Asianet Suvarna News Asianet Suvarna News

ನಟಿ ಜಯಪ್ರದಾಗೆ ಮದ್ರಾಸ್​ ಹೈಕೋರ್ಟ್​ನಿಂದ ಬಿಗ್​ ಶಾಕ್​: ಜೈಲು ಶಿಕ್ಷೆ ರದ್ದತಿಗೆ ನಕಾರ

ಇಎಸ್‌ಐ ನಿಧಿ ಕುರಿತು ಪ್ರಕರಣದಲ್ಲಿ ಆರು ತಿಂಗಳು ಜೈಲು ಶಿಕ್ಷೆಗೆ ಗುರಿಯಾಗಿರುವ ನಟಿ, ರಾಜಕಾರಣಿ ಜಯಪ್ರದಾ ಅವರ ಶಿಕ್ಷೆಯನ್ನು ರದ್ದು ಮಾಡಲು ಮದ್ರಾಸ್​ ಹೈಕೋರ್ಟ್​ ತಿರಸ್ಕರಿಸಿದೆ. 
 

Madras HC refuses to suspend Actor Jayapradas sentence in ESIC case suc
Author
First Published Oct 21, 2023, 11:51 AM IST

ನಟಿ, ಮಾಜಿ ರಾಜ್ಯಸಭಾ ಸದಸ್ಯೆ ಜಯಪ್ರದಾಗೆ ಮದ್ರಾಸ್​ ಹೈಕೋರ್ಟ್​ ಶಾಕ್​ ನೀಡಿದೆ.  ಥಿಯೇಟರ್ ಕಾಂಪ್ಲೆಕ್ಸ್‌ನ ಕಾರ್ಮಿಕರಿಂದ ಹಣ ವಸೂಲಿ ಮಾಡಿದರೂ ನೌಕರರ ರಾಜ್ಯ ವಿಮೆ (ಇಎಸ್‌ಐ) ನಿಧಿಯ ಪಾಲನ್ನು ಪಾವತಿಸದ ನಟಿಗೆ ಈ ಹಿಂದೆ ನೀಡಲಾಗಿದ್ದ ಆರು ತಿಂಗಳ ಶಿಕ್ಷೆಯನ್ನು ರದ್ದುಗೊಳಿಸುವ ಮದ್ರಾನ್​ ಹೈಕೋರ್ಟ್​ ನಿರಾಕರಿಸಿದ್ದು, ಈ ಹಿನ್ನೆಲೆಯಲ್ಲಿ ನಟಿಗೆ ಸಂಕಷ್ಟ ಎದುರಾಗಿದೆ. ಚೆನ್ನೈನ ಜನರಲ್ ಪ್ಯಾಟರ್ಸ್ ರಸ್ತೆಯಲ್ಲಿ ಜಯಪ್ರದಾ ತಮ್ಮದೇ ಹೆಸರಿನ ಚಿತ್ರಮಂದಿರವನ್ನು ಹೊಂದಿದ್ದರು. ಇದನ್ನು ಚೆನ್ನೈಗೆ ಸೇರಿದ ರಾಮ್ ಕುಮಾರ್ ಮತ್ತು ರಾಜಾ ಬಾಬು ನಡೆಸುತ್ತಿದ್ದರು. ಆ ಚಿತ್ರಮಂದಿರ ಕಾಲಾಂತರದಲ್ಲಿ ಬಾಗಿಲು ಹಾಕಿತು. ಆದರೆ ಚಿತ್ರಮಂದಿರದಲ್ಲಿ ಕೆಲಸ ಮಾಡುತ್ತಿದ್ದ ನೌಕರರ ಇಎಸ್​ಐ ಅನ್ನು ನಿಯಮದಂತೆ ವರ್ಗಾವಣೆ ಮಾಡಿರಲಿಲ್ಲ. ರಂಗಭೂಮಿ ನೌಕರರ ಇಎಸ್‌ಐ ಪಾವತಿಸಲು ಆಡಳಿತ ಮಂಡಳಿ ವಿಫಲವಾಗಿದ್ದರಿಂದ ಸಮಸ್ಯೆ ಆರಂಭವಾಗಿದ್ದು, ನ್ಯಾಯಾಲಯದ ಮೆಟ್ಟಿಲೇರಿದ್ದರು.  ಅದರನ್ವಯ ಎಂಪ್ಲಾಯಿಸ್ ಸ್ಟೇಟ್ ಇನ್ಶುರೆನ್ಸ್ ಕಾರ್ಪೊರೇಷನ್ ಸಂಸ್ಥೆಯು, ಜಯಪ್ರದಾ ಹಾಗೂ ಅವರ ಪಾಲುದಾರರಾಗಿದ್ದ ರಾಮ್ ಕುಮಾರ್ ಹಾಗೂ ರಾಜಾ ಬಾಬು ವಿರುದ್ಧ ಪ್ರಕರಣ ಹೂಡಿತ್ತು.
 
ಕೆಳ ಹಂತದ ನ್ಯಾಯಾಲಯದಲ್ಲಿ ಜಯಪ್ರದಾ ತಮ್ಮ ಮೇಲಿನ ಆರೋಪವನ್ನು ಒಪ್ಪಿಕೊಂಡಿದ್ದರಲ್ಲದೆ, ನೌಕರರಿಗೆ ಸೇರಬೇಕಾದ ಹಣವನ್ನು ಪಾವತಿ ಮಾಡುವುದಾಗಿ ಹೇಳಿದ್ದರು. ಅದಕ್ಕೆ ಬದಲಾಗಿ ಪ್ರಕರಣವನ್ನು ಕೈಬಿಡುವಂತೆ   ಮನವಿ ಮಾಡಿದ್ದರು. ಆದರೆ ಕೋರ್ಟ್​ ನಟಿಯ ಮನವಿಯನ್ನು ಪುರಸ್ಕರಿಸಿರಲಿಲ್ಲ.  ಜಯಪ್ರದಾ ಹಾಗೂ ಅವರ ಸಹವರ್ತಿಗಳಿಗೆ ಆರು ತಿಂಗಳ ಜೈಲು ಹಾಗೂ 5 ಸಾವಿರ ರೂಪಾಯಿ ದಂಡ  ವಿಧಿಸಿ ಆಗಸ್ಟ್ 10ರಂದು ಆದೇಶ ಹೊರಡಿಸಿತ್ತು. ಜೈಲು ಶಿಕ್ಷೆ ರದ್ದಿಗೆ ಕೋರಿ ಜಯಪ್ರದಾ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ್ದರು, ಇದೀಗ ಅಲ್ಲಿಯೂ ಜಯಪ್ರದಾಗೆ ಹಿನ್ನಡೆ ಆಗಿದೆ.

ರಾಜಕೀಯಕ್ಕೆ ನಟಿ ಶ್ರುತಿ ಹಾಸನ್‌ ಎಂಟ್ರಿ? ಅಪ್ಪ ಕಮಲ್‌ರ ಹಾದಿ ಹಿಡಿದ್ರಾ ಬಾಲಿವುಡ್‌ ತಾರೆ?

 ಹೈಕೋರ್ಟ್ ನ್ಯಾಯಮೂರ್ತಿ ಜಿ.ಜಯಚಂದ್ರನ್ ಅವರು 15 ದಿನಗಳೊಳಗೆ ಎಗ್ಮೋರ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಶರಣಾಗುವಂತೆ ನಟಿಗೆ ಸೂಚಿಸಿದರು. ನ್ಯಾಯಾಲಯದ ಆದೇಶಗಳನ್ನು ಪಾಲಿಸಿದರೆ ಜಯಪ್ರದಾ ಅವರಿಗೆ ಜಾಮೀನು ನೀಡುವಂತೆ ನ್ಯಾಯಾಧೀಶರು ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ನಿರ್ದೇಶಿಸಿದ್ದಾರೆ.  ಮತ್ತು ಅಲ್ಲದೆ ಮುಂದಿನ 15 ದಿನದ ಒಳಗೆ ಖುದ್ದಾಗಿ ನ್ಯಾಯಾಲಯದ ಮುಂದೆ ಹಾಜರಾಗಿ ಜಾಮೀನಿಗಾಗಿ 20 ಲಕ್ಷ ರೂಪಾಯಿ ಬಾಂಡ್‌ಅನ್ನು ಪಾವತಿಸುವಂತೆ ಸೂಚಿಸಿದೆ.

ಇನ್ನು ಜಯಪ್ರದಾ ಅವರು ರಾಜಕೀಯ ವಿಷಯಕ್ಕೆ ಬರುವುದಾದರೆ, ಆಂತರಿಕ ಭಿನ್ನಾಭಿಪ್ರಾಯದಿಂದಾಗಿ ಅವರು TDP ತೊರೆದು SP ಸೇರಿದರು. ಅವರು 2004 ರಿಂದ 2014 ರವರೆಗೆ ಉತ್ತರ ಪ್ರದೇಶದ ರಾಮ್‌ಪುರ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾದರು. ಅಂತಿಮವಾಗಿ, ಜಯಪ್ರದಾ 2019 ರಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಸೇರಿದರು.

ಶಿಲ್ಪಾ ಶೆಟ್ಟಿ ಪತಿ ಸಪರೇಟ್‌ ಆಗಿದ್ದು ಯಾಕೆ? ವಿಡಿಯೋ ಮೂಲಕ ಮೌನ ಮುರಿದ ರಾಜ್‌ ಕುಂದ್ರಾ!
 

Follow Us:
Download App:
  • android
  • ios