Asianet Suvarna News Asianet Suvarna News

ಆಸ್ಕರ್‌ ಪ್ರಶಸ್ತಿ ವಿಜೇತ ನಟನ ಅನುಮಾನಾಸ್ಪದ ಸಾವು; ವಿಚಿತ್ರ ಕೇಸಿನಲ್ಲಿ ಸಿಕ್ಕಿಹಾಕಿಕೊಂಡಿದ್ರಂತೆ!

ಸ್ಥಳೀಯ ಸುದ್ದಿ ಸಂಸ್ಥೆಗಳು ವರದಿ ಪ್ರಕಾರ, 48 ವರ್ಷದ ಲೀ ಸೌತ್ ಕೊರಿಯಾದ ರಾಜಧಾನಿ ಸಿಯೋಲ್‌ನಲ್ಲಿ ಕಾರಿನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಲೀ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆಯೂ ಇದೆ. 

Lee Sun kyun South Korean Oscar award winner actor dies inside the car srb
Author
First Published Dec 27, 2023, 10:03 PM IST

ಆಸ್ಕರ್ ಪ್ರಶಸ್ತಿ ವಿಜೇತ ನಟರೊಬ್ಬರು ನಿಗೂಢವಾಗಿ ಸಾವನ್ನಪ್ಪಿದ್ದಾರೆ. ದಕ್ಷಿಣ ಕೊರಿಯಾದ ಸೂಪರ್ ಹಿಟ್ 'ಪ್ಯಾರಾಸೈಟ್' ಸಿನಿಮಾದಲ್ಲಿ ನಟಿಸಿ ತಮ್ಮ ಅಮೋಘ ಪ್ರತಿಭೆಯಿಂದ ಸಿನಿಮಾ ಗೆಲ್ಲಿಸಿ ಆಸ್ಕರ್ ಪ್ರಶಸ್ತಿ ಪಡೆದು ಜಗತ್ಪ್ರಸಿದ್ಧಿ ಪಡೆದಿದ್ದ ನಟ ಲೀ ಸನ್ ಕ್ಯೂನ್ ನಿಧನರಾಗಿದ್ದಾರೆ. ಕಾರಿನೊಳಗೆ ಸೌತ್ ಕೊರಿಯನ್ ನಟನ ಮೃತದೇಹ ಪತ್ತೆಯಾಗಿದ್ದು, ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಲೀ ನಟನೆಯ ಸೌತ್ ಕೊರಿಯನ್ ಚಿತ್ರ 'ಪ್ಯಾರಾಸೈಟ್' ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಗೆದ್ದುಕೊಂಡಿತ್ತು.

ಸ್ಥಳೀಯ ಸುದ್ದಿ ಸಂಸ್ಥೆಗಳು ವರದಿ ಪ್ರಕಾರ, 48 ವರ್ಷದ ಲೀ ಸೌತ್ ಕೊರಿಯಾದ ರಾಜಧಾನಿ ಸಿಯೋಲ್‌ನಲ್ಲಿ ಕಾರಿನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಲೀ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆಯೂ ಇದೆ. ಗಾಂಜಾ ಸೇರಿದಂತೆ ಸೈಕೋಆಕ್ಟಿವ್ ಡ್ರಗ್ಸ್ ಸೇವಿಸಿದ್ದ ಆರೋಪ ಹೊತ್ತಿದ್ದ ಲೀ ವಿಚಾರಣೆಯ ಮರುದಿನವೇ ಶವವಾಗಿ ಪತ್ತೆಯಾಗಿರುವುದು ಗಮನಿಸಬೇಕಾದ ಸಂಗತಿ ಎನ್ನಲಾಗುತ್ತಿದೆ. ಲೀ ಮರಣದ ನಿಖರ ಕಾರಣ ಇನ್ನಷ್ಟೇ ತಿಳಿಯಬೇಕಿದೆ. 

ಗುಟ್ಟಾಗಿ ಮದುವೆಯಾದ್ರು ಶ್ರುತಿ ಹಾಸನ್; ಎಲ್ಲವನ್ನೂ ಹಂಚಿಕೊಳ್ಳುವ ಹುಡುಗಿ ಯಾಕೆ ಹೀಗೆ ಮಾಡಿದ್ರು!

ಸೆಂಟ್ರಲ್ ಸಿಯೋಲ್‌ನ ಪಾರ್ಕ್‌ ಬಳಿ ನಿಂತಿದ್ದ ಕಾರಿನಲ್ಲಿ ನಟ ಲೀ ಸನ್ ಕ್ಯೂನ್ ಮೃತದೇಹವನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಬಾರ್ ನೌಕರನೊಂದಿಗೆ ಡ್ರಗ್ಸ್ ಸೇವಿಸಿದ ಆರೋಪ ಲೀ ಮೇಲಿತ್ತು. ಇದಲ್ಲದೇ, ತನ್ನ ಮನೆಯ ಬಳಿ ಲೀ ಹಲವು ಬಾರಿ ಡ್ರಗ್ಸ್ ಸೇವಿಸಿದ್ದಾಗಿ ಮಹಿಳೆಯೊಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ.

ಐಶ್ವರ್ಯ ರೈ ಬೇರೆ ವಾಸವಿದ್ರೂ ಅಭಿಷೇಕ್ ಡೀವೋರ್ಸ್ ಕೊಡುತ್ತಿಲ್ಲ; ಸೀಕ್ರೆಟ್‌ ಬಿಚ್ಚಿಟ್ಟ ನೆಟ್ಟಿಗರು!

ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಅಕ್ಟೋಬರ್‌ನಿಂದಲೂ ಡ್ರಗ್ಸ್ ಪ್ರಕರಣದ ತನಿಖೆ ನಡೆಯುತ್ತಿದೆ. ಆದರೆ, ಇನ್ನೂ ಕೇಸ್ ಬಗ್ಗೆ ಅಂತಿಮ ವರದಿ ಬಂದಿರಲಿಲ್ಲ. ಅಷ್ಟರಲ್ಲೇ ನಟನ ಸಾವಿನ ಸುದ್ದಿ ಬರಸಿಡಿಲಿನಂತೆ ಅಪ್ಪಳಿಸಿದೆ. ಈಗ ನಟನ ಸಾವಿನ ತನಿಖೆ ಮಾಡಬೇಕಾಗಿರುವುದರ ಜತೆಗೆ ಇನ್ನುಳಿದ ಕೇಸ್ ವಿಚಾರಣೆಯೂ ನಡೆಯಬೇಕಿದೆ.

ಬ್ರಿಟಿಷ್ ಮೂಲವನ್ನು ಒಪ್ಪಿಕೊಂಡ್ರಾ ಆಲಿಯಾ ಭಟ್; ಮಹೇಶ್ ಭಟ್ ಮಗಳ ಕಥೆ ವಿಚಿತ್ರವಾಗಿದೆ ಅಂದ್ಕೊಂಡ್ರಲ್ವಾ!

ಏಕೆಂದರೆ, ಆ ಮೂಲಕ ಡ್ರಗ್ಸ್ ಜಾಲದ ಪತ್ತೆಗೂ ಅಲ್ಲಿನ ಪೊಲೀಸರು ಮುಂದಾಗಿದ್ದಾರೆ. ಒಟ್ಟಿನಲ್ಲಿ ಈಗ ನಟನ ಸಾವು ಸೌತ್ ಕೊರಿಯಾದಲ್ಲಿ ಭಾರೀ ಸುದ್ದಿ ಆಗತೊಡಗಿದೆಯಂತೆ. ಮುಂದೇನು, ಸತ್ಯ ಯಾವುದು ಎನ್ನುವುದು ಸದ್ಯವೇ ತಿಳಿದುಬರಲಿದೆ ಎನ್ನಲಾಗುತ್ತಿದೆ.

Follow Us:
Download App:
  • android
  • ios