ ಖಾನ್ ಹಣವೇ ಕೊಡದಿದ್ರೂ ಬೀದಿ ವ್ಯಾಪಾರಿಗಳು ಮಾಲಾಮಾಲ್- ಇದು ನಟನ ಕಮಾಲ್!
ಮಹಾರಾಷ್ಟ್ರ ಸರ್ಕಾರವು ಬಾಲಿವುಡ್ ನಟ ಶಾರುಖ್ ಖಾನ್ ಅವರ ಸಮುದ್ರಾಭಿಮುಖ ಬಂಗಲೆಯ `ಮನ್ನತ್' ನ ಗುತ್ತಿಗೆಯನ್ನು ಪರಿವರ್ತಿಸಲು ಹೆಚ್ಚುವರಿಯಾಗಿ ಪಾವತಿಸಿದ 9 ಕೋಟಿ ರೂಪಾಯಿಗಳನ್ನು ಮರುಪಾವತಿಸಲಿದೆ. ಮುಂಬೈನ ಬಾಂದ್ರಾದ ಬ್ಯಾಂಡ್‌ಸ್ಟ್ಯಾಂಡ್‌ನಲ್ಲಿದೆ ಮನ್ನತ್. ಶಾರುಖ್ ವಾಸಿಸುವ ಜಾಗವನ್ನು ಮಹಾರಾಷ್ಟ್ರ ಸರ್ಕಾರ ಲೀಸ್‌ಗೆ ನೀಡಿತ್ತು. ಹಿಂದಿನ ಮಾಲೀಕರು ಆ ಜಾಗವನ್ನು ಶಾರುಖ್‌ಗೆ ಮಾರಿದ್ದರು. ಈಗ ಶಾರುಖ್, ಗೌರಿ ಖಾನ್ ₹9 ಕೋಟಿ ಮರಳಿ ಕೇಳುತ್ತಿದ್ದಾರೆ.
ಅಭಿಮಾನಿಯೊಬ್ಬನ ತಪಸ್ಸಿಗೆ ಕೊನೆಗೂ ಒಲಿದು ದರ್ಶನ ನೀಡಿದ ಶಾರುಖ್! 95 ದಿನಗಳ ಕಾಯುವಿಕೆ ಅಂತ್ಯ...
ಲೀಸ್ ಜಾಗಗಳನ್ನು ಫ್ರೀಹೋಲ್ಡ್ ಆಗಿ ಪರಿವರ್ತಿಸುವ ಸರ್ಕಾರದ ನೀತಿಯನ್ನು ಶಾರುಖ್, ಗೌರಿ ಖಾನ್ ಬಳಸಿಕೊಂಡರು. 2019ರ ಮಾರ್ಚ್‌ನಲ್ಲಿ ₹27.50 ಕೋಟಿ ಪಾವತಿಸಿದ್ದರು. 2019 ರಲ್ಲಿ ಶಾರುಖ್ ಖಾನ್ ಮತ್ತು ಅವರ ಪತ್ನಿ ಗೌರಿ ಖಾನ್ ಅವರು ಬಾಂದ್ರಾದಲ್ಲಿನ ಪಿತ್ರಾರ್ಜಿತ ಆಸ್ತಿಯ ಗುತ್ತಿಗೆಯನ್ನು '1 ನೇ ತರಗತಿಯ ಸಂಪೂರ್ಣ ಮಾಲೀಕತ್ವಕ್ಕೆ' ಪರಿವರ್ತಿಸಿದ್ದಾರೆ ಮತ್ತು ಅದಕ್ಕಾಗಿ ಸರ್ಕಾರಕ್ಕೆ ಸ್ವಲ್ಪ ಪ್ರೀಮಿಯಂ ಪಾವತಿಸಿದ್ದಾರೆ ಎಂದು ನಿವಾಸಿ ಉಪನಗರ ಕಲೆಕ್ಟರ್ ಸತೀಶ್ ಬಾಗಲ್ ಶನಿವಾರ ಹೇಳಿದ್ದಾರೆ.
ಪ್ರೀಮಿಯಂ ಅನ್ನು ಲೆಕ್ಕಹಾಕಿದ ಆಧಾರದ ಮೇಲೆ ಟ್ಯಾಬ್ಯುಲೇಶನ್ ದೋಷ ಇರುವುದು ಗೊತ್ತಾಗಿದೆ. ಸರ್ಕಾರದ ತಪ್ಪಿನಿಂದ ಹೆಚ್ಚುವರಿ ಹಣ ಪಾವತಿಸಿದ್ದಾಗಿ ಶಾರುಖ್, ಗೌರಿ ಖಾನ್ ಗೆ ಯಾವಾಗ ತಿಳಿಯಿತು ತಕ್ಷಣ ಮಂಜೂರಾದ ಮರುಪಾವತಿಗಾಗಿ ಕಂದಾಯ ಪ್ರಾಧಿಕಾರದ ಮುಂದೆ ಅರ್ಜಿಯನ್ನು ಸಲ್ಲಿಸಿದರು. ಹೆಚ್ಚುವರಿ ಮೊತ್ತವನ್ನು ಮರಳಿಸುವಂತೆ ಕೇಳಿದರು. ಇದಕ್ಕೆ ಮಹಾರಾಷ್ಟ್ರ ಸರ್ಕಾರ ಒಪ್ಪಿದೆ.
ಯಾವ ಅರಮನೆಗೂ ಕಮ್ಮಿ ಇಲ್ಲ ಬಾಲಿವುಡ್ ಕಿಂಗ್ ಶಾರುಖ್ ಖಾನ್ 200 ಕೋಟಿ ಮೌಲ್ಯದ ಬಂಗಲೆ ‘ಮನ್ನತ್’
