Asianet Suvarna News Asianet Suvarna News

ರಾಜಕೀಯಕ್ಕೆ ನಟಿ ಶ್ರುತಿ ಹಾಸನ್‌ ಎಂಟ್ರಿ? ಅಪ್ಪ ಕಮಲ್‌ರ ಹಾದಿ ಹಿಡಿದ್ರಾ ಬಾಲಿವುಡ್‌ ತಾರೆ?

ನಟಿ ಶ್ರುತಿ ಹಾಸನ್‌ ಅವರು ರಾಜಕೀಯಕ್ಕೆ ಇಳಿಯಲಿದ್ದಾರಾ? ಹೀಗೊಂದು ಸುದ್ದಿ ಬಹಳ ವೈರಲ್‌ ಆಗುತ್ತಿದೆ. ಹಾಗಿದ್ದರೆ ಯಾವ ಪಕ್ಷ ಸೇರಲಿದ್ದಾರೆ? 
 

Is actress Shruti Haasan going to join politics If so which party will you join suc
Author
First Published Oct 20, 2023, 9:08 PM IST

 ಖ್ಯಾತ ನಟ ಕಮಲ್ ಹಾಸನ್ (Kamal Haasan) ಪುತ್ರಿ ಶ್ರುತಿ ಹಾಸನ್ ಸದ್ಯ ಬಾಲಿವುಡ್‌ನಲ್ಲಿ ಬಿಜಿಯಾಗಿದ್ದಾರೆ.   'ವಾಲ್ಟೇರ್ ವೆರಯ್ಯ' ಚಿತ್ರದಲ್ಲಿ ಕಾಣಿಸಿಕೊಂಡಿರೋ ನಟಿ, ಶೀಘ್ರದಲ್ಲೇ ಪ್ರಶಾಂತ್ ನೀಲ್ ನಿರ್ದೇಶನದ 'ಬಾಹುಬಲಿ' ಅಭಿನಯದ ಪ್ರಭಾಸ್ ಅವರೊಂದಿಗೆ ಬಹುನಿರೀಕ್ಷಿತ ಚಿತ್ರ 'ಸಲಾರ್' ನಲ್ಲಿ ಕಾಣಿಸಿಕೊಂಡಿದ್ದು ಬರುವ ಡಿಸೆಂಬರ್‌ನಲ್ಲಿ ಇದು ಬಿಡುಗಡೆಯಾಗಲಿದೆ. ಮಾತ್ರಲ್ಲದೇ,  ಇವರ ಕೈಯಲ್ಲಿ  ಇನ್ನೂ ಅನೇಕ ಯೋಜನೆಗಳು ಇವೆ.  ಇದಲ್ಲದೆ, ಶ್ರುತಿ (Shruti Haasan) ತಮ್ಮ ವೃತ್ತಿಪರ ಜೀವನ ಮತ್ತು ಅವರ ವೈಯಕ್ತಿಕ ಜೀವನಕ್ಕಾಗಿ ಮುಖ್ಯಾಂಶಗಳಲ್ಲಿ ಉಳಿದಿದ್ದಾರೆ. ಇದಲ್ಲದೆ, ನಟಿ ತನ್ನ ಗೆಳೆಯ ಶಂತನು ಬಗ್ಗೆಯೂ ಸಾಕಷ್ಟು ಸುದ್ದಿಗಳನ್ನು ಮಾಡುತ್ತಿದ್ದಾರೆ. ಇದರ ನಡುವೆಯೇ ನಟಿಯ ಬಗ್ಗೆ ಹೊಸದೊಂದು ಗುಸುಗುಸು ಶುರುವಾಗಿದೆ. ಅದೇನೆಂದರೆ ಈಕೆ ರಾಜಕೀಯಕ್ಕೆ ಎಂಟ್ರಿ ಕೊಡಲಿದ್ದಾರೆ ಎನ್ನುವ ಸುದ್ದಿ!

ಅಷ್ಟಕ್ಕೂ ಇವರ ತಂದೆ ಕಮಲ್‌ ಹಾಸನ್‌ ಖ್ಯಾತ ಚಿತ್ರನಟ ಮಾತ್ರವಲ್ಲದೇ ರಾಜಕಾರಣಿ ಕೂಡ ಹೌದು ಎನ್ನುವುದು ಎಲ್ಲರಿಗೂ ತಿಳಿದಿರುವ ವಿಷಯ. ಕಮಲ್ ಹಾಸನ್ ಅವರು ಸ್ವಂತ ಪಕ್ಷವಾಗಿರುವ  ‘ಮಕ್ಕಳ್ ನಿಧಿ ಮೈಯಂ’ (MNM) ಕಟ್ಟಿದ್ದಾರೆ. ಈ ಪಕ್ಷವನ್ನೇ ಶ್ರುತಿ ಹಾಸನ್ ಸೇರಿಕೊಂಡು ಈ ಮೂಲಕ ಅಪ್ಪನ ಜೊತೆ ನಿಲ್ಲಲಿದ್ದಾರೆ ಎನ್ನಲಾಗಿದೆ. ಈ ವಿಚಾರವಾಗಿ ಶ್ರುತಿಗೆ ಪದೇ ಪದೇ ಪ್ರಶ್ನೆಗಳು ಕೇಳಿ ಬರುತ್ತಿವೆ. ಈಗಾಗಲೇ ಶ್ರುತಿ ಸ್ಪಷ್ಟ ಉತ್ತರ ನೀಡುತ್ತಿದ್ದಾರೆ. ಇತ್ತೀಚೆಗಷ್ಟೇ ಕೊಯಮತ್ತೂರಿನಲ್ಲಿ ಮಾಧ್ಯಮಗಳೊಂದಿಗೆ ಸಂವಾದ ನಡೆಸುತ್ತಿದ್ದ ವೇಳೆ ಶ್ರುತಿ ಹಾಸನ್ ಅವರಿಗೆ ಇದೇ ಪ್ರಶ್ನೆ ಎದುರಾಗಿದೆ. ಸದ್ಯ ರಾಜಕೀಯ ಸೇರುವ ಆಸಕ್ತಿ ಇಲ್ಲ ಎಂದರು.  ತನ್ನ ಆದ್ಯತೆ ಯಾವಾಗಲೂ ಸಿನಿಮಾ ಎಂದು ಅವರು ಸ್ಪಷ್ಟಪಡಿಸಿದರು. ತಾನು ಮಾಡಲಿರುವ ಚಿತ್ರಗಳು ಚಿಕ್ಕದಿರಲಿ, ದೊಡ್ಡದಿರಲಿ ಕಥೆ ಮತ್ತು ಪಾತ್ರಕ್ಕೆ ಮಾತ್ರ ಪ್ರಾಮುಖ್ಯತೆ ನೀಡುತ್ತೇನೆ ಎಂದಿದ್ದಾರೆ. 

ಕನ್ನಡದಲ್ಲಿ ನಟಿಸಿರೋ ನಟಿಗೆ ಹಿಂದಿ ಬಿಗ್‌ಬಾಸ್‌ನಲ್ಲಿ ಈ ಪರಿ ದುಡ್ಡಾ? ಹೆಚ್ಚು ಸಂಭಾವನೆ ಪಡೆಯೋದು ಇವ್ರೇ...

ಆದರೆ ನಟಿ ಏನೇ ಹೇಳುತ್ತಿದ್ದರೂ, ಅವರು ರಾಜಕೀಯಕ್ಕೆ ಬರುವುದು ಪಕ್ಕಾ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಲೋಕಸಭೆ  ಚುನಾವಣೆಗೆ ಇನ್ನೂ ಆರೇಳು ತಿಂಗಳು ಬಾಕಿ ಇದ್ದು, ಇದಾಗಲೇ  ಕಮಲ್ ಹಾಸನ್ ಅವರು  ಚುನಾವಣೆ ಸಿದ್ಧತೆಯಲ್ಲಿದ್ದಾರೆ.  ಈ ಬಾರಿ ಅವರು ಕೊಯಮತ್ತೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದು, ಅದಕ್ಕೆ ಬೇಕಾದ ತಯಾರಿಯನ್ನು ಈಗಿನಿಂದಲೂ ಆರಂಭಿಸಿದ್ದಾರೆ ಎನ್ನಲಾಗಿದ್ದು, ಮಗಳು ಶ್ರುತಿ ಕೂಡ ಅಪ್ಪನ ಹಾದಿ ತುಳಿಯಲಿದ್ದಾರೆ ಎನ್ನಲಾಗುತ್ತಿದೆ. ಅಂದಹಾಗೆ ಈ ಮೊದಲು ನಡೆದ ವಿಧಾನಸಭೆ ಚುನಾವಣೆಯಲ್ಲಿ ಕಮಲ್ ಹಾಸನ್ ಕೊಯಮತ್ತೂರು  ದಕ್ಷಿಣ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದರು. ಇದೇ ಕಾರಣಕ್ಕೆ ಅಪ್ಪನಿಗೆ ಮಗಳು ಸಾಥ್‌ ನೀಡುತ್ತಿದ್ದಾರೆ ಎನ್ನಲಾಗುತ್ತಿದೆ.
 
ಇದಾಗಲೇ ಕಮಲ್‌ ಹಾಸನ್‌ ಭರ್ಜರಿ ತಯಾರಿ ನಡೆಸುತ್ತಿದ್ದಾರೆ. ಒಂದೆಡೆ ಸಿನಿಮಾ, ಇನ್ನೊಂದೆಡೆ ರಾಜಕೀಯ ಎರಡನ್ನೂ ಬ್ಯಾಲೆನ್ಸ್‌ ಮಾಡುತಿದ್ದಾರೆ ಎನ್ನುವ ಮಾತಿದೆ. ಇದರ ನಡುವೆ ಈಗ ಮಗಳು ಶ್ರುತಿ ಹಾಸನ್‌ ಕೂಡ ಸಿನಿಮಾ ಜೊತೆ ರಾಜಕಾರಣಕ್ಕೆ ಇಳಿದು ಅಪ್ಪನಿಗೆ ನೆರವಾಗುತ್ತಾರಾ ಕಾದು ನೋಡಬೇಕಿದೆ.

UT 69: ಜೈಲಲ್ಲಿ ರಾಜ್​​ಕುಂದ್ರಾ- ಪೊಲೀಸ್ರು ನಗ್ನಗೊಳಿಸಿದ್ರು, ಕೈದಿಗಳು ಛೀಮಾರಿ ಹಾಕಿದ್ರು! ವಿಡಿಯೋ ರಿಲೀಸ್​
 

Follow Us:
Download App:
  • android
  • ios