ನೀವು ಇನ್‌ ಸ್ಟಾಗ್ರಾಂನಲ್ಲಿ ಸಕ್ರಿಯವಾಗಿದ್ದರೆ ಮುರಳಿಯ ಒಂದು ಪೋಸ್ಟ್ ನಿಮ್ ಕಣ್ಣಿಗೆ ಬಿದ್ದಿರುತ್ತೆ. ಮನೆಯಲ್ಲಿ ದೊಡ್ಡ ಪಾತ್ರೆ ಬೆಳಗ್ತಿರೋ ಫೋಟೋಗ್ರಾಫ್ ಅದು. ಅರೆರೇ, ನಮ್ ರೋರಿಂಗ್ ಸ್ಟಾರ್ ಗೆ ಇದೇನು ಗತಿ ಬಂತಪ್ಪಾ! ಅನ್ನೋ ಹಾಗಿಲ್ಲ. ಸ್ಕ್ರೀನ್ ಮೇಲೆ ವಿಲನ್ ಗಳ ಜೊತೆಗೆ ಫೖಟ್ ಮಾಡ್ತಾ ಅಬ್ಬರಿಸೋ ರೋರಿಂಗ್ ಸ್ಟಾರ್ ಮನೆಗೆ ಬಂದ್ರೆ ಕಂಪ್ಲೀಟ್ ಸೀನ್ ಚೇಂಜ್. ಪತ್ನಿ ವಿದ್ಯಾ ಇಲ್ಲಿ ರೋರಿಂಗ್ ಸ್ಥಾನದಲ್ಲಿರುತ್ತಾರೆ. ನಮ್ ಮುರಳಿ ಬ್ರದರು ವಿದೆಯ ಪತಿಯ ಫೋಸ್‌‌ನಲ್ಲಿರುತ್ತಾರೆ. 

ಹೇಳಿ ಕೇಳಿ ಈಗ ಲಾಕ್‌ಡೌನ್‌ ಟೖಮು. 

ಎಲ್ಲಾ ಸ್ಟಾರ್‌ಗಳೂ ಮನೆಯಲ್ಲಿ ಒಂದಿಲ್ಲೊಂದು ಕೆಲಸದಲ್ಲಿ ನಿರತರಾಗಿದ್ದಾರೆ. ಮೊನ್ನೆ ಮೊನ್ನೆ ಪುನೀತ್ ರಾಜ್ ಕುಮಾರ್ ಅವರು ಅಣ್ಣಾವ್ರ ಬರ್ತ್ ಡೇ ದಿನ ನೀಡಿದ ಒಂದು ಹೇಳಿಕೆ ವಿಶೇಷವಾಗಿ ಗಮನ ಸೆಳೆಯಿತು. ಅದು ಮತ್ತೇನಲ್ಲ, ಲಾಕ್ ಡೌನ್‌ ಟೌಮ್‌ನಲ್ಲಿ ತಾನು ಏನು ಮಾಡಿದೆ ಅನ್ನೋದು. ಒಂದಿಷ್ಟು ಸಿನಿಮಾ ನೋಡಿದೆ, ಅಪ್ಪಾಜಿ ಚಿತ್ರಗಳನ್ನು ಮತ್ತೊಮ್ಮೆ ವೀಕ್ಷಿಸಿದೆ. ಮನೆಯೆಲ್ಲ ಕ್ಲೀನ್ ಮಾಡಿದೆ ಅನ್ನುತ್ತಾ ಅಡುಗೆ ಮನೆ ಫಚೀತಿಗಳನ್ನೂ ಹಂಚಿಕೊಂಡರು. ಮೊದಲ ಕೆಲವು ದಿನ ಬಹಳ ಖುಷಿಯಲ್ಲೇ ಪನ್ನೀರ್ ಬುರ್ಜಿ, ಟೊಮೋಟೋ ಪಲ್ಯ, ಸ್ಪೆಷಲ್ ಆಲೂ ಪಲ್ಯ ಮಾಡಿದ ಅಪ್ಪುಗೆ ಆ ಟೖಮಲ್ಲೇ ಅಡುಗೆ ಮನೆಯ ಕಷ್ಟಗಳು ಅರಿವಿಗೆ ಬಂದವು. ಬಹುಶಃ ಲೈಫ್‌ನಲ್ಲಿ ಯಾವತ್ತೂ ಇಂಥಾ ಸನ್ನಿವೇಶದಲ್ಲಿ ಸಿಕ್ಕಿಹಾಕಿಕೊಳ್ಳದಿದ್ದ ಅಪ್ಪು ಈ ದಿನಗಳಲ್ಲಿ ಹೆಣ್ಮಕ್ಕಳ ಕಷ್ಟ ಅರ್ಥಮಾಡಿಕೊಂಡಿದ್ದಾರೆ. ಅವರ ಕೆಲಸ ಗ್ರೇಟ್ ಅನ್ನೋದನ್ನು ಮನಸಾರೆ ಒಪ್ಪಿಕೊಂಡಿದ್ದಾರೆ. 

ಹೆಚ್ಚು ದೇಣಿಗೆ ಕೊಟ್ಟಿದ್ಯಾರು? ಕೊಲೆಗೆ ಕಾರಣವಾಯ್ತು ಫ್ಯಾನ್ಸ್ ವಾರ್...

ಮೊದಲೆಲ್ಲ ಅಡುಗೆ ಮನೆ ಅಂದ್ರೆ ನನಗೆ ಸಂಬಂಧ ಪಟ್ಟಿದ್ದಲ್ಲ ಅಂತಿರುತ್ತಿದ್ದ ಉಪ್ಪಿ ಪಾತ್ರೆ ತೊಳೀತಿದ್ದಾರೆ. ರಮೇಶ್ ಅರವಿಂದ್ ಬಟ್ಟೆ ಒಣ ಹಾಕೋದು, ಮಡಿಚೋದು ಇತ್ಯಾದಿ ಮನೆ ಕೆಲಸ ಮಾಡುತ್ತಿದ್ದಾರೆ. ಹೀಗೆ ಒಬ್ಬೊಬ್ಬ ಸ್ಟಾರ್‌ಗಳದ್ದು ಒಂದೊಂದು ಕತೆ. ಸದ್ಯಕ್ಕೀಗ ಸಖತ್ ಫನ್ನಿಯಾಗಿ ಅರವತ್ತೖದು ಸಾವಿರಕ್ಕೂ ಅಧಿಕ ಜನರ ಮೆಚ್ಚುಗೆಗೆ ಕಾರಣವಾಗಿರೋದು ಶ್ರೀ ಮುರಳಿ ಅವರ ಪೋಸ್ಟ್. 

ಲಾಕ್‌ಡೌನ್‌ನಲ್ಲಿ ದಿಂಬು ಹಿಡಿದು ಮುದ್ದಾಡುತ್ತಿರುವ ನಟಿಯರು

ದೊಡ್ಡ ಪಾತ್ರೆಯನ್ನು ಉಜ್ಜುವ ಫೋಟೋ ಹಾಕ್ಕೊಂಡು ಸಖತ್ ಫನ್ನಿ ಡೖಲಾಗ್ ಹೊಡೆದಿದ್ದಾರೆ ಶ್ರೀ ಮುರಳಿ. ‘ಸದ್ಯ ಈ ಲಾಕ್‌ಡೌನ್  ಟೈಮಲ್ಲಿ ನಮ್ಮನೆ ಹೋಂ ರೂಲ್ ಇದೇನೇ. ಊಟ ಬೇಕು ಅಂದ್ರೆ ಪಾತ್ರೆ ಬೆಳಗಲೇಬೇಕು. ಇಲ್ಲಾಂದ್ರೆ ನನ್ ಹೆಂಡ್ತಿ ವಿದ್ಯಾ ಗುರ್ರ್ ಅಂತಾಳೆ. ಈ ಕೆಲಸ ಮಾಡ್ತಿದ್ರೆ ಬೆವರು ಕಿತ್ಕೊಂಡು ಬರುತ್ತೆ ಅಂತ ಗೋಳು ತೋಡಿಕೊಂಡಿದ್ದಾರೆ ಮುರಳಿ. 

 

 

ಇದಕ್ಕೆ ಬಂದಿರೋ ಕಮೆಂಟ್‌ಗಳೂ ಸಖತ್ ಫನ್ನಿಯಾಗಿವೆ. ಮುರಳಿ ಅವರ ಪತ್ನಿ ವಿದ್ಯಾ ಅವರೇ ಮುರಳಿ ಕಾಲೆಳೆಯುತ್ತಾ ಇದಕ್ಕೆ ಕಮೆಂಟ್ ಮಾಡಿದ್ದಾರೆ. ನಮ್ ವಸಿಷ್ಠ ಸಿಂಹ ಅವರಿಗೂ ಮುರಳಿಯ ಈ ಅವಸ್ಥೆ ನಗು ತರಿಸಿದೆ. ಹೆಚ್ಚಿನವರು ಒಳ್ಳೆ ಗಂಡನಾಗ್ತಿದ್ದೀರ ಗುರೂ, ಆಲ್ ದಿ ಬೆಸ್ಟ್ ಅಂದಿದ್ದಾರೆ. 

ವಿದ್ಯಾ ಮತ್ತು ಶ್ರೀಮುರಳಿ ದಾಂಪತ್ಯ ಜೀವನಕ್ಕೆ ಇಪ್ಪತ್ತು ವಸಂತಗಳು ತುಂಬಿದವು. ಆದರೆ ಈ ಜೋಡಿಯನ್ನು ನೋಡಿದರೆ ನಿಮಗೆ ಆ ಭಾವನೆ ಬಾರದು. ಜಸ್ಟ್‌ ಮ್ಯಾರೀಡ್ ಕಪಲ್‌ಗಳಿಗಿಂತ ಯಾವುದ್ರಲ್ಲೂ ಕಮ್ಮಿಯಿಲ್ಲದ ಜೋಡಿ ಇವರಿಬ್ಬರದು. ಕಾಲೇಜ್ ಟೖಮಲ್ಲೇ ಶ್ರೀ ಮುರಳಿ ಅವರು ವಿದ್ಯಾಗೆ ಪ್ರೊಪೋಸ್ ಮಾಡಿದ್ರಂತೆ. ಆಮೇಲೆ ಮನೆಯವರ ಒಪ್ಪಿಗೆ ಪಡೆದು ಇವರಿಬ್ಬರೂ ಮದುವೆಯಾದರು. ತಮ್ಮ ಇಪ್ಪನೇ ವರ್ಷದ ಆ್ಯನಿವರ್ಸರಿಗೆ ಮಾಡಿಸಿರೋ ಫೋಟೋ ಶೂಟ್‌ನಲ್ಲಿ ಈ ಜೋಡಿ ಮುದ್ದಾಗಿ ಸೆರೆಯಾಗಿದ್ದಾರೆ. ಶೂಟಿಂಗ್, ಸಿನಿಮಾಗಳ ನಡುವೆ ಒಂಚೂರು ಬಿಡುವು ಸಿಕ್ಕರೂ ಫ್ಯಾಮಿಲಿಗೆ ಮುಡಿಪಾಗಿಡುವ ಮುರಳಿಗೆ ಇಬ್ಬರು ಮಕ್ಕಳು. ಮಗಳು ಅಥೀವಾ, ಮಗ ಅಗಸ್ತ್ಯ. ಮಕ್ಕಳನ್ನು ಬಹಳ ಪ್ರೀತಿಸುವ ಮುರಳಿಗೆ ಈ ಟೖಮ್ ನಲ್ಲಿ ಮಕ್ಕಳ ಜೊತೆಗೆ ಬೇಕಾದಷ್ಕಾಟು ಕಾಲ ಕಳೆಯುವ ಅವಕಾಶ ಸಿಕ್ಕಿದ್ದಕ್ಕೂ ಖುಷಿ ಇದೆ. 

"