ಮಹಾರಾಷ್ಟ್ರ ಸರ್ಕಾರ ಬಾಲಿವುಡ್ ಹಿರಿಯ ನಟ ಅಮಿತಾಭ್ ಬಚ್ಚನ್ ಹಾಗೂ ಅವರ ಪತ್ನಿ ನಟಿ, ಸಂಸದೆ ಜಯಾ ಬಚ್ಚನ್‌ಗೆ ಭದ್ರತೆ ನೀಡಿದೆ. ಸೋಷಿಯಲ್ ಮೀಡಿಯಾಗಳಲ್ಲಿ ಬೆದರಿಕೆ ಬಂದುದರಿಂದ ಸೆಲೆಬ್ರಿಟಿ ಕಪಲ್‌ಗೆ ಸರ್ಕಾರ ಪಾರಾಮೀಟರ್ ಭದ್ರತೆ ನೀಡಿದೆ.

ಅಮಿತಾಭ್ ಬಚ್ಚನ್, ಜಯಾ ಬಚ್ಚನ್, ಅಭಿಷೇಕ್ ಬಚ್ಚನ್, ಐಶ್ವರ್ಯಾ ರೈ ಬಚ್ಚನ್ ಹಾಗೂ ಆರಾಧ್ಯ ಬಚ್ಚನ್ ವಾಸಿಸುವ 2 ಬಂಗಲೆಗಳಿಗೆ ಸರ್ಕಾರ ಭದ್ರತೆಯನ್ನು ಒದಗಿಸಿದೆ.

ಡ್ರಗ್ಸ್ ಮಾಫೀಯಾ: ಬಾಲಿವುಡ್ ಪರ ನಿಂತ ಜಯಾ ಬಚ್ಚನ್..! ಬಿಗ್‌ಬಿಗೆ ಟ್ರೋಲಿಗರ ಟೀಕೆ

ಸಂಸತ್ತಿನಲ್ಲಿ ಮುಂಗಾರು ಅಧಿವೇಶನದಲ್ಲಿ ಬಾಲಿವುಡ್ ಡ್ರಗ್ಸ್ ಆರೋಪಗಳ ವಿರುದ್ಧ ಜಯಾ ಬಚ್ಚನ್ ಮಾತನಾಡಿದ ಬೆನ್ನಲ್ಲೇ ಸೆಲೆಬ್ರಟಿಗಳಿಗೆ ಸೋಷಿಯಲ್ ಮೀಡಿಯಾದಲ್ಲಿ ಬೆದರಿಕೆ ಬರಲಾರಂಭಿಸಿದೆ.

ಕುಟುಂಬದ ಸುರಕ್ಷತೆ ದೃಷ್ಟಿಯಿಂದ ಅವರ ಮನೆಯ ಸುತ್ತ ಭದ್ರತೆ ಹೆಚ್ಚಿಸಲಾಗಿದೆ. ಯಾವುದೇ ವಿಶೇಷ ಭದ್ರತೆ ನೀಡಲಾಗಿಲ್ಲ ಎಂದಿದ್ದಾರೆ. ಜುಹುವಿನಲ್ಲಿರುವ ಇವರ ಬಂಗಲೆ ಜಲ್ಸಾಗೆ ಮುಂಬೈ ಪೊಲೀಸರು ಹೆಚ್ಚಿನ ಭದ್ರತೆ ನೀಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಬಂದ ಬೆದರಿಕೆ ಸಂದೇಶಗಳ ಬಗ್ಗೆ ಸೈಬರ್ ಸೆಲಗ ತನಿಖೆ ನಡೆಸುತ್ತಿದೆ ಎಂದು ತಿಳಿದು ಬಂದಿದೆ.