Grandson of Legendary Singer: ಲೆಜೆಂಡರಿ ಗಾಯಕರ ಮೊಮ್ಮಗನ ಅವರ ಸಿನಿಮಾ ಜೀವನದ ಏರಿಳಿತಗಳನ್ನು ಈ ಲೇಖನವು ವಿವರಿಸುತ್ತದೆ. ಯಶಸ್ವಿ ಚಿತ್ರಗಳ ನಡುವೆಯೂ ಹಲವು ಸೋಲುಗಳನ್ನು ಕಂಡ ನಟ, ಇಂದು ಪೋಷಕ ಮತ್ತು ಖಳನಾಯಕ ಪಾತ್ರಗಳಲ್ಲಿ ಗುರುತಿಸಿಕೊಂಡಿದ್ದಾರೆ.
ಸಕ್ಸಸ್ ಅನ್ನೋದು ಅಷ್ಟು ಸುಲಭವಾಗಿ ಸಿಗಲ್ಲ ಅನ್ನೋದು ಎಲ್ಲರುಗೂ ತಿಳಿದಿರುವ ವಿಚಾರ. ಸ್ಟಾರ್ ಕಲಾವಿದರು ಮಕ್ಕಳು ಸಿನಿಮಾ ಜಗತ್ತಿಗೆ ಬಂದಾಗ ಆರಂಭದಲ್ಲಿ ಒಂದೆರಡು ಸಿನಿಮಾ ಸಿಗಬಹುದು. ಆದ್ರೆ ಭವಿಷ್ಯದಲ್ಲಿ ಅವಕಾಶಗಳ ಕೊರತೆಯಿಂದಾಗಿ ತೆರೆಯ ಹಿಂದೆ ಸರಿಯಬೇಕಾಗುತ್ತದೆ. ಇಂತಹ ಅನೇಕ ನಟರನ್ನು ಬಾಲಿವುಡ್ ಸೇರಿದಂತೆ ಎಲ್ಲಾ ಭಾಷೆಯ ಸಿನಿಮಾಗಳಲ್ಲಿ ನೋಡಬಹುದು. ನಟರಾದ ಫರ್ದೀನ್ ಖಾನ್, ಜಯೇದ್ ಖಾನ್ ಮತ್ತು ತುಷಾರ್ ಕಪೂರ್ ಕೌಟುಂಬಿಕ ಹಿನ್ನೆಲೆ ಚಿತ್ರರಂಗಕ್ಕೆ ಬಂದಿದ್ದರು. ಸ್ಟಾರ್ ಕುಟುಂಬದಿಂದಾಗಿ ಈ ಕಲಾವಿದರ ಎಂಟ್ರಿಯೂ ಗ್ರ್ಯಾಂಡ್ ಆಗಿತ್ತು. ಇಂದು ಅವಕಾಶಗಳ ಕೊರತೆಯನ್ನು ಎದುರಿಸುತ್ತಿದ್ದಾರೆ. ಇಂದು ನಾವು ಹೇಳುತ್ತಿರುವ ಸ್ಪುರದ್ರೂಪಿ ಚೆಲುವನ ಕಥೆ ಇದಕ್ಕಿಂತ ಕೊಂಚ ಭಿನ್ನವಗಿದೆ. ಲೆಜೆಂಡರಿ ಗಾಯಕನ ಮೊಮ್ಮಗನಾಗಿರುವ ಈ ನಟ ಇಂದಿಗೂ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಆದ್ರೆ ಹೀರೋ ಆಗಿ ಅಲ್ಲ. ಬದಲಾಗಿ ಪೋಷಕ, ಖಳನಾಯಕನಾಗಿ ಈ ನಟ ಕಾಣಿಸಿಕೊಳ್ಳುತ್ತಿದ್ದಾರೆ.
2007ರಲ್ಲಿ ಬಿಡುಗಡೆಯಾದ 'ಜಾನಿ ಗದ್ದಾರ್' ಸಿನಿಮಾ ಮೂಲಕ ನೀಲ್ ನಿತಿನ್ ಮುಕೇಶ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಶ್ರೀರಾಮ್ ರಾಘವನ್ ನಿರ್ದೇಶನ ಹೊಂದಿದ್ದ ಈ ಸಿನಿಮಾದಲ್ಲಿ ಧರ್ಮೇಂದ್ರ, ಜಾಕಿರ್ ಹುಸೈನ್, ವಿನಯ್ ಪಾಠಕ್ ಮತ್ತು ಗೋವಿಂದ್ ನಾಮ್‌ದೇವ್ ಅಂತಹ ಹಿರಿಯ ಕಲಾವಿದರು ನಟಿಸಿದರೂ ಚಿತ್ರ ಸೋತಿತು. ವರದಿಗಳ ಪ್ರಕಾರ್, ನೀಲ್ ನಿತಿನ್ ಮುಕೇಶ್ ಮೊದಲ ಸಿನಿಮಾ 5.68 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು.
ಮೊದಲ ಸಿನಿಮಾದ ಮಿಶ್ರ ಪ್ರತಿಕ್ರಿಯೆಗಳ ನಡುವೆ ನೀಲ್ ನಟನೆಯ ಎರಡನೇ ಸಿನಿಮಾ 'ಆ ದೇಖೇಂ ಜರಾ' ಬಿಡುಗಡೆಯಾಗಿತ್ತು. ವರದಿಗಳ ಪ್ರಕಾರ ಇದು ಡಿಸಾಸ್ಟರ್ ಆಗಿತ್ತು. 2009ರಲ್ಲಿ ಬಿಡುಗಡೆಯಾದ ನ್ಯೂಯಾರ್ಕ್ ಸಿನಿಮಾ ನೀಲ್ ನಿತಿನ್ ಮುಕೇಶ್‌ಗೆ ಮೊದಲ ಗೆಲುವಿನ ಅನುಭವ ನೀಡಿತ್ತು. ಈ ಚಿತ್ರದಲ್ಲಿ ಜಾನ್ ಅಬ್ರಾಹಂ, ಇರ್ಫಾನ್ ಖಾನ್, ಕತ್ರಿನಾ ಕೈಫ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದರು. ನೀಲ್ ನಿತಿನ್ ಮುಕೇಶ್‌ಗೆ ನ್ಯೂಯಾರ್ಕ್ ಸಿನಿಮಾ ಹೊಸ ಗುರುತು ಮತ್ತು ಜನಪ್ರಿಯತೆಯನ್ನು ತಂದುಕೊಟ್ಟಿತು. ಇದಾದ ಬಳಿಕ ಹಲವು ಬಾಲಿವುಡ್ ತಾರೆಯರ ಜೊತೆ ಕೆಲಸ ಮಾಡುವ ಅವಕಾಶ ಸಿಕ್ಕಿತು.
ಇದನ್ನೂ ಓದಿ: 16 ಕೋಟಿಯ ಕನ್ನಡ ಸಿನಿಮಾ ಗಳಿಸಿದ್ದು 300 ಕೋಟಿ; ನಟನ ಆಕ್ಟಿಂಗ್‌ಗೆ ಬೆರಗಾದ ಸಿನಿ ಲೋಕ
ನ್ಯೂಯಾರ್ಕ್ ಬಳಿಕ ಬಂದ ಜೈಲ್, ಲಫಂಗೇ ಪರಿಂದೇ, 7 ಖೂನ್ ಮಾಫ್, ಪ್ಲೇಯರ್ಸ್, ಡೇವಿಡ್, 3G ಮತ್ತು ಶಾರ್ಟ್ಸ್ ರೊಮಿಯೋ ಸಿನಿಮಾಗಳು ಸೋಲಿನ ಪಟ್ಟಿಗೆ ಸೇರ್ಪಡೆಯಾದವು. ಈ ಯಾವ ಸಿನಿಮಾಗಳು ಬಾಕ್ಸ್ ಆಫಿಸ್‌ನಲ್ಲಿ ಸದ್ದು ಮಾಡಲಿಲ್ಲ. 2015ರಲ್ಲಿ ಬಿಡುಗಡೆಯಾದ 'ಪ್ರೇಮ್ ರತನ್ ಧನ್ ಪಾಯೋ' ನೀಲ್ ನಿತಿನ್ ಮುಕೇಶ್ ನೆಗೆಟಿವ್ ರೋಲ್ ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಗಿತ್ತು. ಪ್ಲೇಯರ್ಸ್ ಸಿನಿಮಾದಲ್ಲಿಯೂ ವಿಲನ್ ಆಗಿಯೇ ನೀಲ್ ನಿತಿನ್ ಮುಕೇಶ್ ನಟಿಸಿದ್ದರು. ಇತ್ತೀಚೆಗೆ ಬಿಡುಗಡೆಯಾದ ಮಾಧವನ್ ನಟನೆಯ ಹಿಸಾಬ್ ಬಾರಾಬರ್ ಸಿನಿಮಾದಲ್ಲಿ ನೀಲ್ ನಿತಿನ್ ಮುಕೇಶ್ ನಟಿಸಿದ್ದಾರೆ.
ಇದನ್ನೂ ಓದಿ: ಇಂಗ್ಲಿಷ್ ಸಿನಿಮಾ ಮೀರಿಸುವಂತಹ 9 ಬ್ರಿಲಿಯಂಟ್ ಥ್ರಿಲ್ಲರ್ ಮಲಯಾಳಂ ಚಿತ್ರಗಳು
ಖ್ಯಾತ ಗಾಯಕ ಮುಕೇಶ್ ಅವರ ಮೊಮ್ಮಗನಾಗಿರುವ, ಹಿನ್ನೆಲೆ ಗಾಯಕ ನಿತಿನ್ ಪುತ್ರ ನೀಲ್ ನಿತಿನ್ ಸಿಕ್ಕ ಅವಕಾಶಗಳನ್ನು ಮಿಸ್ ಮಾಡಿಕೊಳ್ಳದೇ ನಟಿಸುತ್ತಿದ್ದಾರೆ. ಸದ್ಯ ಖಳನಾಯಕನಾಗಿಯೇ ಬಾಲಿವುಡ್ ಅಂಗಳದಲ್ಲಿ ಮಿಂಚುತ್ತಿರುವ 47 ವರ್ಷದ ನೀಲ್ ನಿತಿನ್ ಮುಕೇಶ್ ವಿವಾಹಿತರು. ಸಿನಿಮಾ ಹಿನ್ನೆಲೆ ಇಲ್ಲದ ಯುವತಿಯನ್ನು ನೀಲ್ ಮದುವೆಯಾಗಿದ್ದು, ದಂಪತಿಗೆ ಓರ್ವ ಮಗಳಿದ್ದಾಳೆ. ಖಾಸಗಿ ಜೀವನವನ್ನು ಮಾಧ್ಯಮದಿಂದ ದೂರವಿಟ್ಟಿದ್ದಾರೆ.
