ಮಹಾಕುಂಭ ಮೇಳದಲ್ಲಿ ಸರ ಮಾರುತ್ತಿದ್ದ ಮೊನಾಲಿಸಾ ರಾತ್ರೋ ರಾತ್ರಿ ವೈರಲ್ ಆಗಿ ಇದೀಗ ಬಾಲಿವುಡ್ ಚಿತ್ರದಲ್ಲಿ ಆಫರ್ ಪಡೆದಿದ್ದಾರೆ. ಈ ಚಿತ್ರಕ್ಕೆ ಮೊನಾಲಿಸಾ ಪಡೆದ ಸಂಭಾವನೆ ಎಷ್ಟು ಗೊತ್ತಾ?
ಮುಂಬೈ(ಫೆ.01) ಮಹಾಕುಂಭ ಮೇಳದಲ್ಲಿ ಮಣಿ ಮಾಲೆ ಸರ ಮಾರುತ್ತಿದ್ದ ಬೆಡಗಿ ಮೊನಾಲಿಸಾ ತನ್ನ ಸೌಂದರ್ಯ, ಆಕರ್ಷಕ ಕಣ್ಣುಗಳಿಂದ ಭಾರಿ ಜನಪ್ರಿಯತೆ ಪಡೆದಿದ್ದಾರೆ. ಈಕೆಯ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಮೊನಾಲಿಸಾ ನೋಡಲು, ಸಂದರ್ಶನ ಮಾಡಲು ವ್ಲೋಗರ್ಸ್ ಸೇರಿದಂತೆ ಹಲವರು ಭಾರಿ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಏಕಾಏಕಿ ಬಂದ ಜನಪ್ರಿಯತೆ ಹಾಗೂ ಪ್ರತಿ ದಿನ ಸಾವಿರಾರು ಮಂದಿಯ ಭೇಟಿಯಿಂದ ಮೊನಾಲಿಸಾ ತನ್ನ ಸರ ಮಾರಾಟದಲ್ಲಿ ತೀವ್ರ ಹಿನ್ನಡೆ ಅನುಭವಿಸಿದ್ದರು. ಇಷ್ಟೇ ಅಲ್ಲ ತೀವ್ರ ಸಮಸ್ಯೆ ಅನುಭವಿಸಿದ ಕಾರಣ ಅನಿವಾರ್ಯವಾಗಿ ತವರಿಗೆ ವಾಪಾಸ್ಸಾಗಿದ್ದರು. ಈ ವೈರಲ್ ಬೆಡೆಗಿ ಮೊನಾಲಿಸಾ ಅಷ್ಟೇ ವೇಗದಲ್ಲಿ ಬಾಲಿವುಡ್ ಚಿತ್ರದ ಆಫರ್ ಗಿಟ್ಟಿಸಿಕೊಂಡಿದ್ದಳು. ಡೈರಿ ಆಫ್ ಮಣಿಪುರ ಚಿತ್ರದಲ್ಲಿ ಮೊನಾಲಿಸಾ ಪ್ರಮುಖ ಪಾತ್ರ ನಿಭಾಯಿಸುತ್ತಿದ್ದಾರೆ. ಈ ಚಿತ್ರದ ಸಂಭಾವನೆ ಇದೀಗ ಭಾರಿ ಸದ್ದು ಮಾಡುತ್ತಿದೆ.
ಬಾಲಿವುಡ್ ನಟ ರಾಜ್‌ಕುಮಾರ್ ರಾವ್ ಸಹೋದರ ಅಮಿತ್ ರಾವ್ ಜೊತೆ ನಟಿಸುತ್ತಿದ್ದಾರೆ. ಈ ಚಿತ್ರವನ್ನು ಸನೋಜ್ ಮಿಶ್ರಾ ನಿರ್ದೇಶಿಸುತ್ತಿದ್ದಾರೆ. ನಾಯಕಿಯಾಗಿ ಮೊನಾಲಿಸಾ ಭೋಸ್ಲೆ ಕಾಣಿಸಿಕೊಳ್ಳುತ್ತಿದ್ದಾರೆ. ಈ ಮೂಲಕ ವೈರಲ್ ವಿಡಿಯೋದಿಂದ ಏಕಾಏಕಿ ಬಾಲಿವುಡ್ ಆಫರ್ ಪಡೆದ ಖ್ಯಾತಿಗೂ ಪಾತ್ರರಾಗಿದ್ದಾಳೆ. ಮಾಧ್ಯಮ ವರದಿಗಳ ಪ್ರಕಾರ, ಮೋನಾಲಿಸಾ ಅವರಿಗೆ ಈ ಚಿತ್ರಕ್ಕೆ 21 ಲಕ್ಷ ರೂಪಾಯಿ ಸಂಭಾವನೆ ಸಿಕ್ಕಿದೆ ಎನ್ನಲಾಗುತ್ತಿದೆ. ಮಹಾಕುಂಭ ಮತ್ತು ಇತರ ಸ್ಥಳಗಳಲ್ಲಿ ರುದ್ರಾಕ್ಷ ಮಾಲೆ ಮಾರುತ್ತಿದ್ದ ಸರಳ ಹುಡುಗಿ ಈಗ ತನ್ನ ಮೊದಲ ಚಿತ್ರದ ಮೂಲಕ ಬಾಲಿವುಡ್‌ಗೆ ಭರ್ಜರಿ ಪ್ರವೇಶ ಮಾಡಲಿದ್ದಾರೆ. ಅಭಿಮಾನಿಗಳು ಅವರ ಚೊಚ್ಚಲ ಚಿತ್ರಕ್ಕಾಗಿ ಕಾತುರದಿಂದ ಕಾಯುತ್ತಿದ್ದಾರೆ.
ಮಹಾಕುಂಭ ಸೆನ್ಸೇಶನ್ ಮೊನಾಲಿಸಾ ಈಗ ಮಾಡೆಲ್, ಬದಲಾಗಿ ಹೋಯ್ತು ಬದುಕು!
ಸಾಮಾಜಿಕ ಮಾಧ್ಯಮಗಳಲ್ಲಿ ಸಂಚಲನ ಮೂಡಿಸಿರುವ ಮೋನಾಲಿಸಾ ಅವರನ್ನು ದೊಡ್ಡ ಪರದೆಯ ಮೇಲೆ ನೋಡಲು ಅಭಿಮಾನಿಗಳು ಕಾತುರರಾಗಿದ್ದಾರೆ. ನಿರ್ದೇಶಕ ಸನೋಜ್ ಮಿಶ್ರಾ ಅವರು ಮೋನಾಲಿಸಾ ಅವರ ಹಳ್ಳಿಗೆ ಹೋಗಿ ತಮ್ಮ ಚಿತ್ರ 'ಡೈರಿ ಆಫ್ ಮಣಿಪುರ'ಕ್ಕೆ ಆಯ್ಕೆ ಮಾಡಿದ್ದಾರೆ. ಈ ಚಿತ್ರದಲ್ಲಿ ಮೋನಾಲಿಸಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರೀಕರಣಕ್ಕೂ ಮುನ್ನ ಅವರಿಗೆ ಮುಂಬೈನಲ್ಲಿ ವಿಶೇಷ ತರಬೇತಿ ನೀಡಲಾಗುವುದು. ಈ ಚಿತ್ರಕ್ಕಾಗಿ ತಾನು ಶ್ರಮಿಸುವುದಾಗಿ ಮೋನಾಲಿಸಾ ಒಂದು ವಿಡಿಯೋದಲ್ಲಿ ಹೇಳಿದ್ದರು.
ಮಹಾಕುಂಭ ಮೇಳದಲ್ಲಿ ನಷ್ಟ ಮಾಡಿಕೊಂಡಿದ್ದ ಮೊನಾಲಿಸಾ ಇದೀಗ ಅಸಲು ಬಡ್ಡಿ ಸಮೇತ ಸಿನಿಮಾ ಸಂಭಾವನೆ ಮೂಲಕ ಪಡೆದಿದ್ದಾರೆ. ಮೋನಾಲಿಸಾ ಪತ್ರಕರ್ತರ ಜೊತೆ ಮಾತನಾಡಿ, "ಮಹಾಕುಂಭದಲ್ಲಿ ಮಾಲೆ ಮಾರೋ ಬಿಸಿನೆಸ್ ಸರಿಯಾಗಿ ನಡೆಯಲಿಲ್ಲ. 35,000 ರೂಪಾಯಿ ಸಾಲ ಮಾಡಿ ಮನೆಗೆ ವಾಪಸ್ ಬರಬೇಕಾಯ್ತು" ಅಂತ ಹೇಳಿದ್ದರು. ಮಹಾಕುಂಭದಲ್ಲಿ ಮೀಡಿಯಾ ಮತ್ತು ಭಕ್ತರಿಂದ ತೊಂದರೆ ಆಗಿತ್ತು, ಅದಕ್ಕೆ ವಾಪಸ್ ಬರಬೇಕಾಯ್ತು ಎಂದಿದ್ದರು. ಮಾಧ್ಯಮದವರು ಮೋನಾಲಿಸಾರನ್ನು ಪದೇ ಪದೇ ಸಂಪರ್ಕಿಸಲು ಪ್ರಯತ್ನಿಸಿದಾಗ, ಅವರಿಂದ ತಪ್ಪಿಸಿಕೊಳ್ಳುತ್ತಿದ್ದರು. ಆದರೆ ನಿರಂತರ ತೊಂದರೆ ಮತ್ತು ಅನಾರೋಗ್ಯದಿಂದ ಮನೆಗೆ ವಾಪಸ್ ಬಂದೆ ಅಂತ ಹೇಳಿದ್ದರು.
ಮೋನಾಲಿಸಾಳ ತಂದೆ ಜೈಸಿಂಗ್ ಭೋಸ್ಲೆ ಈ ಕುರಿತು ಪ್ರತಿಕ್ರಿಯೆ ನೀಡಿದ್ದರು. ಪ್ರಯಾಗ್‌ರಾಜ್‌ನಲ್ಲಿ ಮೋನಾಲಿಸಾಗೆ ಪ್ರೀತಿ ಸಿಕ್ಕಿತು, ಆದರೆ ಕೆಲವು ತೊಂದರೆಗಳೂ ಇದ್ದವು. ಅಧಿಕಾರಿಗಳಿಂದ ಭದ್ರತೆ ಭರವಸೆ ಸಿಕ್ಕಿತ್ತು, ಆದರೂ ಅವಳ ಆರೋಗ್ಯ ಹದಗೆಟ್ಟಿತು. ಅವಳನ್ನು ಮನೆಗೆ ಕರೆದುಕೊಂಡು ಬರಬೇಕಾಯ್ತು. ಚಿಕಿತ್ಸೆ ಪಡೆದ ನಂತರ ಈಗ ಮೊನಾಲಿಸಾ ಆರೋಗ್ಯವಾಗಿದ್ದಾಳೆ ಎಂದಿದ್ದರು.
ಇದೀಗ ಮೊನಾಲಿಸಾ ಬಾಲಿವುಡ್ ನಟಿಯಾಗಿ ಭಡ್ತಿ ಪಡೆದಿದ್ದಾರೆ. ಅಪಾರ ಅಬಿಮಾನಿಗಳ ಬಳಗವನ್ನೇ ಹೊಂದಿರುವ ಮೊನಾಲಿಸಾ ನಟಿಯಾಗಿ ಅದೃಷ್ಠ ಪರೀಕ್ಷೆಗೆ ಇಳಿದಿದ್ದಾರೆ.
ಮಹಾಕುಂಭ ಮೇಳದಲ್ಲಿ ವೈರಲ್ ಆದ ಸುಂದರಿ ಮೊನಾಲಿಸಾ ಸದ್ಯದ ಪಾಡು ಯಾರಿಗೂ ಬೇಡ!