ಬಾಲಿವುಡ್‌ ವಿರುದ್ಧ ಕೇಳಿ ಬರುತ್ತಿರುವ ಡ್ರಗ್ಸ್ ಆರೋಪದ ಬಗ್ಗೆ ಹಿರಿಯ ನಟಿ, ಸಮಾಜವಾದಿ ಪಕ್ಷದ ಸದಸ್ಯೆ ಜಯಾಬಚ್ಚನ್ ಸಂಸತ್ತಿನಲ್ಲಿ ಮಾತನಾಡಿದ್ದು, ಬಾಲಿವುಡ್ ಸದಸ್ಯರು ಎದುರಿಸುವ ಸಮಸ್ಯೆ ಕೊನೆ ಮಾಡಿ ಅವರಿಗೆ ರಕ್ಷಣೆ ನೀಡಬೇಕೆಂದು ಕೇಳಿಕೊಂಡಿದ್ದರು.

ಇದೀಗ ನಟಿಯ ಹೇಳಿಕೆಗೆ ಟ್ವಿಟರ್‌ನಲ್ಲಿ ಭಾರೀ ಟೀಕೆ ವ್ಯಕ್ತವಾಗಿದ್ದು, ಬಹಳಷ್ಟು ಜನ ಲಿಂಗ ತಾರತಮ್ಯ ರೀತಿಯಲ್ಲಿ ಟ್ವೀಟ್ ಮಾಡಿದ್ದಾರೆ. ಜಯಾ ಬಚ್ಚನ್‌ನನ್ನು ಶೇಮ್‌ಲೆಸ್ ಲೇಡಿ ಎಂದು ನೆಟ್ಟಿಗರು ಟ್ರೋಲ್ ಮಾಡಿದ್ದಾರೆ. ಹಾಗೆಯೇ ಅಮಿತಾಬ್ ಬಚ್ಚನ್‌ಗೆ ಪತ್ನಿಯನ್ನು ನಿಯಂತ್ರಣದಲ್ಲಿಡುವಂತೆ ಹೇಳಿದ್ದಾರೆ.

Sorry ಸಾರಾ, Sorry ರಾಕುಲ್ ಎಂದ ನಟಿ ಸಮಂತಾ..!

ನಟ ಹಾಗೂ ಸಂಸದ ರವಿ ಕಿಶನ್ ಲೋಕಸಭೆಯಲ್ಲಿ ನೀಡಿದ ಹೇಳಿಕೆ ಬೆನ್ನಲ್ಲಿ ನಟಿ ಪ್ರತಿಕ್ರಿಯಿಸಿದ್ದಾರೆ. ಕೆಲವರಿಂದಾಗಿ ನೀವು ಇಡೀ ಇಂಡಸ್ಟ್ರಿಯನ್ನು ಆರೋಪಿಸಬಾರದು. ನಿನ್ನೆ ನಮ್ಮ ಸಂಸತ್ತಿನಿಂದ ಒಬ್ಬರು ಸದಸ್ಯ ಇಂಡಸ್ಟ್ರಿಯಿಂದಲೇ ಬಂದು ಇಂಡಸ್ಟ್ರಿ ವಿರುದ್ಧವೇ ಮಾತನಾಡಿದ್ದಾರೆ. ಉಣ್ಣು ತಟ್ಟೆಯಲ್ಲಿ ತಾವೇ ತೂತು ಮಾಡಿದಂತೆ ಎಂದು ಜಯಾ ಬಚ್ಚನ್ ಹೇಳಿದ್ದರು.

ಆಧಾರ ರಹಿತ ಆರೋಪಗಳ ವಿರುದ್ಧ ಬಾಲಿವುಡ್ ಪರ ನಿಂತ ನಟಿಯಲ ನಿಲುವಿಗೆ ಬಹಳಷ್ಟು ಜನರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಆದರೆ ನೆಪೊಟಿಸಂ, ಡ್ರಗ್ಸ್ ಬಗ್ಗೆ ಮಾತನಾಡೋ ಕಂಗನಾಗೆ ಮಾತ್ರ ಈ ಮಾತು ಹಿಡಿಸಿಲ್ಲ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ.

Engineer's Day: ಎಂಜಿನಿಯರಿಂಗ್ ಮಾಡಿ ಬಾಲಿವುಡ್‌ಗೆ ಬಂದವ್ರು ಇವರು..!

ತನ್ನದೇ ಮಗ ಅಭಿಷೇಕ್ ಇದೇ ರೀತಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿದ್ದರೆ ಇದೇ ಮಾತು ಹೇಳಬಲ್ಲಿರಾ ಎಂದು ಕಂಗನಾ ಮರು ಪ್ರಶ್ನಿಸಿದ್ದಾರೆ. ಕಂಗನಾ ಟ್ವೀಟ್ ನಂತರ ಬಚ್ಚನ್‌ ಕಡೆಗೆ ಟ್ರೋಲಿಗರ ಕೋಪ ಇನ್ನಷ್ಟು ಹೆಚ್ಚಿದೆ. ಜಯಾಜಿ ತಮ್ಮ ಮಗಳನ್ನು ರಕ್ಷಿಸುತ್ತಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.