Asianet Suvarna News Asianet Suvarna News

ಮುಂದಿನ ಪೀಳಿಗೆಯ ಕುಲಗೆಡಿಸುವ ತಂತ್ರ,ಆದಿಪುರುಷ್ ಚಿತ್ರದ ಷಡ್ಯಂತ್ರ ಬಹಿರಂಗಪಡಿಸಿದ ಮಹಾಭಾರತ ನಟ!

ಸನಾತನ ಧರ್ಮದ ನಂಬಿಕೆ, ಶ್ರದ್ಧೆ, ಭಕ್ತಿಯ ಸ್ವರೂಪ ಬದಲಿಸಿ ಮುಂದಿನ ಜನಾಂಗವನ್ನೇ ಕುಲಗೆಡಿಸಲು ಮಾಡಿದ ಷಡ್ಯಂತ್ರದ ಭಾಗ ಇದು ಎಂದು ಆದಿಪುರುಷ್ ವಿರುದ್ಧ ಮಹಾರಾಭಾರತ ನಟ ತೀವ್ರ ಆಕ್ರೋಶವ್ಯಕ್ತಪಡಿಸಿದ್ದಾರೆ.

Mahabharat serial actor slams Adipurush Film corrupt future generation deep conspiracy behind it ckm
Author
First Published Jun 22, 2023, 8:37 PM IST

ಮುಂಬೈ(ಜೂ.22) ಆದಿಪುರುಷ್ ಚಿತ್ರ ದೇಶ ವಿದೇಶಗಳಲ್ಲಿ ಬಿಡುಗಡೆಯಾಗಿ ಭಾರಿ ಸದ್ದು ಮಾಡುತ್ತಿದೆ. ಪರ ವಿರೋಧಗಳು ಹೆಚ್ಚಾಗುತ್ತಿದೆ. ಚಿತ್ರ ಹಿಂದೂ ಧರ್ಮದ ನಂಬಿಕೆಗೆ ವಿರುದ್ಧವಾಗಿದೆ. ಶ್ರೀರಾಮ ಹಾಗೂ ಹನುಮಾನ್‌ಗೆ ಅಪಮಾನ ಮಾಡಲಾಗಿದೆ. ಸಂಭಾಷಣೆ ಕೀಳು ಮಟ್ಟದಲ್ಲಿದೆ ಸೇರಿದಂತೆ ಹಲವು ವಿರೋಧಗಳು ಈ ಚಿತ್ರದಲ್ಲಿದೆ. ಇದರ ಬೆನ್ನಲ್ಲೇ  ದೂರದರ್ಶನದ ರಾಮಾಯಣ ದಾರವಾಹಿಯಲ್ಲಿ ನಟಿಸಿದ ನಟರು ಈಗಾಗಲೇ ಕಿಡಿ ಕಾರಿದ್ದಾರೆ. ಇದೀಗ ಮಹಾಭಾರತ ನಟ ಗಜೇಂದ್ರ ಚೌಹ್ಹಾಣ್ ಆದಿಪುರುಷ್ ಚಿತ್ರದ ವಿರುದ್ದ ಆಕ್ರೋಶ ಹೊರಹಾಕಿದ್ದಾರೆ. ಈ ಚಿತ್ರದ ಮೂಲಕ ಹಿಂದೂ ಧರ್ಮದ ಸ್ವರೂಪ ಬದಲಿಸಿ ಮುಂದಿನ ಪೀಳಿಗೆಯ ತಲೆಯಲ್ಲಿ ತುರುಕವ ಕೆಲಸ ಎಂದು ಗಜೇಂದ್ರ ಚೌವ್ಹಾಣ್ ಹೇಳಿದ್ದಾರೆ.

ಮುಂದಿನ ಜನಾಂಗ ಸನಾತನ ಧರ್ಮದವನ್ನು ಕೀಳು ಮಟ್ಟದಲ್ಲಿ ನೋಡುವ ರೀತಿ ಈ ಚಿತ್ರ ನಿರ್ಮಾಣ ಮಾಡಲಾಗಿದೆ. ಕಾಲ್ಪನಿಕ ಕತೆಗಳ ಚಿತ್ರಿಸಲಾಗಿದೆ. ಈ ಚಿತ್ರದ ಹಿಂದೆ ಬಹುದೊಡ್ಡ ಷಡ್ಯಂತ್ರವಿದೆ ಎಂದು ಗಜೇಂದ್ರ ಚವ್ಹಾಣ್ ಹೇಳಿದ್ದಾರೆ. ಈ ರೀತಿಯ ಚಿತ್ರ ಹಿಂದೂ ಧರ್ಮದ ಭಕ್ತಿ, ನಂಬಿಕೆಯನ್ನೇ ಘಾಸಿಗೊಳಿಸುತ್ತದೆ. ಹೀಗಾಗಿ ಆದಿಪುರುಷ್ ಚಿತ್ರವನ್ನು ನಿಷೇಧಿಸಬೇಕು ಎಂದು ಚವ್ಹಾಣ್ ಆಗ್ರಹಿಸಿದ್ದಾರೆ.

ಆದಿಪುರುಷ್‌ ವಿವಾದದ ಬೆನ್ನಲ್ಲೇ ಪ್ರತ್ಯಕ್ಷಳಾದ ರಾಮಾಯಣದ ಸೀತೆ! ನಟಿ ಹೇಳಿದ್ದೇನು?

ಚಿತ್ರದ ಸಂಭಾಷಣೆ ಬದಲಿಸಿದ ತಕ್ಷಣ ಆಗಿರುವ ಗಾಯವನ್ನು ಸರಿಪಡಿಸಲು ಸಾಧ್ಯವಿಲ್ಲ. ರಾಮ ಸೀತೆ ವಿಡಿಯೋ ಗೇಮ್ ಕತೆಗಳಲ್ಲ. ಈ ಚಿತ್ರ ಹಿಂದೂಗಳ ಭಕ್ತಿಯನ್ನೇ ಪ್ರಶ್ನಿಸುವಂತಿದೆ. ಈ ಚಿತ್ರ ನಿರ್ಮಿಸಿದವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು. ದೇಶಾದ್ಯಂತ ಚಿತ್ರ ನಿಷೇಧಿಸಬೇಕು.ಈ ಚಿತ್ರದ ಮೂಲಕ ಭಾರತದ ಪುರಾಣ, ಹಿಂದೂಗಳ ನಂಬಿಕೆಯನ್ನೇ ಬಡಮೇಲು ಮಾಡುವ ಕೆಲಸ ನಡೆಯುತ್ತಿದೆ ಎಂದು ಗಜೇಂದ್ರ ಚೌವ್ಹಾಣ್ ಹೇಳಿದ್ದಾರೆ.

ಚಿತ್ರದಲ್ಲಿ ಟಪೋರಿ ಭಾಷೆ ಬಳಸಲಾಗಿದೆ. ಸಜ್ಜನಿಕೆ ಮತ್ತು ಗಂಭೀರತೆ ಪ್ರತೀಕವಾದ ಶ್ರೀರಾಮ ಮತ್ತು ಹನುಮಂತನಿಗೆ ಚಿತ್ರದಲ್ಲಿ ಅಗೌರವ ತೋರಿಸಲಾಗಿದೆ. ಚಿತ್ರದಲ್ಲಿ ಬೀದಿ ಬದಿಯ ಭಾಷೆ ಬಳಸಲಾಗಿದೆ. ಇಂಥ ಚಿತ್ರದ ಮೂಲಕ ರಾಮ, ಸೀತೆ, ಹನುಮಂತನಿಗೆ ಚಿತ್ರ ತಂಡ ಅವಮಾನ ಮಾಡಿದೆ. ಅವರು ದೇಶದ ಮತ್ತು ಭಕ್ತರ ಕ್ಷಮೆ ಕೇಳಬೇಕು ಅನ್ನೋ ಆಕ್ರೋಶ ಹೆಚ್ಚಾದ ಬೆನ್ನಲ್ಲೇ ಸಂಭಾಷಣೆ ಬದಲಿಸಲಾಗಿದೆ.

 

ಬಟ್ಟೆ ಬದಲಿಸಿದ ವಿಭೀಷಣನ ಪತ್ನಿ: ಆದಿಪುರುಷನೋ, ಕಾಮಸೂತ್ರವೋ ಇದು ಎಂದು ನೆಟ್ಟಿಗರು ಗರಂ!

ವಿವಾದದ ಬಳಿಕ ಈ ಹಿಂದೆ ಹೇಳಿದಂತೆ ರಾಮಾಯಣ ಕಥೆಯ ‘ಆದಿಪುರುಷ’ ಚಿತ್ರದ ವಿವಾದಾತ್ಮಕ ಸಂಭಾಷಣೆಗಳನ್ನು ಚಿತ್ರತಂಡ ಬದಲಾಯಿಸಿದೆ. ಲಂಕಾ ದಹನ ದೃಶ್ಯದ ವೇಳೆ ಹನುಮಂತನನ್ನು ಉದ್ದೇಶಿಸಿ ‘ಕಪ್ಡಾ ತೇರಾ ಬಾಪ್‌ ಕಾ, ಟೆಲ್‌ ತೆರಾ ಬಾಪ್‌ ಕಾ, ಆಗ್‌ ಭಿ ತೇರೆ ಬಾಪ್‌ ಕಿ ಔರ್‌ ಜಲೇಗಿ ಭೀ ತೆರೆ ಬಾಪ್‌ ಕಿ’ ಎಂದು ಬರೆದಿದ್ದ ಸಂಭಾಷಣೆಯಲ್ಲಿ ‘ಬಾಪ್‌’ (ಅಪ್ಪ) ಎಂಬ ಪದ ಇದ್ದ​ಲ್ಲೆಲ್ಲ ‘ಲಂಕಾ’ ಎಂಬ ಪದದೊಂದಿಗೆ ಬದಲಾಯಿಸಲಾಗಿದೆ. ಇದೀಗ ನೂತನ ಸಂಭಾಷನೆಯೊಂದಿಗೆ ಚಿತ್ರ ಪ್ರದರ್ಶನಗೊಳ್ಳುತ್ತದೆ.
 

Follow Us:
Download App:
  • android
  • ios