ಪವಾಡಗಳು ಸಂಭವಿಸುತ್ತವೆ, ನಾನು ಲೆಜೆಂಡ್ ಆಗುವುದಕ್ಕೆ ಅದೇ ಕಾರಣ; ಸೂಪರ್ ಸ್ಟಾರ್ ನಟ ರಜನಿಕಾಂತ್
ನಟ ರಜನಿಕಾಂತ್ ಅವರ ಪ್ರಸಿದ್ಧಿ, ಖ್ಯಾತಿಗಳು ದೇಶವನ್ನು ಮೀರಿ ವಿದೇಶಗಳಿಗೂ ವ್ಯಾಪಿಸಿದೆ. ಸದ್ಯ ನಟ ರಜನಿಕಾಂತ್ ತಮ್ಮ ತಲೈವರ್ 170(Thalaivar 170) ಚಿತ್ರದ ಶೂಟಿಂಗ್‌ನಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಮಲಯಾಳಂ ಪ್ರಸಿದ್ಧ ನಟಿ, ಗಾಯಕಿ ಮಂಜು ವಾರಿಯರ್ ರಜನಿಕಾಂತ್ ಎದುರು ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಭಾರತದ ಸೂಪರ್ ಸ್ಟಾರ್ ನಟ ರಜನಿಕಾಂತ್ ಅವರು ವೇದಿಕೆಯೊಂದರಲ್ಲಿ ಮಾತನಾಡುತ್ತ ಮಿರಾಕಲ್ ಸಂಭವಿಸುತ್ತದೆ' ಎಂದಿದ್ದಾರೆ. ಅದಕ್ಕೆ ತಾಜಾ ಉದಾಹರಣೆಯನ್ನು ಕೊಟ್ಟಿದ್ದಾರೆ ನಟ ರಜನಿಕಾಂತ್. ದೊಡ್ಡ ಸಮಾರಂಭದಲ್ಲಿ, ತಮಗೆ ಅವಾರ್ಡ್ ಬಂದ ಸಂದರ್ಭದಲ್ಲಿ ಮಾತನಾಡುತ್ತಿದ್ದ ಲೆಜೆಂಡ್ ನಟ ರಜನಿಕಾಂತ್, ಮಿರಾಕಲ್‌ಗಳು ಸಂಭವಿಸುತ್ತವೆ, ಸಾಮಾನ್ಯ ಬಸ್ ಕಂಡಕ್ಟರ್ ಒಬ್ಬ ಇವತ್ತು ಲೆಜೆಂಡ್‌ಗಳ ಸಾಲಿಗೆ ಸೇರಿಕೊಂಡಿರುವುದು ಪವಾಡವೇ ಆಗಿದೆ' ಎಂದಿದ್ದಾರೆ ನಟ ರಜನಿಕಾಂತ್.
ಸನ್ಮಾನ ಸಮಾರಂಭದಲ್ಲಿ ಮಾತನಾಡುತ್ತ ನಟ ರಜನಿಕಾಂತ್ 'ನನ್ನ ಯಶಸ್ಸನ್ನು, ನನಗೆ ಬಂದ ಬಹುಮಾನಗಳನ್ನು ನಾನು ನನ್ನ ಸಹೋದರ, ಅಪ್ಪ-ಅಮ್ಮರಿಗೆ ಹಾಗೂ ತಮಿಳು ಜನತೆಗೆ ಡೆಡಿಕೇಟ್ ಮಾಡುತ್ತೇನೆ. ತಮಿಳು ಜನರ ಪ್ರೀತಿ, ವಿಶ್ವಾಸದ ಬೆಂಬಲ ಇಲ್ಲದಿದ್ದರೆ ನಾನು ಖಂಡಿತವಾಗಿ ಈ ಹಂತಕ್ಕೆ ಬೆಳೆಯಲು ಸಾಧ್ಯವೇ ಇರಲಿಲ್ಲ. ನಾನು ಇಂದು ಇಂತಹ ವೇದಿಕೆಗಳಲ್ಲಿ ನಿಂತಿದ್ದೇನೆ, ಮಾತನಾಡುತ್ತಿದ್ದೇನೆ ಎಂದರೆ ಅದು ಅವರೆಲ್ಲರ ಬೆಂಬಲದಿಂದಲೇ ಸಾಧ್ಯವಾಗಿರುವುದು' ಎಂದಿದ್ದಾರೆ ತಮಿಳು ಜನರ ಆರಾಧ್ಯ ದೈವ, ನಟ ರಜನಿಕಾಂತ್.
ಯುವಜನತೆ ಪ್ರಾಮಾಣಿಕತೆ ಮತ್ತು ಪರಿಶುದ್ಧ ಹೃದಯ ಹೊಂದಿರುವುದು ಅಗತ್ಯ; ಬಾಲಿವುಡ್ ಕಿಂಗ್ ಖಾನ್ ಶಾರುಖ್
ನಟ ರಜನಿಕಾಂತ್ ಅವರ ಪ್ರಸಿದ್ಧಿ, ಖ್ಯಾತಿಗಳು ದೇಶವನ್ನು ಮೀರಿ ವಿದೇಶಗಳಿಗೂ ವ್ಯಾಪಿಸಿದೆ. ಸದ್ಯ ನಟ ರಜನಿಕಾಂತ್ ತಮ್ಮ ತಲೈವರ್ 170(Thalaivar 170) ಚಿತ್ರದ ಶೂಟಿಂಗ್‌ನಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಮಲಯಾಳಂ ಪ್ರಸಿದ್ಧ ನಟಿ, ಗಾಯಕಿ ಮಂಜು ವಾರಿಯರ್ ರಜನಿಕಾಂತ್ ಎದುರು ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್, ರಾಣಾ ದಗ್ಗುಬಾಟಿ ಸೇರಿದಂತೆ ಹಲವು ಖ್ಯಾತ ನಟನಟಿಯರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಮುಂದಿನ ವರ್ಷ ಚಿತ್ರವು ತೆರೆಗ ಬರಲಿದೆ.
ದಾಂಪತ್ಯಕ್ಕೆ ಕಾಲಿಟ್ಟ 'ಮುಂಗಾರು ಮಳೆ' ಹುಡುಗಿ ಪೂಜಾ ಗಾಂಧಿಗೆ ವಿಶ್ ಮಾಡಿದ ಸಿನಿ ಸೆಲೆಬ್ರಿಟಿಗಳು
ಒಟ್ಟಿನಲ್ಲಿ, ರಜನಿಕಾಂತ್ ಪವಾಡ ಸಂಭವಿಸುತ್ತದೆ ಎಂದಿದ್ದಕ್ಕೆ, ಹಲವರು 'ಹೌದು, ಸ್ವತಃ ರಜನಿಕಾಂತ್ ಒಂದು ಪವಾಡ' ಎನ್ನುತ್ತಿದ್ದಾರೆ. ನಟ ರಜನಿಕಾಂತ್ ಸಾಧನೆ ಹಾಗೂ ವ್ಯಕ್ತಿತ್ವವನ್ನು ನೋಡಿದರೆ ಅವರನ್ನು ಪವಾಡ ಎನ್ನಲೇಬೇಕು. ಅತ್ಯಂತ ಎತ್ತರಕ್ಕೆ ಏರಿರುವ ನಟರಾದರೂ ನಯವಿನಯದಿಂದ ಮಾತನಾಡುತ್ತಾರೆ, ಸಾಮಾನ್ಯ ಜನತೆಗೂ ತುಂಬಾ ಗೌರವ ಕೊಡುತ್ತಾರೆ. ಸಾಮಾಜಿಕ ಕಳಕಳಿಯಂತೂ ರಜನಿಕಾಂತ್ ಅವರಿಗೆ ತುಂಬಾ ಹೆಚ್ಚೇ ಇದೆ.
ಚಾಲೆಂಜಿಂಗ್ ಸ್ಟಾರ್ 'ಕಾಟೇರ' ಬಿಡುಗಡೆ ಘೋಷಣೆ; ಮುಗಿಲು ಮುಟ್ಟಿದ ದರ್ಶನ್ ಅಭಿಮಾನಿಗಳ ಸಂತಸ!