ಕಳೆದ ವರ್ಷದಿಂದ ತಮ್ಮ ರಜೆಗೆ ಮಾಲ್ಡೀವ್ಸ್ ಆಯ್ಕೆ ಮಾಡೋರ ಸಾಲಿಗೆ ಮಾಧುರಿ ದೀಕ್ಷಿತ್ ಸೇರಿದ್ದಾರೆ. ನಟಿ ಬೀಚ್ ಲೊಕೇಷನ್‌ನಿಂದ ತನ್ನ ಅದ್ಭುತ ಫೋಟೋ ತಮ್ಮ ಇನ್ಸ್ಟಾಗ್ರಾಮ್ ಫೀಡ್ ಅನ್ನು ನವೀಕರಿಸಿದ್ದಾರೆ.

ಸುಮಾರು 6-7 ವರ್ಷಗಳ ಹಿಂದೆ ಮಾಲ್ಡೀವ್ಸ್‌ಗೆ ಪ್ರವಾಸ ಮಾಡಿದ್ದ ಮಾಧುರಿ ಫೋಟೋದಲ್ಲಿ ಪ್ರಿಂಟೆಡ್ ಟಾಪ್ ಮತ್ತು ನೀಲಿ ಶಾರ್ಟ್ಸ್‌ನಲ್ಲಿ ಸುಂದರವಾಗಿ ಕಾಣಿಸುತ್ತಾರೆ. ಬಿಸಿಲಿನಿಂದ ತಪ್ಪಿಸೊಳ್ಳೋಕೆ ಕ್ಯಾಪ್ ಕೂಡಾ ಧರಿಸಿದ್ದರು ನಟಿ.

ಸೊಂಪುಗೂದಲಿನ ಸೀಕ್ರೆಟ್ ಹೇಳಿದ ನಟಿ ಮಾಧುರಿ ದೀಕ್ಷಿತ್

ಬ್ಯಾಕ್ರೌಂಡ್ ನೀಲ ನೀರು, ನೀಲಾಕಾಶದಿಂದ ತುಂಬಿದ್ದು, "ಸ್ವರ್ಗದಿಂದ ಹಲೋ ಎಂದು ಕ್ಯಾಪ್ಶನ್ ಕೊಟ್ಟು ಫೋಟೋ ಶೇರ್ ಮಾಡಿದ್ದಾರೆ ನಟಿ. ಮಾಧುರಿ ದೀಕ್ಷಿತ್ ಅವರು ವೈದ್ಯ ಶ್ರೀರಾಮ್ ನೆನೆ ಅವರನ್ನು ವಿವಾಹವಾದರು. ಇವರಿಗೆ ಅರಿನ್ ಮತ್ತು ರಯಾನ್ ಎಂಬ ಇಬ್ಬರು ಮಕ್ಕಳಿದ್ದಾರೆ.

ಆರಿನ್ ಅವರ 18 ನೇ ಹುಟ್ಟುಹಬ್ಬದಂದು, ನಟಿ ಅವರೊಂದಿಗೆ ಮಿಲಿಯನ್ ಡಾಲರ್ ಥ್ರೋಬ್ಯಾಕ್ ಚಿತ್ರಗಳನ್ನು ಹಂಚಿಕೊಂಡಿದ್ದಾರೆ ಮತ್ತು ಹೀಗೆ ಬರೆದಿದ್ದಾರೆ: "ನನ್ನ ಮಗು ಅಧಿಕೃತವಾಗಿ ವಯಸ್ಕ. 18 ನೇ ಹುಟ್ಟುಹಬ್ಬದ ಶುಭಾಶಯಗಳು, ಅರಿನ್. ಸ್ವಾತಂತ್ರ್ಯದೊಂದಿಗೆ ಜವಾಬ್ದಾರಿಗಳು ಬರುತ್ತದೆ ಎಂಬುದನ್ನು ನೆನಪಿಡು. ಇಂದಿನಿಂದ ಜಗತ್ತು ನಿನ್ನದು ಎಂದಿದ್ದಾರೆ.