Asianet Suvarna News Asianet Suvarna News

ಯಾರಿಗೂ ತಲೆನೋವು ಆಗ್ಬೇಡಿ, ಅನಾಸಿನ್ ಆಗಿರಿ, ಜಗಳವಾಡಬೇಡಿ, ಜಗತ್ತನ್ನೇ ಪ್ರೀತಿಸಿ; ಕತ್ರಿನಾ ಕೈಫ್

ಪ್ರತಿಯೊಬ್ಬರೂ ಲವ್ ಮಾಡುತ್ತಲೇ ಹೋದರೆ ಜಗತ್ತಿನ ತುಂಬ ಪ್ರೀತಿಯೇ ತುಂಬಿರುತ್ತದೆ. ನಾನು ಹೇಳಿದ್ದು ಜನರಲ್ ಲವ್, ರೊಮಾನ್ಸ್ ಅಲ್ಲ. ಎಲ್ಲರಲ್ಲೂ ಇರುವ ದೈವತ್ವವನ್ನು ಗೌರವಿಸಿ, ನಿಮ್ಮಂತೆ ಅವರೂ ಸಹ ಎಂಬ ಭಾವ ಹೃದಯದಲ್ಲಿರಲಿ. 

Love everyone and spread love for the whole universe says actress Katrina Kaif srb
Author
First Published Jan 29, 2024, 8:34 PM IST

'ಎಲ್ಲರನ್ನೂ ಪ್ರೀತಿಸಿ. ಯಾರೋ ಒಬ್ಬರು ನಿಮ್ಮನ್ನು ಪ್ರೀತಿಸುವುದಿಲ್ಲ ಎಂದು ಹೇಳಿದರೂ ಚಿಂತೆಯಿಲ್ಲ, ಅವರನ್ನು ನೀವು ಪ್ರೀತಿಸುವುದನ್ನು ನಿಲ್ಲಿಸಬೇಡಿ. ಪ್ರೀತಿಯೆಂಬುದು ಹರಿಯುವ ನದಿನೀರಿನಂತೆ ನರಂತರವಾಗಿ ನಿಮ್ಮ ಕಡೆಯಿಂದ ಹರಿಯುತ್ತಲೇ ಇರಲಿ. ಅದು ಸೇರಬೇಕಾದ ಜಾಗ ಸಾಗರವನ್ನು ಸೇರಲೇಬೇಕು, ಸೇರುತ್ತದೆ. ನಿಮ್ಮನ್ನು ನಿಂದಿಸಿದವರನ್ನು, ನಿಮ್ಮ ಕಾಲೆಳೆದವರನ್ನು ಯಾರನ್ನೇ ಆಗಲಿ, ದ್ವೇಷಿಸಬೇಡಿ. ಅವರಿಗೂ ನಿಮಗೂ ವ್ಯತ್ಯಾಸ ಇರಲಿ. 

ಆದರೆ, ಪ್ರತಿಯಬ್ಬ ವ್ಯಕ್ತಿಯ ಸ್ವಾತಂತ್ರ ಹಾಗೂ ಆತ್ಮಾಭಿಮಾನವನ್ನು ಗೌರವಿಸಿ. ಎಂಧ ಚಾಲೆಂಜಿಂಗ್ ಸಮಯದಲ್ಲೂ ಯಾರ ಪಾಲಿಗೂ ತಲೆನೋವಾಗಬೇಡಿ, ಸಾಧ್ಯವಾದರೆ ಅನಾಸಿನ್ ಆಗಬಯಸಿ. ಅನಾಸಿನ್ (Anacin) ಆಗಬಯಸುವುದು ಎಂದರೆ ನಾನು ಹೇಳಿದ್ದು ಬೇರೆಯವರಿಗೆ ತಲೆನೋವು (Headache) ಬರಲಿ ಎಂದು ಆಶಿಸಿ ಅಂತಲ್ಲ, ಬದಲಿಗೆ ಯಾರಿಗೂ ತಲೆನೋವಿದ್ದರೆ ಅದರ ಪರಿಹಾರಕ್ಕೆ ಪ್ರಯತ್ನಿಸಿ ಎಂಬರ್ಥದಲ್ಲಿ ನಾನು ಹೇಳಿದ್ದು. ನಿಜವಾದ ಸಮಸ್ಯೆಗಳ ಬಗ್ಗೆ ಮೊದಲು ಅರಿವು ಮೂಡಿಸಿಕೊಳ್ಳಿ, ಬಳಿಕ ಅದರ ಪರಿಹಾರಕ್ಕೆ ಅರಿವಿನಿಂದಲೇ ಪ್ರಯತ್ನಿಸಿ, ಆ ಸಮಸ್ಯೆ ನಿಮ್ಮದಾಗಿರಲಿ ಅಥವಾ ಬೇರೆಯವರದೇ ಆಗಿರಲಿ.

ಅಪ್ಪನ ಮಾತು ಕೇಳ್ದೇ ಹದಿನೈದು ವರ್ಷ ನರಕ ಅನುಭವಿಸಿದೆ; ಸಿಂಧು ಮದ್ವೆಯಾಗಿದ್ದ ರಘುವೀರ್ ಸತ್ತೇ ಹೋಗ್ಬಿಟ್ರು!

ಪ್ರತಿಯೊಬ್ಬರೂ ಲವ್ ಮಾಡುತ್ತಲೇ ಹೋದರೆ ಜಗತ್ತಿನ ತುಂಬ ಪ್ರೀತಿಯೇ ತುಂಬಿರುತ್ತದೆ. ನಾನು ಹೇಳಿದ್ದು ಜನರಲ್ ಲವ್, ರೊಮಾನ್ಸ್ ಅಲ್ಲ. ಎಲ್ಲರಲ್ಲೂ ಇರುವ ದೈವತ್ವವನ್ನು ಗೌರವಿಸಿ, ನಿಮ್ಮಂತೆ ಅವರೂ ಸಹ ಎಂಬ ಭಾವ ಹೃದಯದಲ್ಲಿರಲಿ. ಜಗತ್ತಿನ ತುಂಬಾ ಪ್ರೀತಿ, ದಯೆ ಹಾಗು ಕರುಣೆ ತುಂಬಿಕೊಂಡಿರಲಿ ಎಂದು ಸದಾ ಪ್ರಾರ್ಥಿಸಿ, ಅದರಲ್ಲಿ ನಿಮ್ಮದೂ ನನ್ನದೂ ಪಾತ್ರವಿರಲಿ' ಎಂದಿದ್ದಾರೆ ಬಾಲಿವುಡ್ ನಟಿ ಕತ್ರಿನಾ ಕೈಫ್ (Katrina Kaif). 

40 ವರ್ಷ ಆದ್ರೂ ಫಿಗರ್-ಗಿಗರ್ ಮೆಂಟೇನ್ ಮಾಡ್ಕೊಂಡು..,ಯಾರ ಬಗ್ಗೆ ಹೀಗಂದ್ರು ಅದಿತಿ ಪ್ರಭುದೇವ..!?

ಸಂದರ್ಶನವೊಂದರಲ್ಲಿ ಮಾತನಾಡುತ್ತಿದ್ದ ನಟಿ ಕತ್ರಿನಾ ಕೈಫ್ ಸಂದರ್ಶಕ (Interview) ಕೇಳಿದ ಪ್ರಶ್ನೆಗೆ ಉತ್ತರವಾಗಿ ಇಂಥ ಮಾತನ್ನು ಹೇಳಿದ್ದಾರೆ. ಹಾಗಿದ್ದರೆ ಪ್ರಶ್ನೆ ಏನಿತ್ತು ಎಂಬ ನಿಮ್ಮ ಕುತೂಹಲಕ್ಕೆ, ಉತ್ತರ, 'ನೀವು ಯಾವಾಗಲೂ ಖುಷಿಯಾಗಿ ಇರುವಂತೆ ಕಾಣಿಸುತ್ತೀರಿ, ಮುಖದಲ್ಲಿ ಸದಾ ಮುಗುಳ್ನಗು ತುಂಬಿಕೊಂಡಿರುವುದರ ಸೀಕ್ರೆಟ್ ಏನು' ಎಂದು ಕತ್ರಿನಾರಿಗೆ ಪ್ರಶ್ನೆ ಕೇಳಲಾಗಿತ್ತು. ಅದಕ್ಕೆ ಉತ್ತರವಾಗಿ ನಟಿ ಕತ್ರಿನಾ ಹೇಳಿದ ಮಾತುಗಳನ್ನು ಕೇಳಿ ಸ್ವತಃ ಸಂದರ್ಶಕ ಸೇರಿದಂತೆ ಹಲವರು ಫಿದಾ ಆಗಿ ಅವರಿಗೆ ಸೆಲ್ಯೂಟ್ ಎಂದಿದ್ದಾರೆ. 

ಆಗರ್ಭ ಶ್ರೀಮಂತೆ, ಐರ್ಲೆಂಡ್‌ನಲ್ಲಿ ಮಗ; ಮದ್ವೆಯಾದ್ರೂ ಒಂಟಿ ಬಾಳು, ಹೇಮಾ ಚೌಧರಿಗೆ ಇದೆಂಥ ಗೋಳು!

Follow Us:
Download App:
  • android
  • ios